ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಳೆಗೆ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?

virat kohli on 1st odi vs wi 2019

ಜಾರ್ಜ್‌ ಟೌನ್‌, ಆಗಸ್ಟ್‌ 09: ಭಾರತ ಮತ್ತು ಆತಿಥೇಯ ವೆಸ್ಟ್‌ ಇಂಡೀಸ್‌ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಗುರುವಾರ ಕ್ರಿಕೆಟ್‌ಗಿಂತಲೂ ಮಳೆಯ ಆಟವೇ ಜೋರಿತ್ತು. ಕೆಲ ಕಾಲ ಬಿಡುವು ನೀಡಿದ ಮಳೆರಾಯ ಆಟಕ್ಕೆ ಅನುವು ಮಾಡಿಕೊಟ್ಟರೂ, ಮರಳಿ ಕಾಟಕೊಡಲಾರಂಭಿಸಿದರಿಂದ ಆಟಗಾರರು ಮೈದಾನದಿಂದ ಪೆವಿಲಿಯನ್‌ಗೆ ಪೆವಿಲಿಯನ್‌ನಿಂದ ಮೈದಾನಕ್ಕೆ ಓಡುವಂತಾಗಿತ್ತು.

ಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊ

ಮೊದಲಿಗೆ 43 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯ, ಬಳಿಕ 40 ಓವರ್‌ಗಳಿಗೆ ಇಳಿದಿತ್ತು. ನಂತರವೂ ಮಳೆಯ ಚೆಲ್ಲಾಟ ಮುಂದುವರಿದ ಕಾರಣ ಕೇವಲ 13 ಓವರ್‌ಗಳನ್ನು ಕಂಡಿದ್ದ ಪಂದ್ಯವನ್ನು ರದ್ದು ಪಡಿಸಬೇಕಾಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುತ್ತಿದ್ದ ವೆಸ್ಟ್‌ ಇಂಡೀಸ್‌ ಈ ಹಂತದಲ್ಲಿ 1 ವಿಕೆಟ್‌ಗೆ 54 ರನ್‌ಗಳನ್ನು ಗಳಿಸಿತ್ತು. ಪಂದ್ಯ ರದ್ದಾದ ಬಳಿಕ ಮಾತನಾಡಿ ತಮ್ಮ ಬೇಸರ ಹೊರಹಾಕಿದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಕ್ರಿಕೆಟ್ ಆಟದಲ್ಲಿ ಮಳೆಯೊಂದೇ ಕೆಟ್ಟ ಸಂಗತಿ ಎಂದಿದ್ದಾರೆ.

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾ

"ಕ್ರಿಕೆಟ್‌ ಆಟದಲ್ಲಿನ ಕೆಟ್ಟ ಸಂಗತಿ ಇದೊಂದೆ. ಆಟ ಶುರುವಾಗಿ ನಿಲ್ಲುವುದು ಮತ್ತದೇ ರೀತಿಯಲ್ಲಿ ಆಗುತ್ತಲೇ ಇರುವುದು ಉತ್ತಮ ಅನುಭವ ನೀಡುವುದಿಲ್ಲ. ಸಂಪೂರ್ಣ ಮಳೆಯಾಗಬೇಕು ಅಥವಾ ಪೂರ್ಣ ಪ್ರಮಾಣದ ಪಂದ್ಯ ನಡೆಯಬೇಕು. ಪಂದ್ಯಕ್ಕೆ ಹೆಚ್ಚು ಹೆಚ್ಚು ವಿರಾಮ ಬಿದ್ದಷ್ಟು, ಆಟಗಾರರು ಎಲ್ಲಿ ಗಾಯಗೊಳ್ಳುತ್ತಾರೊ ಎಂಬ ಆತಂಕ ಹೆಚ್ಚಾಗುತ್ತಿರುತ್ತದೆ," ಎಂದು ಕೊಹ್ಲಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾ

ಇನ್ನು ಕೆರಿಬಿಯನ್‌ ಪಿಚ್‌ಗಳ ಕುರಿತಾಗಿ ಮಾತನಾಡಿದ ಕೊಹ್ಲಿ, "ಕೆಲ ಪಿಚ್‌ಗಳು ಉತ್ತಮ ವೇಗ ಮತ್ತು ಪುಟಿದೇಳುವ ಸಾಮರ್ಥ್ಯವನ್ನು ಹೊಂದಿವೆ. ಅಂತೆಯೇ ಮತ್ತೂ ಕೆಲ ಪಿಚ್‌ಗಳು ಮಂದಗತಿಯದ್ದಾಗಿವೆ. ಹೀಗಾಗಿ ಈ ಎಲ್ಲಾ ಸಂಗತಿಗಳನ್ನು ಅರಿತು ಆಡಬೇಕಾಗುತ್ತದೆ," ಎಂದಿದ್ದಾರೆ.

ಇನ್ನು ಪಂದ್ಯದಲ್ಲಿ ಮಳೆ ಆಟ ಬೇಸರ ತರಿಸಿದರೆ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ಕೊಹ್ಲಿ ತಮ್ಮ ಡ್ಯಾನ್ಸ್‌ ಮೂಲಕ ರಂಜಿಸಿದರು. ಕ್ರೀಸ್‌ನಲ್ಲಿದ್ದ ವೆಸ್ಟ್‌ ಇಂಡೀಸ್‌ನ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಜೊತೆಗೂಡಿಯೂ ಕೊಹ್ಲಿ ಸೆಪ್ಟ್‌ ಹಾಕಿದ ವಿಡಿಯೊ ಸೀಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

ಭಾರತ ತಂಡ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿನ ಎರಡನೇ ಪಂದ್ಯವನ್ನು ಆಗಸ್ಟ್‌ 11ರಂದು (ಭಾನುವಾರ) ಪೋರ್ಟ್‌ ಆಫ್‌ಸ್ಪೇನ್‌ನಲ್ಲಿ ಆಡಲಿದೆ. ಇದಕ್ಕೂ ಮುನ್ನ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 3-0 ಅಂತರದಲ್ಲಿ ವಿಂಡೀಸ್‌ ಎದುರು ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತ್ತು.

Story first published: Friday, August 9, 2019, 17:13 [IST]
Other articles published on Aug 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X