ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾ ಮಣಿಸಿ ಟ್ರೋಫಿ ಗೆಲ್ಲುತ್ತಾ ಭಾರತ: ಚಿನ್ನಸ್ವಾಮಿ ಕ್ರೀಡಾಂಗಣದ ಅಂಕಿಅಂಶಗಳು ಹೇಳೋದೇನು?

Ind vs SA 5th t20I: Team Indias T20I records, head to head and stats at M Chinnaswamy Stadium, Bangalore

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಈಗ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸತತವಾಗಿ ಸೋಲು ಅನುಭವಿಸಿದ್ದ ಕಾರಣ 2-0 ಅಂತರದಿಂದ ಹಿನ್ನಡೆಯಲ್ಲಿದ್ದು ಬಳಿಕ ಸರಣಿಯಲ್ಲಿ ತಿರುಗಿ ಬಿದ್ದಿದೆ. ಸರಣಿಯ ಮೂರನೇ ಹಾಗೂ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು ಇದರ ಪರಿಣಾಮವಾಗಿ ಸರಣಿ ಈಗ 2-2 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ರೋಚಕತೆಯನ್ನು ಸೃಷ್ಟಿಸಿಕೊಂಡಿದೆ.

ಈ ಸರಣಿಯ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು ಭಾನುವಾರ ಈ ಪಂದ್ಯ ನಡೆಯಲಿದೆ. ಸುದೀರ್ಘ ಕಾಲದ ಬಳಿಕ ಬೆಂಗಳುರಿನ ಚಿನ್ನಸ್ವಾಮಿ ಕ್ರೀಡಾಂಗಣ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಸಾಕ್ಷಿಯಾಗಲಿದ್ದು ಅಭಿಮಾನಿಗಳ ಕಾತುರತೆ ಹೆಚ್ಚಾಗಿದೆ. ಅದರಲ್ಲೂ ನಿರ್ಣಾಯಕ ಪಂದ್ಯಕ್ಕೆ ಸಾಕ್ಷಿಯಾಗುತ್ತಿರುವುದು ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸಿದೆ.

498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ

ಹಾಗಾದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ದಾಖಲೆಗಳು ಹೇಗಿದೆ. ಅಂಕಿಅಂಶಗಳು ಏನು ಹೇಳುತ್ತದೆ? ಈ ಮೈದಾನದಲ್ಲಿ ಭಾರತದ ದಾಖಲೆಗಳು ಹೇಗಿದೆ? ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಭಾರತ vs ದ. ಆಪ್ರಿಕಾ ಹೆಡ್ ಟು ಹೆಡ್

ಭಾರತ vs ದ. ಆಪ್ರಿಕಾ ಹೆಡ್ ಟು ಹೆಡ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಬೆಂಗಳುರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ ಒಂದು ಬಾರಿ ಮಾತ್ರವೇ ಮೂಖಾಮುಖಿಯಾಗಿದೆ. ಆದರೆ ಇದರಲ್ಲಿ ಭಾರತ ತಂಡ ನಿರಾಸೆ ಅನುಭವಿಸಿದೆ. 2019ರಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಿದೆ.

ಬೆಂಗಳೂರಿನಲ್ಲಿ ಭಾರತದ ಟಿ20 ಫಲಿತಾಂಶ

ಬೆಂಗಳೂರಿನಲ್ಲಿ ಭಾರತದ ಟಿ20 ಫಲಿತಾಂಶ

ಭಾರತ ಬೆಂಗಳೂರಿನಲ್ಲಿ ಮೊದಲ ಟಿ20 ಪಂದ್ಯವನ್ನಾಡಿದ್ದು 2012ರಲ್ಲಿ ಪಾಕಿಸ್ತಾನದ ವಿರುದ್ಧ. ಆ ಪಂದ್ಯದಲ್ಲಿ ಭಾರತ ಎದುರಾಳಿ ಪಾಕಿಸ್ತಾನಕ್ಕೆ 5 ವಿಕೆಟ್‌ಗಳ ಅಂತರದಿಂದ ಶರಣಾಗಿತ್ತು. ಒಟ್ಟಾರೆಯಾಗಿ ನೋಡಿದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ದಾಖಲೆ ಹೇಳಿಕೊಳ್ಳುವಂತಿಲ್ಲ. ಈವರೆಗೆ ಭಾರತ ಇಲ್ಲಿ 5 ಪಂದ್ಯಗಳನ್ನು ಆಡಿದ್ದು 2 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಟಿ20I ಬ್ಯಾಟಿಂಗ್ ಅಂಕಿಅಂಶಗಳು

ಚಿನ್ನಸ್ವಾಮಿ ಕ್ರೀಡಾಂಗಣದ ಟಿ20I ಬ್ಯಾಟಿಂಗ್ ಅಂಕಿಅಂಶಗಳು

ಗರಿಷ್ಠ ಮೊತ್ತ: ಇಂಗ್ಲೆಂಡ್‌ ತಂಡದ ವಿರುದ್ಧ ಭಾರತ 202/6 ರನ್ ಗಳಿಸಿದ್ದು ಇಲ್ಲಿನ ಹೈಯೆಸ್ಟ್ ಸ್ಕೋರ್ ಆಗಿದೆ
ಕಡಿಮೆ ಮೊತ್ತ: ಕಡಿಮೆ ಮೊತ್ತ ಗಳಿಸಿದ ದಾಖಲೆ ಶ್ರೀಲಂಕಾ ಹೆಸರಿನಲ್ಲಿದ್ದು ವೆಸ್ಟ್ ಇಂಡೀಸ್ ವಿರುದ್ಧ 122/9 ರನ್ ಇಲ್ಲಿನ ಕನಿಷ್ಠ ಮೊತ್ತವಾಗಿದೆ.
ಅತ್ಯಧಿಕ ಜೊತೆಯಾಟ: ಭಾರತದ ವಿರುದ್ಧ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಹಾಗೂ ಶೋಯೆಬ್ ಮಲಿಕ್ 106 ರನ್‌ಗಳ ಜೊತೆಯಾಟ
ಭಾರತದ ಪರ ಅತ್ಯಧಿಕ ಜೊತೆಯಾಟ: ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಆಸ್ಟ್ರೇಲಿಯಾ ವಿರುದ್ಧ 106 ರನ್‌ಗಳ ಜೊತೆಯಾಟ

ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟಿಂಗ್ ದಾಖಲೆಗಳು

ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟಿಂಗ್ ದಾಖಲೆಗಳು

ಅತಿ ಹೆಚ್ಚು ರನ್‌ ಗಳಿಸಿ ಆಟಗಾರ: ಗ್ಲೆನ್ ಮ್ಯಾಕ್ಸ್‌ವೆಲ್: ಪಂದ್ಯ 2, ರನ್‌-139
ಭಾರತ ಪರ ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ: ಪಂದ್ಯ 5: ರನ್-116
ಗರಿಷ್ಠ ಸ್ಕೋರ್: ಗ್ಲೆನ್ ಮ್ಯಾಕ್ಸ್‌ವೆಲ್-113 ರನ್
ಭಾರತದ ಪರ ಗರಿಷ್ಠ ಸ್ಕೋರ್: ವಿರಾಟ್ ಕೊಹ್ಲಿ- 72 ರನ್
ಅತಿ ಹೆಚ್ಚು ಸಿಕ್ಸರ್ : ಗ್ಲೆನ್ ಮ್ಯಾಕ್ಸ್‌ವೆಲ್- 11 ಸಿಕ್ಸರ್
ಭಾರತದ ಪರ ಅತಿ ಹೆಚ್ಚು ಸಿಕ್ಸರ್: ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ: ತಲಾ 7 ಸಿಕ್ಸರ್
ಅತ್ಯಧಿಕ ಸ್ಟ್ರೈಕ್ ರೇಟ್: ಯುವರಾಜ್ ಸಿಂಗ್-270

Rohit Sharma ಈಗ ಏನು ಮಾಡುತ್ತಿದ್ದಾರೆ ನೋಡಿ | *Cricket | OneIndia Kannada
ಬೆಂಗಳೂರಿನಲ್ಲಿ ಟಿ20ಐ ಬೌಲಿಂಗ್ ದಾಖಲೆಗಳು

ಬೆಂಗಳೂರಿನಲ್ಲಿ ಟಿ20ಐ ಬೌಲಿಂಗ್ ದಾಖಲೆಗಳು

ಅತಿ ಹೆಚ್ಚು ವಿಕೆಟ್‌: ಯುಜುವೇಂದ್ರ ಚಹಾಲ್: 2 ಪಂದ್ಯಗಳಲ್ಲಿ 6 ವಿಕೆಟ್‌
ಅತ್ಯುತ್ತಮ ಬೌಲಿಂಗ್ ಅಂಕಿಅಂಶ: ಯುಜ್ವೇಂದ್ರ ಚಹಾಲ್: 6/25
ಅತ್ಯುತ್ತಮ ಎಕಾನಮಿ: ಭುವನೇಶ್ವರ್ ಕುಮಾರ್: 2.25

Story first published: Saturday, June 18, 2022, 13:41 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X