ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರಿಗೆ ಶರಣಾದ ಭಾರತ

Ind W vs Aus W: India women lost by 21 runs against Australia in 3rd t20I

ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದೆ. ಶಫಾಲಿ ವರ್ಮ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌಟರ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ ಉಳಿದ ಆಟಗಾರ್ತಿಯರಿಂದ ಪರಿಣಾಮಕಾರಿ ಪ್ರದರ್ಶನ ಬಾರದ ಕಾರಣ ಭಾರತ ತಂಡ ಸೋಲು ಅನುಭವಿಸಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳಿಸಿತು. ಇಲ್ಯಾಸ್ ಪೆರ್ರಿ ಸ್ಪೋಟಕ 75 ರನ್‌ಗಳನ್ನು ಗಳಿಸುವ ಮೂಲಕ ಆಸಿಸ್ ಪಡೆಗೆ ಬಲ ತುಂಬಿದರೆ ಗ್ರೇಸ್ ಹ್ಯಾರೀಸ್ ಹಾಗೂ ಮೂನಿ ಕೂಡ ಉತ್ತಮ ಕೊಡುಗೆ ನೀಡಿದರು.ಮೂನಿ 30 ರನ್‌ಗಳಿಸಿದರೆ ಹ್ಯಾರಿಸ್ 18 ಎಸೆತಗಳಲ್ಲಿ 40 ರನ್‌ಗಳಿಸಿ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತ ಗಳಿಸಲು ಕಾರಣವಾದರು.

ಟೆಸ್ಟ್ ಸರಣಿ ಸೋತ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ: ಮತ್ತೋರ್ವ ವೇಗಿ ಸರಣಿಯಿಂದ ಔಟ್ಟೆಸ್ಟ್ ಸರಣಿ ಸೋತ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ: ಮತ್ತೋರ್ವ ವೇಗಿ ಸರಣಿಯಿಂದ ಔಟ್

ಇನ್ನು ಭಾರತ ತಂಡದ ಬೌಲರ್‌ಗಳ ಪೈಕಿ ರೇಣುಕಾ ಸಿಂಗ್, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ ಹಾಗೂ ದೇವಿಕಾ ವೈದ್ಯ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ಈ ಪೈಕಿ ರೇಣುಕಾ ಸಿಂಗ್ ಹಾಗೂ ದೇವಿಕಾ ವೈದ್ಯ ರನ್ ನಿಯಂತ್ರಣದಲ್ಲಿಯೂ ಯಶಸ್ಸು ಸಾಧಿಸಿದ್ದಾರೆ.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸ್ಮೃತಿ ಮಂಧಾನ ಒಂದು ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಜಮಿಮಾ 16 ರನ್‌ಗಳಿಸಿ ಔಟಾದರು. ಆದರೆ ಶಫಾಲಿ ವರ್ಮ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು.

ಶಫಾಲಿ 41 ಎಸೆತಗಳಲ್ಲಿ 52 ರನ್‌ಗಳಿಸಿ ಔಟಾಗುವ ಮೂಲಕ ಭಾರತ ತಂಡ ಕುಸಿತಕ್ಕೆ ಒಳಗಾಯಿತು. ಹರ್ಮನ್ 37 ರನ್‌ಗಳಿಸಿದರೆ ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ 25 ರನ್‌ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ ಭಾರತ ತಂಡ 7 ವಿಕೆಟ್ ಕಳೆದುಕೊಂಡು 151 ರನ್‌ಗಳಿಸಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಮೂಲಕ ಭಾರತ 21 ರನ್‌ಗಳ ಅಂತರದ ಸೋಲು ಅನುಭವಿಸಿದೆ.

ಅಪಘಾತದಲ್ಲಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲುಅಪಘಾತದಲ್ಲಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ಭಾರತ ತಂಡ ಹೀಗಿದೆ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ಅಂಜಲಿ ಸರ್ವಾಣಿ, ರೇಣುಕಾ ಠಾಕೂರ್ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ, ಮೇಘನಾ ಸಿಂಗ್

ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ಗ್ರೇಸ್ ಹ್ಯಾರಿಸ್, ಅನ್ನಾಬೆಲ್ ಸದರ್ಲ್ಯಾಂಡ್, ನಿಕೋಲಾ ಕ್ಯಾರಿ, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಬೆಂಚ್: ಅಮಂಡಾ ವೆಲ್ಲಿಂಗ್ಟನ್, ಫೋಬೆ ಲಿಚ್ಫೀಲ್ಡ್, ಹೀದರ್ ಗ್ರಹಾಂ, ಕಿಮ್ ಗಾರ್ತ್

Story first published: Wednesday, December 14, 2022, 22:27 [IST]
Other articles published on Dec 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X