ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈ ಆಟಗಾರನ ಕೊರತೆ ಕಾಡಲಿದೆ: ದಾದಾ

ಈ ಆಟಗಾರನಿಂದ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಆಗಲಿದೆ ದೊಡ್ಡ ಸಮಸ್ಯೆ..? | Oneindia Kannada
India will miss Rishabh Pant in WC: Ganguly

ಕೋಲ್ಕೊತಾ, ಮೇ 14: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರ ಕೊರತೆ ಕಾಡಲಿದೆ ಎಂದು ದಾದಾ ಖ್ಯಾತಿಯ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತದ 15 ಆಟಗಾರರ ಪಟ್ಟಿಯಲ್ಲಿ ಡೆಲ್ಲಿಯ ಸ್ಫೋಟಕ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಪಂತ್‌ ಬದಲಾಗಿ ಅನುಭವಿ ದಿನೇಶ್‌ ಕಾರ್ತಿಕ್‌ ಅವರನ್ನು ಹೆಚ್ಚುವರಿ ವಿಕೆಟ್‌ಕೀಪರ್‌ ಸ್ಥಾನದಲ್ಲಿ ವಿಶ್ವಕಪ್‌ ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.

 IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌! IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌!

ಆದರೆ, ಇತ್ತೀಚೆಗಷ್ಟೇ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಪಂತ್‌ ಭರ್ಜರಿ ಬ್ಯಾಟಿಂಗ್‌ ಮತ್ತು ವಿಕೆಟ್‌ಕೀಪಿಂಗ್‌ ಮೂಲಕ ಮಿಂಚಿದ್ದಾರೆ. ಅಲ್ಲದೆ 2012ರ ಬಳಿಕ ಇದೇ ಮೊದಲ ಬಾರಿ ಡೆಲ್ಲಿ ತಂಡವನ್ನು ಪ್ಲೇ ಆಪ್ಸ್‌ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ! ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ!

"ವಿಶ್ವಕಪ್‌ ವೇಳೆ ಭಾರತ ತಂಡಕ್ಕೆ ಪಂತ್‌ ಅವರ ಕೊರತೆ ಕಾಡಲಿದೆ,'' ಎಂದು ಹೇಳಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಸೌರವ್‌, ಇದೇ ವೇಳೆ ಗಾಯಾಳು ಕೇದಾರ್‌ ಜಾಧವ್‌ ಅವರ ಸ್ಥಾನದಲ್ಲಿ ಪಂತ್‌ ಅವರನ್ನು ತಂಡಕ್ಕೆ ಸೇರಿಸಬಹುದಲ್ಲವೆ ಎಂದು ಕೇಳಲಾದ ಪ್ರಶ್ನೆಗೆ, "ಈ ರೀತಿ ಹೇಳುವುದು ಸರಿಯಲ್ಲ. ಕೇದಾರ್‌ ಬಹು ಬೇಗನೆ ಚೇತರಿಸಲಿ ಎಂದು ಆಶಿಸುತ್ತೇನೆ. ಆದರೂ ತಂಡಕ್ಕೆ ಪಂತ್‌ ಅವರ ಕೊರತೆ ಕಾಡಲಿದೆ,'' ಎಂದು ಉತ್ತರಿಸಿದ್ದಾರೆ.

 IPL: ಮುಂಬೈ ಇಂಡಿಯನ್ಸ್‌ಗೆ 4ರ, ರೋಹಿತ್‌ ಶರ್ಮಾಗೆ 5ರ ಸಂಭ್ರಮ! IPL: ಮುಂಬೈ ಇಂಡಿಯನ್ಸ್‌ಗೆ 4ರ, ರೋಹಿತ್‌ ಶರ್ಮಾಗೆ 5ರ ಸಂಭ್ರಮ!

ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ನಾಲ್ಕನೇ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್‌ ಶರ್ಮಾ ಅವರ ನಾಯಕತ್ವದ ಕುರಿತಾಗಿಯೂ ಮಾತನಾಡಿರುವ ಸೌರವ್‌, 'ರೋಹಿತ್‌ ಶ್ರೇಷ್ಠ ನಾಯಕರಲ್ಲಿ ಒಬ್ಬರು' ಎಂದು ಹೇಳಿದ್ದಾರೆ. "ಈ ತಲೆಮಾರಿನ ಶ್ರೇಷ್ಠ ನಾಯಕರಲ್ಲಿ ರೋಹಿತ್‌ ಕೂಡ ಒಬ್ಬರು. ಚೆನ್ನೈ ಮತ್ತು ಮುಂಬೈ ಎರಡೂ ಅದ್ಭುತ ತಂಡಗಳು,'' ಎಂದಿದ್ದಾರೆ.

 'ಭಾರತ ತಂಡ ಅದ್ಭುತವಾಗಿದೆ, ಆದರೆ ವಿಶ್ವಕಪ್‌ ಗೆಲ್ಲುತ್ತೆ ಅನ್ನೋಕಾಗಲ್ಲ!' 'ಭಾರತ ತಂಡ ಅದ್ಭುತವಾಗಿದೆ, ಆದರೆ ವಿಶ್ವಕಪ್‌ ಗೆಲ್ಲುತ್ತೆ ಅನ್ನೋಕಾಗಲ್ಲ!'

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಕೇವಲ 1 ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ದಾಖಲೆಯ ನಾಲ್ಕನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು.

ವಿಶ್ವಕಪ್‌ಗೆ ಭಾರತ ಪ್ರಕಟಿಸಿರುವ ತಂಡ ಇಂತಿದೆ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ವಿಜಯ್‌ ಶಂಕರ್‌, ಕೇದಾರ್‌ ಜಾಧವ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ.

Story first published: Tuesday, May 14, 2019, 13:30 [IST]
Other articles published on May 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X