ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರೋಹಿತ್ ಶರ್ಮಾಗಿದೆ ಮೂವತ್ತರ ಸಮಸ್ಯೆ'; ಟ್ರೋಲ್‌ಗೆ ಒಳಗಾದ ಹಿಟ್‌ಮ್ಯಾನ್!

India vs England: ‘Nervous 30s for Rohit Sharma’ - Twitter disappointed after opener fails in first innings

ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆಗಸ್ಟ್ 4ರ ಬುಧವಾರದಂದು ಆರಂಭವಾದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನೇನೂ ನೀಡಲಿಲ್ಲ, ಮೊದಲ ದಿನವೇ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 183 ರನ್‌ ಗಳಿಸಿತು.

ಧೋನಿ ಇದ್ದಾಗ ತಂಡದಲ್ಲಿ ಸ್ಥಾನ ಪಡೆದು ಕೊಹ್ಲಿ ನಾಯಕತ್ವದಲ್ಲಿ ತಂಡದಿಂದ ಹೊರಬಿದ್ದಿರುವ 10 ಆಟಗಾರರು!ಧೋನಿ ಇದ್ದಾಗ ತಂಡದಲ್ಲಿ ಸ್ಥಾನ ಪಡೆದು ಕೊಹ್ಲಿ ನಾಯಕತ್ವದಲ್ಲಿ ತಂಡದಿಂದ ಹೊರಬಿದ್ದಿರುವ 10 ಆಟಗಾರರು!

ಹೀಗೆ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಇಂಗ್ಲೆಂಡ್ ತಂಡವನ್ನು 183 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ ಪಂದ್ಯದ ಮೊದಲ ದಿನವೇ ತನ್ನ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ನ್ನೂ ಕೂಡ ಆರಂಭಿಸಿತು. ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮೊದಲನೇ ದಿನ ವಿಕೆಟ್ ಒಪ್ಪಿಸದೆ ಜವಾಬ್ದಾರಿಯುತ ಆಟವನ್ನಾಡಿದರು. ಮೊದಲ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿತು, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ತಲಾ 9 ರನ್ ಗಳಿಸಿದ್ದರು.

ಭಾರತ vs ಇಂಗ್ಲೆಂಡ್: ಈ ಕೆಟ್ಟ ದಾಖಲೆಯಲ್ಲಿ ಧೋನಿಯನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ!ಭಾರತ vs ಇಂಗ್ಲೆಂಡ್: ಈ ಕೆಟ್ಟ ದಾಖಲೆಯಲ್ಲಿ ಧೋನಿಯನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ!

ನಂತರ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ಮಾಡಿದರು. 107 ಎಸೆತಗಳಿಗೆ 36 ರನ್ ಗಳಿಸಿದ್ದ ರೋಹಿತ್ ಶರ್ಮಾ ರಾಬಿನ್ಸನ್ ಎಸೆತದಲ್ಲಿ ಸ್ಯಾಮ್ ಕರನ್‌ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೀಗೆ 36 ರನ್ ಗಳಿಸಿ ಔಟ್ ಆಗುವುದರ ಮೂಲಕ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದ್ದಾರೆ. ಹೌದು ರೋಹಿತ್ ಶರ್ಮಾ ಓವರ್‌ಸೀಸ್ ಪಂದ್ಯಗಳಲ್ಲಿ 30 ರನ್ ಗಳಿಸಿದ ನಂತರ ಒತ್ತಡಕ್ಕೆ ಸಿಲುಕಿ ವಿಕೆಟ್ ಒಪ್ಪಿಸುತ್ತಾರೆ ಎಂದು ರೋಹಿತ್ ಶರ್ಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಸಚಿನ್‌ಗೆ ನರ್ವಸ್ ನೈಂಟಿ, ರೋಹಿತ್ ಶರ್ಮಾಗೆ ನರ್ವಸ್ ಥರ್ಟಿ!

ಸಚಿನ್‌ಗೆ ನರ್ವಸ್ ನೈಂಟಿ, ರೋಹಿತ್ ಶರ್ಮಾಗೆ ನರ್ವಸ್ ಥರ್ಟಿ!

ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 36 ರನ್ ಗಳಿಸಿ ವಿಕೆಟ್ ಒಪ್ಪಿಸುತ್ತಾ ಇದ್ದಂತೆ ಟೀಕೆಗಳ ಸುರಿಮಳೆ ಸುರಿದಿದೆ. ನೆಟ್ಟಿಗರೊಬ್ಬರು ಈ ಹಿಂದೆ ಸಚಿನ್ ತೆಂಡೂಲ್ಕರ್ ನರ್ವಸ್ ನೈಂಟೀಸ್ ಸಮಸ್ಯೆಯನ್ನು ಎದುರಿಸುತ್ತಿದ್ದರು, ಅದೇ ರೀತಿ ಇದೀಗ ರೋಹಿತ್ ಶರ್ಮಾ ನರ್ವಸ್ ಥರ್ಟಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ರೋಹಿತ್ ಶರ್ಮಾರ ಕಾಲೆಳೆದಿದ್ದಾರೆ.

ಹ್ಯಾಟ್ರಿಕ್ 30

ಹ್ಯಾಟ್ರಿಕ್ 30

ರೋಹಿತ್ ಶರ್ಮಾ ಕಳೆದ 3 ಓವರ್‌ಸೀಸ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 34, 30 ಮತ್ತು 36 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಈ ಅಂಕಿ ಅಂಶಗಳನ್ನು ಇಟ್ಟುಕೊಂಡು ಸಹ ನೆಟ್ಟಿಗರು ರೋಹಿತ್ ಶರ್ಮಾ ಕುರಿತು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೊನೆಯ 4 ಟೆಸ್ಟ್ ಇನ್ನಿಂಗ್ಸ್‌ನಲ್ಲಿಯೂ 30+ಗೆ ಔಟ್

ಕೊನೆಯ 4 ಟೆಸ್ಟ್ ಇನ್ನಿಂಗ್ಸ್‌ನಲ್ಲಿಯೂ 30+ಗೆ ಔಟ್

ರೋಹಿತ್ ಶರ್ಮಾ ಆಡಿರುವ ಕೊನೆಯ 4 ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 37, 34, 30 ಮತ್ತು 36 ರನ್‌ಗಳನ್ನು ಕಲೆಹಾಕಿದ್ದಾರೆ. ಕೇವಲ ಓವರ್‌ಸೀಸ್ ಮಾತ್ರವಲ್ಲದೆ ಸ್ವದೇಶಿ ಪಿಚ್‌ಗಳಲ್ಲೂ ರೋಹಿತ್ ಶರ್ಮಾ 30ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ರೋಹಿತ್ ಶರ್ಮಾ ಕುರಿತು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

VIRAT KOHLI ಟೆಸ್ಟ್ ಮ್ಯಾಚ್ ನಲ್ಲಿ ಮಾಡಿದ ಹೊಸ ದಾಖಲೆ !! | Oneindia Kannada

ಹೀಗೆ ರೋಹಿತ್ ಶರ್ಮಾ ಮೂವತ್ತರ ಸಮಸ್ಯೆಯನ್ನು ಇಟ್ಟುಕೊಂಡು ಮೀಮ್ಸ್ ಮಾಡುವ ಮೂಲಕ ನೆಟ್ಟಿಗರು ರೋಹಿತ್ ಶರ್ಮಾ ಕುರಿತು ಟ್ವಿಟ್ಟರ್ ತುಂಬಾ ಸಾಲುಸಾಲು ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಇತ್ತ ರೋಹಿತ್ ಶರ್ಮಾ 36 ರನ್ ಗಳಿಸಿ ವಿಕೆಟ್ ಒಪ್ಪಿಸಿ ಟೀಕೆಗಳಿಗೆ ತುತ್ತಾಗಿದ್ದರೆ, ಅತ್ತ ವಿರಾಟ್ ಕೊಹ್ಲಿ ಟೆಸ್ಟ್ ಇತಿಹಾಸದಲ್ಲಿ 9ನೇ ಬಾರಿ ಶೂನ್ಯಕ್ಕೆ ಔಟ್ ಆಗುವುದರ ಮೂಲಕ ಟೆಸ್ಟ್ ಇತಿಹಾಸದಲ್ಲಿಯೇ ಅತಿಹೆಚ್ಚು ಬಾರಿ ಡಕ್ಔಟ್ ಆಗಿರುವ ಭಾರತೀಯ ನಾಯಕ ಎಂಬ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸದ್ಯ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಈ ಸಮಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿದೆ. ಟೀಮ್ ಇಂಡಿಯಾದ ಕೆಎಲ್ ರಾಹುಲ್ ಅಜೇಯ 57 ಮತ್ತು ರಿಷಭ್ ಪಂತ್ ಅಜೇಯ 7 ರನ್ ಗಳಿಸಿದ್ದಾರೆ.

Story first published: Thursday, August 5, 2021, 21:53 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X