ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್

India vs England: Upset over third umpire calls, visitors approach match-referee Srinath-posting

ಅಹ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್‌ ಮಧ್ಯೆ ಮೂರನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಪಂದ್ಯದ ವೇಳೆ ಅಂಪೈರ್ ತೀರ್ಮಾನದ ವಿರುದ್ಧ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮ್ಯಾಚ್ ರೆಫರೀ, ಕನ್ನಡಿಗ ಜಾವಗಲ್ ಶ್ರೀನಾಥ್ ಅವರಿಗೆ ದೂರಿತ್ತಿದ್ದಾರೆ.

2ನೇ ಪಂದ್ಯದಲ್ಲಿ 2ನೇ ಐದು ವಿಕೆಟ್‌ಗಳ ಗೊಂಚಲು ಪಡೆದ ಅಕ್ಷರ್ ಪಟೇಲ್2ನೇ ಪಂದ್ಯದಲ್ಲಿ 2ನೇ ಐದು ವಿಕೆಟ್‌ಗಳ ಗೊಂಚಲು ಪಡೆದ ಅಕ್ಷರ್ ಪಟೇಲ್

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನದಾಟದ ಮುಕ್ತಾಯದ ಬಳಿಕ ಜೋ ರೂಟ್ ಮತ್ತು ಕ್ರಿಸ್ ಸಿಲ್ವರ್‌ವುಡ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮ್ಯಾಚ್ ರೆಫರೀಗೆ ದೂರಿತ್ತಿದ್ದಾರೆ. ಅಂಪೈರ್ ತೀರ್ಪು ಆತಿಥೇಯರ ಪರವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ವಿವಾದ ಶುರುವಾಗಿದ್ದು ಭಾರತದ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಅವರ ಔಟ್ ವೇಳೆ. ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಗಿಲ್ ಅವರ ಕ್ಯಾಚನ್ನು ಸ್ಲಿಪ್‌ನಲ್ಲಿದ್ದ ಬೆನ್ ಸ್ಟೋಕ್ಸ್ ಪಡೆದಿದ್ದರು. ಆದರೆ ಸ್ಟೋಕ್ಸ್ ಚೆಂಡನ್ನು ನೆಲಕ್ಕೆ ತಾಗಿಸಿದ್ದಾರೆ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದರು.

ನರೇಂದ್ರ ಮೋದಿ ಸ್ಟೇಡಿಯಂ.. ರಿಲಯನ್ಸ್ ಎಂಡ್, ಅದಾನಿ ಎಂಡ್!ನರೇಂದ್ರ ಮೋದಿ ಸ್ಟೇಡಿಯಂ.. ರಿಲಯನ್ಸ್ ಎಂಡ್, ಅದಾನಿ ಎಂಡ್!

ಮತ್ತೊಂದು ಘಟನೆಯಲ್ಲಿ, ರೋಹಿತ್ ಶರ್ಮಾ ಅವರ ಸ್ಟಂಪಿಂಗ್ ವಿವಾದಕ್ಕೀಡಾಗಿತ್ತು. ಶರ್ಮಾ ಅವರನ್ನು ಬೆನ್ ಫೋಕ್ಸ್ ಸ್ಟಂಪ್ ಮೂಲಕ ಔಟ್ ಮಾಡಲು ಯತ್ನಿಸಿದ್ದರಾದರೂ ಶರ್ಮಾ ಸರಿಸಮಯದಲ್ಲಿ ಕಾಲನ್ನು ಗೆರೆಯ ಬಳಿ ಇರಿಸಿದ್ದರಿಂದ ಇದನ್ನು ಔಟ್ ತೀರ್ಪು ನೀಡಿರಲಿಲ್ಲ. ಹೀಗಾಗಿ ಕ್ಯಾಮರಾ ಆ್ಯಂಗಲ್‌ಗಳನ್ನು ಗಮನಿಸದೆಯೇ ಅಂಪೈರ್ ತೀರ್ಪಿತಿದ್ದಾರೆ ಎಂದು ಇಂಗ್ಲೆಂಡ್ ದೂರಿದೆ.

Story first published: Thursday, February 25, 2021, 13:03 [IST]
Other articles published on Feb 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X