ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs WI: ಗಾಯದ ಕಾರಣ ಟೀಮ್ ಇಂಡಿಯಾದ ಈ ಬೌಲರ್ 3ನೇ ಪಂದ್ಯಕ್ಕೆ ಅಲಭ್ಯ!

Ind vs WI: Harshal Patel will not play in 3rd T20I due to rib injury

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದ ಕಾರಣ ಐದು ಪಂದ್ಯಗಳ ಟಿ20 ಸರಣಿ ಈಗ 1-1 ಅಂತರದಿಂದ ಸಮಬಲದಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳ ಮೇಳೆ ಕುತೂಹಲ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಹರ್ಷಲ್ ಪಟೇಲ್ ಗಾಯದ ಕಾರಣದಿಂದಾಗಿ ಆಯ್ಕೆಗೆ ಅಲಭ್ಯವಾಗಿದ್ದಾರೆ.

ಹರ್ಷಲ್ ಪಟೇಲ್ ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಂತಿಮ ಎರಡು ಪಂದ್ಯಗಳಿಗೆ ಈ ವೇಗದ ಬೌಲರ್ ಲಭ್ಯವಾಗುವ ಸಾಧ್ಯತೆಯಿದೆ. ಹರ್ಷಲ್ ಪಟೇಲ್ ಮೊದಲ ಎರಡು ಟಿ20 ಪಂದ್ಯಗಳಲ್ಲಿಯೂ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ.

ಭಾರತ vs ವಿಂಡೀಸ್: 2ನೇ ಟಿ20 ಪಂದ್ಯ ಗೆದ್ದ ವಿಂಡೀಸ್: ರೋಚಕ ಸೆಣೆಸಾಟದಲ್ಲಿ ಎಡವಿದ ಭಾರತಭಾರತ vs ವಿಂಡೀಸ್: 2ನೇ ಟಿ20 ಪಂದ್ಯ ಗೆದ್ದ ವಿಂಡೀಸ್: ರೋಚಕ ಸೆಣೆಸಾಟದಲ್ಲಿ ಎಡವಿದ ಭಾರತ

ಗಾಯಕ್ಕೆ ತುತ್ತಾಗಿರುವ ಹರ್ಷಲ್

ಗಾಯಕ್ಕೆ ತುತ್ತಾಗಿರುವ ಹರ್ಷಲ್

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಜಸ್ಪ್ರೀತ್ ಬೂಮ್ರಾ ಹೊರಗುಳಿದಿರುವ ಕಾರಣ ಹರ್ಷಲ್ ಪಟೇಲ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು. ಆದರೆ ಗಾಯದ ಕಾರಣದಿಂದಾಗಿ ಅದು ಅಸಾಧ್ಯವಾಗಿದೆ. ಹೀಗಾಗಿ ಆಡುವ ಬಳಗದಲ್ಲಿ ಅವಕಾಶಕ್ಕಾಗಿ ನಾಲ್ಕನೇ ಪಂದ್ಯದವರೆಗೂ ಹರ್ಷಲ್ ಪಟೇಲ್ ಕಾಯುವುದು ಅನಿವಾರ್ಯವಾಗಿದೆ.

ಸೂರ್ಯಕುಮಾರ್ ಯಾದವ್ ಓಪನಿಂಗ್ ಬ್ಯಾಟಿಂಗ್ ಏಕೆ ? ರೋಹಿತ್ ಶರ್ಮಾ ಉತ್ತರ

ಹರ್ಷಲ್ ಅಲಭ್ಯತೆ ಬಗ್ಗೆ ಬಿಸಿಸಿಐ ಮಾಹಿತಿ

ಹರ್ಷಲ್ ಅಲಭ್ಯತೆ ಬಗ್ಗೆ ಬಿಸಿಸಿಐ ಮಾಹಿತಿ

ಸೈಂಟ್ ಕಿಟ್ಸ್‌ನಲ್ಲಿ ಎರಡನೇ ಟಿ20 ಪಂದ್ಯದ ತಂಡದ ಘೋಷಣೆಯಾದ ಬಳಿಕ ಬಿಸಿಸಿಐ ಹರ್ಷಲ್ ಪಟೇಲ್ ಗಾಯಗೊಂಡಿರುವ ವಿಚಾರವನ್ನು ಬಹಿರಂಗಪಡಿಸಿತ್ತು. ಎರಡು ಹಾಗೂ ಮೂರನೇ ಟಿ20 ಪಂದ್ಯಗಳಿಗೆ ಹರ್ಷಲ್ ಪಟೇಲ್ ಅಲಭ್ಯವಾಗಲಿದ್ದಾರೆ ಎಂಬುದನ್ನು ಮಾಹಿತಿ ನೀಡಿತ್ತು. ಎರಡನೇ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ವಿಶ್ವಕಪ್‌ನ ಮೇಲೆ ಚಿತ್ತ

ವಿಶ್ವಕಪ್‌ನ ಮೇಲೆ ಚಿತ್ತ

ಇನ್ನು ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೌಲಿಂಗ್ ಲೈನ್‌ಅಪ್‌ ಅನ್ನು ಅಂತಿಮಗೊಳಿಸುವ ದೃಷ್ಟಿಯಿಂದಾಗಿ ಹರ್ಷಲ್ ಪಟೇಲ್ ಪ್ರದರ್ಶನ ಬಹಳ ಮಹತ್ವದ್ದಾಗಿದೆ. ತಂಡ ಕೂಡ ಹರ್ಷಲ್ ಪಟೇಲ್ ಅವರ ಪ್ರದರ್ಶನದ ಮೇಲೆ ಕಣ್ಣಿಟ್ಟಿದೆ. ಐಪಿಎಲ್‌ನಲ್ಲಿ ಆ್‌ಸಿಬಿ ಪರವಾಗಿ ಕಳೆದ ಎರಡು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಹರ್ಷಲ್ ಪಟೇಲ್ 2021ರ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಕೂಡ ಧರಿಸಿದ್ದರು. ಹೀಗಾಗಿ ಹರ್ಷಲ್ ಪಟೇಲ್ ಮುಂಬರುವ ಟಿ20 ವಿಶ್ವಕಪ್‌ ನಲ್ಲಿ ಭಾರತೀಯ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.

"ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ವೃತ್ತಿಜೀವನದ ಆರಂಭದಲ್ಲಿ ವೈಫಲ್ಯ ಅನುಭವಿಸಿದ್ದರು"

Team India ಆಟಗಾರರು ಅರ್ಶದೀಪ್ ಜೆರ್ಸಿ ತೊಡಲು ಇದೇ ಕಾರಣ | *Cricket | OneIndia Kannada
ಭಾರತ ಹಾಗೂ ವೆಸ್ಟ್ ಇಂಡೀಸ್ ಸ್ಕ್ವಾಡ್ ಹೀಗಿದೆ

ಭಾರತ ಹಾಗೂ ವೆಸ್ಟ್ ಇಂಡೀಸ್ ಸ್ಕ್ವಾಡ್ ಹೀಗಿದೆ

ಭಾರತ: ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿ ಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅಕ್ಸರ್ ಪಟೇಲ್, ದೀಪಕ್ ಹೂಡಾ, ಇಶಾನ್ ಕಿಶನ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್

ವೆಸ್ಟ್ ಇಂಡೀಸ್ ಸ್ಕ್ವಾಡ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಾಕ್), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್, ಶಮರ್ ಬ್ರೂಕ್ಸ್, ಕೀಮೋ ಪಾಲ್, ಹೇಡನ್ ವಾಲ್ಷ್, ರೊಮಾರಿಯೋ ಶೆಫರ್ಡ್, ಡೊಮಿನಿಕ್ ಡ್ರೇಕ್ಸ್

Story first published: Tuesday, August 2, 2022, 16:31 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X