ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆಂಡಿನ ಹೊಳಪಿಗೆ ಬಾಹ್ಯವಸ್ತುವಿಗೆ ಅವಕಾಶ ನೀಡಲಿ: ಟೀಮ್ ಇಂಡಿಯಾ ಬೌಲಿಂಗ್ ಕೋಚ್

India Bowling Coach Favours Use Of External Substance To Shine The Ball

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕ್ರಿಕೆಟ್‌ನಲ್ಲಿ ಎಂಜಲಿನ ಬಳಕೆ ನಿಷೇಧಕ್ಕೆ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಕಮಿಟಿ ಶಿಫಾರಸನ್ನು ಮಾಡಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅನೇಕ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲ ಸಲಹೆಗಳೂ ಕೇಳಿಬರುತ್ತಿದೆ.

ಪ್ರಮುಖವಾಗಿ ಚೆಂಡು ತಿರುವು ಪಡೆಯಲು ಬಾಹ್ಯವಸ್ತುಗಳನ್ನು ಬಳಕೆ ಮಾಡಲು ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಕೂಡ ಧ್ವನಿಗೂಡಿಸಿದ್ದಾರೆ. ಭರತ್ ಅರುಣ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಬಾಹ್ಯವಸ್ತುಬಳಕೆಗೆ ಅವಕಾಶ ನೀಡುವುದು ಸೂಕ್ತ ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರುಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರು

ಅನೇಕ ಪ್ರಮುಖ ಬೌಲರ್‌ಗಳು ಮತ್ತು ಕೋಚ್‌ಗಳು ಬಾಹ್ಯವಸ್ತುಗಳ ಬಳಕೆಯ ಬಗ್ಗೆ ಒತ್ತಾಯವನ್ನು ಮಾಡುತ್ತಿದ್ದಾರೆ. ಬ್ಯಾಟ್ಸ್‌ಮನ್ ಮತ್ತು ಬೌಲರ್ ನಡುವೆ ಹೊಂದಾಣಿಕೆಯನ್ನು ತರಬೇಕಾದರೆ ಈ ರೀತಿಯ ಕ್ರಮ ಅನಿವಾರ್ಯ ಎಂದಿದ್ದಾರೆ. ಇಲ್ಲವಾದರೆ ಸ್ವಿಂಗ್ ಸಾಧ್ಯವಾಗದೆ ಬ್ಯಾಟ್ಸ್‌ಮನ್‌ಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪ್ರತಿಯೊಂದು ತಂಡಕ್ಕೂ ಈ ರೀತಿಯ ಅವಕಾಶ ಸಿಕ್ಕಾಗ ಸಮಾನವಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ಆಗ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಲಾರದು. ಹಾಗಾಗಿ ಅದರ ಪ್ರಯತ್ನವನ್ನು ಯಾಕೆ ಮಾಡಬಾರದು ಎಂದು ಭರತ್ ಅರುಣ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿ

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ವೇಗದ ಬೌಲರ್ ಇದೇ ರೀತಿಯ ಇಂಗಿತ ವ್ಯಕ್ತಪಡಿಸಿದ್ದರು. ಎಂಜಲು ಬಳಕೆಯನ್ನು ನಿಷೇಧಿಸಿದರೆ ಅದರ ಬದಲಾಗಿ ಬೇರೇನಾದರೂ ಬಳಕೆಗೆ ಅವಕಾಶ ಸಿಗಬೇಕು ಎಂದಿದ್ದರು. ಅದಾದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ ಇನ್ನೂ ಅನೇಕರು ಈ ಒತ್ತಾಯವನ್ನು ಮಾಡಿದ್ದಾರೆ.

Story first published: Thursday, May 28, 2020, 21:23 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X