ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ವಿಶಿಷ್ಠ ದಾಖಲೆ ಪಟ್ಟಿ ಸೇರಿದ ಹನುಮ ವಿಹಾರಿ

India vs West Indies: Hanuma Vihari joins illustrious list of Indian middle order

ಕಿಂಗ್‌ಸ್ಟನ್, ಸೆಪ್ಟೆಂಬರ್ 2: ಆಂಧ್ರ ಪ್ರದೇಶದ ಬ್ಯಾಟ್ಸ್‌ಮನ್ ಹನುಮ ವಿಹಾರಿ ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ವಿಶಿಷ್ಠ ದಾಖಲೆ ಸಾಲಿನಲ್ಲೂ ವಿಹಾರಿ ಸೇರಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಉತ್ತಮ ಪ್ರದರ್ಶನ ನೀಡಿ ವಿಹಾರಿ ಗಮನ ಸೆಳೆದಿದ್ದಾರೆ.

ಎಂಎಸ್ ಧೋನಿ ಸರಿಗಟ್ಟಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಬ್ ಪಂತ್ಎಂಎಸ್ ಧೋನಿ ಸರಿಗಟ್ಟಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಬ್ ಪಂತ್

ನಾರ್ತ್‌ಸೌಂಡ್‌ನಲ್ಲಿ ನಡೆದಿದ್ದ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೊದಲ ಮತ್ತು ದ್ವಿತೀಯ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 32, 93 ರನ್‌ಗಳನ್ನು ಗಳಿಸಿದ್ದ ಹನುಮ ವಿಹಾರಿ ದ್ವಿತೀಯ ಟೆಸ್ಟ್‌ನಲ್ಲಿ ವಿಶ್ವಾಸದ ಬ್ಯಾಟಿಂಗ್‌ ನೀಡಿದ್ದರು.

ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 4ನೇ ದಿನ, Live ಸ್ಕೋರ್‌ಕಾರ್ಡ್

1
46251

ದ್ವಿತೀಯ ಟೆಸ್ಟ್‌ನಲ್ಲಿ ಶತಕ, ಅರ್ಧ ಶತಕ ಬಾರಿಸಿರುವ ವಿಹಾರಿ, ಟೆಸ್ಟ್‌ನಲ್ಲಿ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿರುವ ಭಾರತದ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

6ನೇ ಕ್ರಮಾಂಕ

6ನೇ ಕ್ರಮಾಂಕ

ದ್ವಿತೀಯ ಟೆಸ್ಟ್‌ನಲ್ಲಿ 6 ಕ್ರಮಾಂಕದಲ್ಲಿ ಬ್ಯಾಟ್‌ ಎತ್ತಿಕೊಂಡಿದ್ದ ವಿಹಾರಿ ಮೊದಲ ಇನ್ನಿಂಗ್ಸ್‌ನಲ್ಲಿ 111 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 53 ರನ್ ಬಾರಿಸಿದ್ದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 416, ದ್ವಿತೀಯ ಇನ್ನಿಂಗ್ಸ್‌ನಲ್ಲಿ 168 ರನ್ ಗಳಿಸಿ ಡಿಕ್ಲೇರ್‌ ಘೋಷಿಸಿದೆ.

ಅಗ್ರ ಸ್ಥಾನದಲ್ಲಿ ಉಮ್ರಿಗರ್

ಅಗ್ರ ಸ್ಥಾನದಲ್ಲಿ ಉಮ್ರಿಗರ್

ಟೆಸ್ಟ್‌ ಕ್ರಿಕೆಟ್‌ ಪಂದ್ಯವೊಂದರಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಂದು ಉತ್ತಮ ಬ್ಯಾಟಿಂಗ್ ತೋರಿದ 5ನೇ ಭಾರತೀಯನಾಗಿ ಹನುಮ ವಿಹಾರಿ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪಾಲಿ ದಂತಕತೆ ಉಮ್ರಿಗರ್ ಇದ್ದಾರೆ. ಉಮ್ರಿಗರ್ 1962ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದಿದ್ದ ವಿಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ 56 & 172* ರನ್ ಬಾರಿಸಿದ್ದರು.

4ರಲ್ಲಿ ಸಚಿನ್ ತೆಂಡೂಲ್ಕರ್

4ರಲ್ಲಿ ಸಚಿನ್ ತೆಂಡೂಲ್ಕರ್

ಇದೇ ಸಾಧನೆಯ ಪಟ್ಟಿಯಲ್ಲಿ 1967ರಲ್ಲಿ ಲೀಡ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 64 & 148 ರನ್ ಬಾರಿಸಿದ್ದ ಮನ್ಸೂರ್ ಆಲಿ ಖಾನ್ ಪಟೌಡಿ ದ್ವಿತೀಯ, 1968ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ 74 & 101 ರನ್ ಗಳಿಸಿದ್ದ ಎಂಎಲ್‌ ಜಯಸಿಂಹ ತೃತೀಯ, 1990ರಲ್ಲಿ ಮ್ಯಾನ್‌ಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 68 & 119* ರನ್ ಬಾರಿಸಿದ್ದ ಸಚಿನ್ ತೆಂಡೂಲ್ಕರ್ 4ನೇ ಸ್ಥಾನದಲ್ಲಿ ಇದ್ದಾರೆ.

ಬೂಮ್ರಾ ಮ್ಯಾಜಿಕ್ ಎಸೆತ

ಬೂಮ್ರಾ ಮ್ಯಾಜಿಕ್ ಎಸೆತ

ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದ್ದರಿಂದ ವಿಂಡೀಸ್ 117ರ ಕನಿಷ್ಠ ರನ್‌ಗೆ ಇನ್ನಿಂಗ್ಸ್‌ ಮುಗಿಸಿತ್ತು. ಈ ಇನ್ನಿಂಗ್ಸ್‌ನಲ್ಲಿ ಬೂಮ್ರಾ 27 ರನ್‌ ನೀಡಿ 6 ವಿಕೆಟ್ ಮುರಿದಿದ್ದರು. ವೆಸ್ಟ್ ಇಂಡೀಸ್ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

Story first published: Monday, September 2, 2019, 17:18 [IST]
Other articles published on Sep 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X