ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಟಿ20, ODI ತಂಡಕ್ಕೆ ಆಯ್ಕೆಯಾಗದ ನಂತರ ಶಾಯರಿ ಮೂಲಕ ಹತಾಶೆ ಹೊರಹಾಕಿದ ಪೃಥ್ವಿ ಶಾ

IND vs SL: Prithvi Shaw Vents Frustration Through Shayari After Being Left Out of T20, ODI Squads

ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಗಾಗಿ ಭಾರತೀಯ ಪುರುಷರ ತಂಡವನ್ನು ಎರಡು ದಿನಗಳ ಹಿಂದೆ ಪ್ರಕಟಿಸಲಾಯಿತು ಮತ್ತು ಆ ತಂಡಗಳಲ್ಲಿ ಪೃಥ್ವಿ ಶಾ ಅವರ ಹೆಸರು ಕಾಣೆಯಾಗಿದೆ.

ಭಾರತ ಟಿ20 ತಂಡವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದರೆ, ರೋಹಿತ್ ಶರ್ಮಾ ಏಕದಿನದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ.

Women's T20 World Cup 2023: ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟWomen's T20 World Cup 2023: ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟ

ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಸಹ ಟಿ20 ಸರಣಿಗೆ ಪರಿಗಣಿಸಿಲ್ಲ. ಆದರೆ ಮೊಹಮ್ಮದ್ ಶಮಿ ಅವರು ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.

ಆದರೆ ಭಾರತ ತಂಡದ ಎಲ್ಲಾ 3 ಸ್ವರೂಪಗಳ ತಂಡಗಳಲ್ಲಿ ಕಾಣೆಯಾಗಿರುವ ಒಂದು ಹೆಸರು ಎಂದರೆ ಪೃಥ್ವಿ ಶಾ. ಜುಲೈ 2021ರಲ್ಲಿ ಶ್ರೀಲಂಕಾದಲ್ಲಿ ಭಾರತ ತಂಡಕ್ಕಾಗಿ ಕೊನೆಯ ವೈಟ್-ಬಾಲ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಸತತವಾಗಿ ಕಡೆಗಣಿಸಲ್ಪಡುತ್ತಿದ್ದಾರೆ. ಪೃಥ್ವಿ ಶಾ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಉತ್ತಮ ರನ್ ಗಳಿಸಿದ್ದಾರೆ, ಆದರೆ ಅದು ಆಯ್ಕೆದಾರರು ಅವರನ್ನು ಮರಳಿ ಆಯ್ಕೆ ಮಾಡಲು ಸಾಕಾಗಲಿಲ್ಲ.

IND vs SL: Prithvi Shaw Vents Frustration Through Shayari After Being Left Out of T20, ODI Squads

ಇದೇ ಹತಾಶೆಯಲ್ಲಿರುವ ಪೃಥ್ವಿ ಶಾ ಆಗಾಗ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಭಾವನೆಗಳನ್ನು ತೋರಿಸುತ್ತಲೇ ಇರುತ್ತಾರೆ. ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಪಂದ್ಯಗಳಿಗೆ ಆಯ್ಕೆಯಾಗದ ನಂತರ, ಪೃಥ್ವಿ ಶಾ ತಮ್ಮದೇ ಆದ ಆಕ್ರೋಶವನ್ನು ಶಾಯರಿ ಮೂಲಕ ಪೋಸ್ಟ್ ಮಾಡಿದ್ದರು. ಇದು ಪೃಥ್ವಿ ಶಾ ಅವರ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರೀಲ್ ಹಂಚಿಕೊಂಡಿದ್ದರು.

Flashback 2022: 1000 ದಿನಗಳ ನಂತರ ಶತಕದ ಬರ ಕೊನೆಗೊಳಿಸಿದ ವಿರಾಟ್ ಕೊಹ್ಲಿFlashback 2022: 1000 ದಿನಗಳ ನಂತರ ಶತಕದ ಬರ ಕೊನೆಗೊಳಿಸಿದ ವಿರಾಟ್ ಕೊಹ್ಲಿ

ಇದು ಉಝೈರ್ ಹಿಜಾಜಿಯ ಶಾಯರಿ (ಕವನ) ಆಗಿತ್ತು. 'ಕಿಸಿ ನೆ ಮಫ್ತ್ ಮೆ ಪಾ ಲಿಯಾ ವೋ ಶಾಖ್ಸ್, ಜೋ ಮುಝೆ ಹರ್ ಕೀಮತ್ ಪೆ ಚಾಹಿಯೇ ಥಾ'. ಅಂದರೆ, 'ನನಗೆ ಹೆಚ್ಚು ಬೇಕಾಗಿರುವುದು, ಯಾರಾದರೂ ಅವುಗಳನ್ನು ಉಚಿತವಾಗಿ ಪಡೆದುಕೊಂಡಾಗ' ಎನ್ನುವುದಾಗಿತ್ತು.

IND vs SL: Prithvi Shaw Vents Frustration Through Shayari After Being Left Out of T20, ODI Squads

ಭಾರತ ತಂಡದಲ್ಲಿ ಎರಡನೇ ಅವಕಾಶಕ್ಕಾಗಿ ಕಾಯುತ್ತಿರುವ ಮುಂಬೈ ಕ್ರಿಕೆಟಿಗನ ಕೆಲವು ದಿನಗಳಿಂದ ಹತಾಶೆ ಹೆಚ್ಚಾಗುತ್ತಲೇ ಇದೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಿದಾಗ ಮತ್ತು 2018ರಲ್ಲಿ ಭಾರತವನ್ನು ಅಂಡರ್-19 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದಾಗ, ಪೃಥ್ವಿ ಶಾ ಭಾರತೀಯ ಕ್ರಿಕೆಟ್‌ನಲ್ಲಿ ಭವಿಷ್ಯದ ದೊಡ್ಡ ಆಟಗಾರ ಎಂದು ಪ್ರಶಂಸಿಸಲ್ಪಟ್ಟಿದ್ದರು.

ನಂತರ ಪೃಥ್ವಿ ಶಾ ಅವರು ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ ನಂತರ ಅವರು ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಬಿದ್ದರು. ಅಂದಿನಿಂದ ಪೃಥ್ವಿ ಶಾ ಅವರಿಗೆ ಭಾರತ ತಂಡಕ್ಕೆ ಪುನರಾಗಮನ ಮಾಡುವುದು ಕಷ್ಟಕರವಾಗಿದೆ.

Story first published: Thursday, December 29, 2022, 14:00 [IST]
Other articles published on Dec 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X