ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಚಾಹಲ್‌ಗೆ ನೀಡಿದ ಆ ಉಪಾಯದಿಂದ ಬಿತ್ತು ಪೊಲಾರ್ಡ್ ವಿಕೆಟ್!; ವಿಡಿಯೋ ವೈರಲ್

IND vs WI: Virat Kohlis suggestion helped Yuzvendra Chahal in taking Kieron Pollard wicket

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿದ್ದ ಟೀಮ್ ಇಂಡಿಯಾ ಇದೀಗ ತವರಿನಲ್ಲಿ ಕೆರಿಬಿಯನ್ನರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ.

ನಾನು ಬಲಗೈ ವೇಗದ ಬೌಲರ್, ದ.ಆಫ್ರಿಕಾದ ಈ ಕ್ರಿಕೆಟಿಗನೆಂದರೆ ನನಗೆ ಅಚ್ಚುಮೆಚ್ಚು: ವಿರಾಟ್ ಕೊಹ್ಲಿನಾನು ಬಲಗೈ ವೇಗದ ಬೌಲರ್, ದ.ಆಫ್ರಿಕಾದ ಈ ಕ್ರಿಕೆಟಿಗನೆಂದರೆ ನನಗೆ ಅಚ್ಚುಮೆಚ್ಚು: ವಿರಾಟ್ ಕೊಹ್ಲಿ

ಇತ್ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಿದ್ದು ಸರಣಿಯ ಎಲ್ಲಾ ಪಂದ್ಯಗಳು ಸಹ ಗುಜರಾತಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಈ ಸರಣಿಯ ಮೊದಲನೇ ಏಕದಿನ ಪಂದ್ಯ ಫೆಬ್ರವರಿ 6ರ ಭಾನುವಾರದಂದು ನಡೆಯಿತು. ಈ ಪಂದ್ಯದ ಮೂಲಕ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ತನ್ನ ವೃತ್ತಿ ಆರಂಭಿಸಿದ ರೋಹಿತ್ ಶರ್ಮಾ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ 176 ರನ್‌ಗಳಿಗೆ ಆಲ್ ಔಟ್ ‌ಆಯಿತು. ಹೀಗೆ ವೆಸ್ಟ್ ಇಂಡೀಸ್ ತಂಡ ನೀಡಿದ 177 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 28 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ 6 ವಿಕೆಟ್‍ಗಳ ಭರ್ಜರಿ ಜಯವನ್ನು ದಾಖಲಿಸಿತು.

ಆರ್‌ಸಿಬಿಯ ಆ ಒಂದು ಸೋಲಿನ ಬಗ್ಗೆ ರಾಹುಲ್‌ ಇಂದಿಗೂ ನನ್ನ ಜೊತೆ ಮಾತಾಡ್ತಾರೆ: ನೋವು ಬಿಚ್ಚಿಟ್ಟ ಕೊಹ್ಲಿಆರ್‌ಸಿಬಿಯ ಆ ಒಂದು ಸೋಲಿನ ಬಗ್ಗೆ ರಾಹುಲ್‌ ಇಂದಿಗೂ ನನ್ನ ಜೊತೆ ಮಾತಾಡ್ತಾರೆ: ನೋವು ಬಿಚ್ಚಿಟ್ಟ ಕೊಹ್ಲಿ

ಹೀಗೆ ಇತ್ತಂಡಗಳ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಯುಜುವೇಂದ್ರ ಚಾಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 9.5 ಓವರ್‌ಗಳಲ್ಲಿ 49 ರನ್ ನೀಡಿದ್ದ ಯುಜುವೇಂದ್ರ ಚಾಹಲ್ ವೆಸ್ಟ್ ಇಂಡೀಸ್ ತಂಡದ ಪ್ರಮುಖ 4 ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ ತಂಡಕ್ಕೆ ಆಪತ್ಬಾಂಧವರಾದರು. ಹೀಗೆ ಉತ್ತಮ ಪ್ರದರ್ಶನ ನೀಡಿ ಮಿಂಚಿದ ಯುಜುವೇಂದ್ರ ಚಾಹಲ್ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ಮೊದಲ ಎಸೆತದಲ್ಲಿಯೇ ಕ್ಲೀನ್ ಬೌಲ್ಡ್ ಮಾಡಿದರು. ಇನ್ನು ಯುಜುವೇಂದ್ರ ಚಾಹಲ್ ಕೀರನ್ ಪೊಲಾರ್ಡ್ ಅವರ ವಿಕೆಟ್ ಪಡೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಚಾಹಲ್ ಅವರಿಗೆ ನೀಡಿದ ಸಲಹೆ ಕೂಡ ಬೆಳಕಿಗೆ ಬಂದಿದೆ. ವಿರಾಟ್ ಕೊಹ್ಲಿ ಕೀರನ್ ಪೊಲಾರ್ಡ್ ವಿಕೆಟ್ ಪಡೆಯಲು ಯುಜುವೇಂದ್ರ ಚಾಹಲ್ ಅವರಿಗೆ ನೀಡಿದ ಆ ಸಲಹೆ ಏನು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ..

ಗೂಗ್ಲಿ ಹಾಕು ಎಂದಿದ್ದ ವಿರಾಟ್ ಕೊಹ್ಲಿ

ಗೂಗ್ಲಿ ಹಾಕು ಎಂದಿದ್ದ ವಿರಾಟ್ ಕೊಹ್ಲಿ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಆರನೇ ಆಟಗಾರನಾಗಿ ಕಣಕ್ಕಿಳಿದ ಕೀರನ್ ಪೊಲಾರ್ಡ್ ಬ್ಯಾಟ್ ಹಿಡಿದು ಸಿದ್ಧವಾಗುತ್ತಿದ್ದಂತೆ ಬೌಲಿಂಗ್ ಮಾಡಲು ತಯಾರಾದ ಯುಜುವೇಂದ್ರ ಚಾಹಲ್ ಅವರಿಗೆ ವಿರಾಟ್ ಕೊಹ್ಲಿ ಗೂಗ್ಲಿ ಹಾಕು ಎಂದು ಹಿಂದಿ ಭಾಷೆಯಲ್ಲಿ ಹೇಳಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಸಲಹೆಯಂತೆ ಮೊದಲ ಎಸೆತದಲ್ಲೇ ಯುಜ್ವೇಂದ್ರ ಚಾಹಲ್ ಗೂಗ್ಲಿ ಎಸೆದ ಪರಿಣಾಮ ಕೀರನ್ ಪೊಲಾರ್ಡ್ ಕ್ಲೀನ್ ಬೌಲ್ಡ್ ಆದರು.

ನಾಯಕನಲ್ಲದಿದ್ದರೂ ಕೊಹ್ಲಿ ಲೀಡರ್ ಎಂದ ನೆಟ್ಟಿಗರು

ನಾಯಕನಲ್ಲದಿದ್ದರೂ ಕೊಹ್ಲಿ ಲೀಡರ್ ಎಂದ ನೆಟ್ಟಿಗರು

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಇತರೆ ಆಟಗಾರರಿಗೆ ಸಲಹೆಗಳನ್ನು ನೀಡುತ್ತಿದ್ದರು. ಹಾಗೂ ಕೆಲ ಬೌಲರ್‌ಗಳಿಗೆ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬ ಸಲಹೆಗಳನ್ನು ಆಗಾಗ ನೀಡುತ್ತಿದ್ದರು. ಹೀಗೆ ಪಂದ್ಯದುದ್ದಕ್ಕೂ ಇತರೆ ಆಟಗಾರರಿಗೆ ಸಲಹೆ ನೀಡುತ್ತಿದ್ದ ವಿರಾಟ್ ಕೊಹ್ಲಿ ಅವರನ್ನು ಕಂಡ ನೆಟ್ಟಿಗರು ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿರಬಹುದು ಆದರೆ ಓರ್ವ ಲೀಡರ್ ಆಗಿ ತಂಡದಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಟ್ ಮ್ಯಾನ್ ಹೊಡೆದ ಸಿಕ್ಸ್ ನೋಡಿ ದಂಗಾದ ಪೊಲ್ಲಾರ್ಡ್ ರಿಯಾಕ್ಷನ್ ಫುಲ್ ವೈರಲ್ | Oneindia Kannada
ಮುಂದಿನ ಪಂದ್ಯಗಳು ಯಾವಾಗ?

ಮುಂದಿನ ಪಂದ್ಯಗಳು ಯಾವಾಗ?

ಸದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಪ್ರಥಮ ಪಂದ್ಯ ಮುಕ್ತಾಯವಾಗಿದ್ದು, ದ್ವಿತೀಯ ಏಕದಿನ ಪಂದ್ಯ ಫೆಬ್ರವರಿ 9 ಹಾಗೂ ತೃತೀಯ ಏಕದಿನ ಪಂದ್ಯ ಫೆಬ್ರವರಿ 11ರಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.

Story first published: Monday, February 7, 2022, 15:58 [IST]
Other articles published on Feb 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X