ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ಟೆಸ್ಟ್: ಸ್ಟುವರ್ಟ್ ಬ್ರಾಡ್ ಅಲಭ್ಯತೆ ಬಹುತೇಕ ಖಚಿತ, ಜೇಮ್ಸ್ ಆಂಡರ್ಸನ್ ಕೂಡ ಅನುಮಾನ!

India vs England: Stuart Broad is expected to miss 2nd test while James Anderson is also doubtful

ಲಂಡನ್, ಆಗಸ್ಟ್ 11: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಎರಡೂ ತಂಡಗಳು ಕೂಡ ಗಾಯದ ಆಘಾತಕ್ಕೆ ಒಳಗಾಗುತ್ತಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶಾರ್ದೂಲ್ ಠಾಕೂರ್ ದ್ವಿತೀಯ ಟೆಸ್ಟ್‌ಗೆ ಅಲಭ್ಯವಾಗುವುದಿಲ್ಲ ಎಂಬುದನ್ನು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ಕೂಡ ಎರಡೆರಡು ಆಘಾತಕ್ಕೆ ಒಳಗಾಗಿದೆ.

ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಬುಧವಾರ ಅಭ್ಯಾಸದ ಸಂದರ್ಭದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಬದಲಿ ಆಟಗಾರನಾಗಿ ಸಕೀಬ್ ಮಹಮ್ಮದ್‌ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ಕರೆ ನೀಡಿದೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಮತ್ತೋರ್ವ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಕೂಡ ಗಾಯಗೊಂಡಿದ್ದಾರೆ. ತೊಡೆ ನೋವಿಗೆ ತುತ್ತಾಗಿರುವ ಜೇಮ್ಸ್ ಆಂಡರ್ಸನ್ ಬುಧವಾರ ಅಭ್ಯಾಸದಿಂದ ಹೊರಗುಳಿದಿದ್ದರು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.

ಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆ

ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಬೌಲರ್‌ಗಳು ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬರೊಬ್ಬರಿ ನಾಲ್ವರು ಪ್ರಮುಖ ವೇಗಿಗಳು ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ಗಾಯದ ಕಾರಣದಿಂದಾಗಿ ಹಾಗೂ ಮಾನಸಿಕ ಆರೋಗ್ಯದ ಕಾರಣದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದರು. ಮತ್ತೊಂದಡೆ ಕ್ರಿಸ್ ವೋಕ್ಸ್ ಕೂಡ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮತ್ತೋರ್ವ ವೇಗದ ಬೌಲರ್ ಒಲಿ ಸ್ಟೋನ್ ಸ್ಟ್ರೆಸ್ ಫ್ರ್ಯಾಕ್ಚರ್ ಕಾರಣದಿಂದಾಗಿ ಇಡೀ ಋತುವಿನಿಂದ ಹೊರಗುಳಿಯುತ್ತಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನಲ್ಲಿ ಹೆಚ್ಚಿನ ಗುಣಮಟ್ಟದ ಆಟಗಾರರನ್ನು ಹೊಂದಿರುವ ಕಾರಣದಿಂದಾಗಿ ರೊಟೇಶನ್ ಪದ್ದತಿಯನ್ನು ಅನುಸರಿಸಿಕೊಂಡು ಆಟಗಾರರ ಮೇಲಿನ ಒತ್ತಡನವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತಿದೆ. ಹೀಗಾಗಿ ಇಂಗ್ಲೆಂಡ್ ತಂಡದ ಪ್ರಮುಖ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್ಸನ್ ಕಳೆದ ಹಲವು ಸಂದರ್ಭಗಳಲ್ಲಿ ಪ್ರತ್ಯೇಕ ಪಂದ್ಯಗಳಲ್ಲಿ ಆಡಿಸಿಕೊಂಡು ಬರುತ್ತಿದೆ. ಆದರೆ ಈ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಮುಂದೆ ಹೆಚ್ಚಿನ ಆಯ್ಕೆಗಳು ಇಲ್ಲದ ಕಾರಣದಿಂದಾಗಿ ಮೊದಲ ಟೆಸ್ಟ್‌ನಲ್ಲಿ ಇಬ್ಬರು ಆಟಗಾರರನ್ನು ಒಂದೇ ಪಂದ್ಯದಲ್ಲಿ ಕಣಕ್ಕಿಳಿಸಿತ್ತು.

ಪ್ರಸಕ್ತ ಸಕ್ರಿಯವಾಗಿರುವ ಬೌಲರ್‌ಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅತಿ ಹೆಚ್ಚಿನ ವಿಕೆಟ್ ಪಡೆದ ಆಟಗಾರರಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 621 ವಿಕೆಟ್ ಪಡೆದುಕೊಂಡಿದ್ದು ಕಳೆದ ನಾಟಿಂಗ್‌ಹ್ಯಾಮ್ ಪಂದ್ಯದಲ್ಲಿ ಒಟ್ಟಾರೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್ 524 ವಿಕೆಟ್‌ಗಳನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪಡೆದಿದ್ದಾರೆ. ಈ ಇಬ್ಬರು ವೇಗಿಗಳು ಒಟ್ಟು 312 ಪಂದ್ಯಗಳ ಅನುಭವ ಹೊಂದಿದ್ದು 1145 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡ ದೊಡ್ಡ ಆಘಾತಕ್ಕೆ ಒಳಗಾಗಿದೆ.

ಪ್ರವಾಸಿ ಭಾರತ ತಂಡ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ತಂಡದ ವೇಗಿ ಶಾರ್ದೂಲ್ ಠಾಕೂರ್ ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇವರ ಸ್ಥಾನಕ್ಕೆ ಸ್ಪಿನ್ನರ್ ಆರ್ ಅಶ್ವಿನ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಈ ಸರಣಿಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದ ಆಟಗಾರ ಶುಬ್ಮನ್ ಗಿಲ್, ವಾಶಿಂಗ್ಟನ್ ಸುಂದರ್ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದರು. ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಕೂಡ ಗಾಯಗೊಂಡಿದ್ದ ಕಾರಣ ಮೊದಲ ಪಂದ್ಯದಲ್ಲಿ ಭಾಗಿಯಾಗಿರಲಿಲ್ಲ. ಇಶಾಂತ್ ಶರ್ಮಾ ಕೂಡ ಗಾಯದ ಕಾರಣದಿಂದಾಗಿಯೇ ಮೊದಲ ಪಂದ್ಯದಲ್ಲಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಈಗ ಈ ಇಬ್ಬರು ಕೂಡ ಚೇತರಿಸಿಕೊಂಡಿದ್ದು ಲಾರ್ಡ್ಸ್ ಅಂಗಳದಲ್ಲಿ ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದ ಆಯ್ಕೆಗೆ ಈ ಆಟಗಾರರು ಲಭ್ಯವಾಗಲಿದ್ದಾರೆ.

Story first published: Wednesday, August 11, 2021, 18:59 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X