ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಟೆಸ್ಟ್: ಗಾಯಾಳು ಸ್ಪಿನ್ನರ್ ಅಕ್ಷರ್ ಪಟೇಲ್ ಬದಲಿಗೆ ನದೀಂ ಕಣಕ್ಕೆ

India vs England 1st Test match in Chennai: Axar Patel ruled out Shahbaz Nadeem

ಚೆನ್ನೈ, ಫೆಬ್ರವರಿ 5: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆಪಾಕ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಕೊನೆ ಕ್ಷಣದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಇಬ್ಬರು ಸ್ಪಿನ್ನರ್ ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

19 ಮಂದಿ ಸದಸ್ಯರ ತಂಡಕ್ಕೆ ಸೇರ್ಪಡೆಗೊಂಡ ಎಡಗೈ ಸ್ಪಿನ್ನರ್ ಶಾಬಾಜ್ ನದೀಂ ಹಾಗೂ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಪೈಕಿ ಶಾಬಾಜ್ ನದೀಂ ಅವರಿಗೆ ಆಡುವ ಹನ್ನೊಂದರಲ್ಲಿ ಸೇರುವ ಅವಕಾಶ ಸಿಕ್ಕಿದೆ.

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಸಂಪೂರ್ಣ ಅಪ್ಡೇಟ್ಸ್, ಲೈವ್ ಸ್ಕೋರ್ ಕಾರ್ಡ್ ಇಲ್ಲಿದೆ:

ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಗಾಯಾಳು ರವೀಂದ್ರ ಜಡೇಜ ಬದಲಿಗೆ ಅಕ್ಷರ್ ಪಟೇಲ್ ತಂಡ ಸೇರಿದ್ದರು. ಆದರೆ, ಅಕ್ಷರ್ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದು, ಗುರುವಾರದಂದು ತರಬೇತಿ ವೇಳೆ ನೋವು ಉಲ್ಬಣವಾಯಿತು. ಬಿಸಿಸಿಐ ವೈದ್ಯರ ತಂಡದ ವಿಸ್ತೃತ ವರದಿಗಾಗಿ ಕಾಯುತ್ತಿದ್ದೇವೆ. ಈ ಪಂದ್ಯದಲ್ಲಿ ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಂಡದ ಮ್ಯಾನೇಜ್ಮೆಂಟ್ ಹೇಳಿದೆ.

100ನೇ ಟೆಸ್ಟ್ ಆಡಿದ ಇಂಗ್ಲೆಂಡ್100ನೇ ಟೆಸ್ಟ್ ಆಡಿದ ಇಂಗ್ಲೆಂಡ್

ನದೀಂಗೆ ಅವಕಾಶ: ಜಡೇಜ, ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ತಂಡ ಸೇರಿರುವ ಬಿಹಾರ/ ಜಾರ್ಖಂಡ್ ಮೂಲದ ನದೀಂ ಅವರು ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಪಂದ್ಯಕ್ಕೆ ಕುಲದೀಪ್ ಯಾದವ್ ಬದಲಿಯಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. 2019ರಲ್ಲಿ ಕೊನೆ ಬಾರಿ ಇಂಗ್ಲೆಂಡ್ ವಿರುದ್ಧವೇ ಟೆಸ್ಟ್ ಪಂದ್ಯವಾಡಿದ್ದರು. 2021ರಲ್ಲಿ ರಾಹುಲ್ ಚಾಹರ್ ಜೊತೆಗೆ ನದೀಂ ಅವರು ಸ್ಟಾಂಡ್ ಬೈ ಆಟಗಾರರಾಗಿದ್ದರು. ಆದರೆ, ಅಕ್ಷರ್ ತಂಡದಿಂದ ಹೊರಬಿದ್ದಿರುವುದರಿಂದ ನದೀಂಗೆ ಉತ್ತಮ ಅವಕಾಶ ಸಿಕ್ಕಿದೆ. ಒಂದು ಟೆಸ್ಟ್ ಪಂದ್ಯವಾಡಿರುವ ನದೀಂ 111 ಪ್ರಥಮ ದರ್ಜೆ ಪಂದ್ಯಗಳಿಂದ 428 ವಿಕೆಟ್ ಗಳಿಸಿದ್ದು, 7/45 ಶ್ರೇಷ್ಠ ಪ್ರದರ್ಶನವಾಗಿದೆ.

ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಹಾಗೂ ಜಸ್ ಪ್ರೀತ್ ಬೂಮ್ರಾ ಅವರು ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವುದು ವಿಶೇಷವಾಗಿದೆ. ಆಡುವ XIರಲ್ಲಿ ಶಾಬಾಜ್ ನದೀಂಗೂ ಇದು ಪೂರ್ಣ ಪ್ರಮಾಣ ಮೊದಲ ಪಂದ್ಯ ಎನ್ನಬಹುದು.

Story first published: Friday, February 5, 2021, 10:57 [IST]
Other articles published on Feb 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X