2ನೇ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸುಲಭ ಜಯ

Written By:
2ನೇ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸುಲಭ ಜಯ | Oneindia Kannada
Kohli wins toss, opts to chase against SA; visitors play unchanged

ಸೆಂಚೂರಿಯನ್, ಫೆಬ್ರವರಿ 04: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು 118 ರನ್ನಿಗೆ ನಿಯಂತ್ರಿಸಿದ್ದಲ್ಲದೆ, ಸುಲಭ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಸ್ಕೋರ್ ಕಾರ್ಡ್

119ರನ್ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ 20.3 ಓವರ್ ಗಳಲ್ಲಿ 119/1 ಸ್ಕೋರ್ ಮಾಡಿ ಜಯ ದಾಖಲಿಸಿತು. ಶಿಖರ್ ಧವನ್ 56 ಎಸೆತಗಳಲ್ಲಿ 51ರನ್ ಹಾಗೂ ಕೊಹ್ಲಿ 50 ಎಸೆತಗಳಲ್ಲಿ 46ರನ್ ಗಳಿಸಿ ಅಜೇಯರಾಗಿ ಉಳಿದರು. ರೋಹಿತ್ ಶರ್ಮ 15 ರನ್ ಗಳಿಸಿ ರಬಾಡಾಗೆ ವಿಕೆಟ್ ಒಪ್ಪಿಸಿದರು.

India Vs South Africa, 2nd ODI: Kohli wins toss, opts to chase against SA; visitors play unchanged

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ಹಶೀಮ್ ಆಮ್ಲಾ 23 ಹಾಗೂ ಕ್ವಿಂಟಾನ್ ಡಿ ಕಾಕ್ 20ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಸಿಲುಕಿ, ದಕ್ಷಿಣ ಆಫ್ರಿಕಾ ತತ್ತರಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ

ಜೆಪಿ ಡುಮಿನಿ 25, ಕ್ರಿಸ್ ಮೋರಿಸ್ 14ರನ್ ಗಳಿಸಿ ಕೊಂಚ ಪ್ರತಿರೋಧ ವ್ಯಕ್ತಪಡಿಸಿದರು. ಚಾಹಲ್ ಅವರು 8.2 ಓವರ್ ಗಳಲ್ಲಿ 22ರನ್ನಿತ್ತು 5 ವಿಕೆಟ್ ಗಳಿಸಿದರೆ, ಕುಲದೀಪ್ ಯಾದವ್ ಅವರು 6 ಓವರ್ ಗಳಲ್ಲಿ 20ರನ್ನಿತ್ತು 3 ವಿಕೆಟ್ ಗಳಿಸಿದರು.

India Vs South Africa, 2nd ODI: Kohli wins toss, opts to chase against SA; visitors play unchanged

ಟಾಸ್ ವರದಿ: ಕಿಂಗ್ಸ್ ಮೀಡ್ ಡರ್ಬನ್ ನಲ್ಲಿ ಗೆಲುವು ಸಾಧಿಸಿದ ತಂಡವನ್ನೇ ಭಾರತ ಇಲ್ಲೂ ಆಡಿಸುತ್ತಿದೆ. ಆದರೆ, ದಕ್ಷಿಣ ಆಫ್ರಿಕಾ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಎಬಿ ಡಿ ವಿಲಿಯರ್ಸ್ ಗಾಯಾಳುಗಳಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಯುವ ಆಟಗಾರ ಐಡೆನ್ ಮಾರ್ಕಮ್ ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಖಾಯ ಜೊಂಡೋ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

33ನೇ ಶತಕ ಬಾರಿಸಿ ದಾಖಲೆ ಸ್ಥಾಪಿಸಿದ ಕೊಹ್ಲಿ!

ಎಡಗೈ ಸ್ಪಿನ್ನರ್ ತಬ್ರೇಜ್ ಷಂಶಿ ಅವರು ಆಡುತ್ತಿದ್ದಾರೆ. 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, February 4, 2018, 14:15 [IST]
Other articles published on Feb 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ