ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಮೊದಲು ವಿಶ್ರಾಂತಿ ತೆಗೆದುಕೊಳ್ಳುವುದನ್ನು ನಿಲ್ಲಿಸಿ; ಕೊಹ್ಲಿ, ರೋಹಿತ್‌ಗೆ ಗಂಭೀರ್ ಸಲಹೆ

IND vs SL: Stop Taking Rest; Gautam Gambhir Advice For Virat Kohli And Rohit Sharma

ಭಾರತ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿಯನ್ನು ಗೆದ್ದು ಒಂದು ದಶಕ ಸಮೀಪಿಸಿದೆ. ಸ್ಟಾರ್ ಆಟಗಾರರ ತಂಡವಾಗಿರುವ ಕಾರಣ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತಿತ್ತು. ಇದು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ ಪ್ರಮುಖ ಟ್ರೋಫಿಗಾಗಿ ಭಾರತದ ಕಾಯುವಿಕೆಯನ್ನು ಮತ್ತಷ್ಟು ವಿಸ್ತರಿಸಿದೆ.

ಜ.1ರಂದು BCCIನಿಂದ ಭಾರತದ ಟಿ20 ವಿಶ್ವಕಪ್ ಪ್ರದರ್ಶನ ಪರಿಶೀಲನಾ ಸಭೆಜ.1ರಂದು BCCIನಿಂದ ಭಾರತದ ಟಿ20 ವಿಶ್ವಕಪ್ ಪ್ರದರ್ಶನ ಪರಿಶೀಲನಾ ಸಭೆ

ಇದೇ ವೇಳೆ ಮುಂದಿನ ವರ್ಷ ಭಾರತವು 50-ಓವರ್‌ಗಳ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರಿಗೆ ಇದು ಅಗ್ನಿಪರೀಕ್ಷೆಯಾಗಿದೆ.

2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜಯಗಳಲ್ಲಿ ಭಾರತದ ಸ್ಟಾರ್ ಪ್ರದರ್ಶನಕಾರ ಗೌತಮ್ ಗಂಭೀರ್ ಅವರು ಏಕದಿನ ವಿಶ್ವಕಪ್‌ಗಿಂತ ಮುನ್ನ ಹೆಚ್ಚಿನ ವಿರಾಮಗಳನ್ನು ತೆಗೆದುಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

IND vs SL: Stop Taking Rest; Gautam Gambhir Advice For Virat Kohli And Rohit Sharma

"ನೀವು ಆಡುವ ತಂಡವನ್ನು ಮೊದಲು ಗುರುತಿಸಬೇಕಾಗಿದೆ, ಅದು ತುಂಬಾ ಮುಖ್ಯವಾಗಿದೆ. ಭಾರತ ತಂಡ ಎಂದಿಗೂ ಸ್ಥಿರವಾದ ತಂಡವನ್ನು ಹೊಂದಿರಲಿಲ್ಲ ಮತ್ತು ಹೆಚ್ಚು ಮುಖ್ಯವಾಗಿ ಹಿರಿಯ ಆಟಗಾರರು ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲು ಸಾಧ್ಯವಿಲ್ಲ. 50 ಓವರ್ ವಿಶ್ವಕಪ್ ಟೂರ್ನಿ ಸಮೀಪದಲ್ಲಿರುವಾಗ, ಅದು ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಆಗಿರಲಿ, ಈ ಆಟಗಾರರೆಲ್ಲರೂ ಸ್ಥಿರವಾದ ಕ್ರಿಕೆಟ್ ಆಡಬೇಕಾಗಿದೆ," ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಿಳಿಸಿದರು.

ಇದು ಕೊಹ್ಲಿಯ 2022ರ ಅತ್ಯುತ್ತಮ ಇನ್ನಿಂಗ್ಸ್; ಟಿ20ಗೆ ಸೂರ್ಯ, ಟೆಸ್ಟ್‌ಗೆ ಪಂತ್; ಹೀಗಿದೆ ಕಾರ್ತಿಕ್ ಲೆಕ್ಕಾಚಾರಇದು ಕೊಹ್ಲಿಯ 2022ರ ಅತ್ಯುತ್ತಮ ಇನ್ನಿಂಗ್ಸ್; ಟಿ20ಗೆ ಸೂರ್ಯ, ಟೆಸ್ಟ್‌ಗೆ ಪಂತ್; ಹೀಗಿದೆ ಕಾರ್ತಿಕ್ ಲೆಕ್ಕಾಚಾರ

"ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಿಕೆಟ್‌ ಸರಣಿಗಳಿಂದ ಏಕಾಏಕಿ ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ವಿಶ್ವಕಪ್ ಸಮೀಪದಲ್ಲಿರುವಾಗ ಸ್ಥಿರವಾದ ಘಟಕವನ್ನು ಹೊಂದಿಲ್ಲ ಮತ್ತು ಹಲವಾರು ಬದಲಾವಣೆಗಳನ್ನು ಮಾಡಲು ಪ್ರಾರಂಭಿಸುತ್ತೀರಿ. ಅದು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ನೀವು ಅರಿತುಕೊಳ್ಳಿ. ಕಳೆದ ಎರಡು ವಿಶ್ವಕಪ್‌ಗಳಲ್ಲಿ ಅದೇ ಆಗುತ್ತಿದೆ. ವಿಶೇಷವಾಗಿ 50 ಓವರ್‌ಗಳ ಸ್ವರೂಪದಲ್ಲಿ ಆಟಗಾರರು ಹೆಚ್ಚು ವಿರಾಮ ತೆಗೆದುಕೊಳ್ಳಬಾರದುಮ ಎಂದು ನಾನು ಭಾವಿಸುತ್ತೇನೆ," ಎಂದು ಗೌತಮ್ ಗಂಭೀರ್ ಹೇಳಿದರು.

IND vs SL: Stop Taking Rest; Gautam Gambhir Advice For Virat Kohli And Rohit Sharma

ಜನವರಿ 3ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರನ್ನೂ ಆಯ್ಕೆ ಮಾಡಲಾಗಿಲ್ಲ. ಆದರೆ, ಜನವರಿ 10ರಿಂದ ಪ್ರಾರಂಭವಾಗುವ ಏಕದಿನ ಸರಣಿಗೆ ಇವರಿಬ್ಬರು ಕಂಬ್ಯಾಕ್ ಮಾಡಲಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್.

Story first published: Saturday, December 31, 2022, 23:21 [IST]
Other articles published on Dec 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X