ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಏಷ್ಯಾ ಕಪ್‌ನ ಮೊದಲ ಪಂದ್ಯವನ್ನೇ ಗೆದ್ದು ಬೀಗಿತ್ತು ಭಾರತ

ಬೆಂಗಳೂರು, ಸೆಪ್ಟೆಂಬರ್ 13: ಕೆಲವೇ ದಿನಗಳಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಪ್ರಾರಂಭವಾಗಲಿದೆ. ಬಹಳ ವರ್ಷಗಳ ಇತಿಹಾಸವಿರುವ ಕೆಲವೇ ಏಕದಿನ ಕ್ರಿಕೆಟ್ ಟೂರ್ನಿಗಳಲ್ಲಿ ಇದೂ ಸಹ ಒಂದು.

1984 ರಲ್ಲಿ ಮೊದಲ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆಗಿನ ಮೊಟ್ಟ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ನಗೆ ಬೀರಿತ್ತು. ಶ್ರೀಲಂಕ, ಪಾಕಿಸ್ತಾನ ಭಾರತದ ನಡುವೆ ಸ್ನೇಹ ಬಂಧ ಹೆಚ್ಚಿಸಲು ಪ್ರಾರಂಭವಾದ ಈ ಏಷ್ಯಾ ಕಪ್‌ ಮೇಲೆ ಆ ನಂತರದಲ್ಲಿ ರಾಜಕೀಯದ ಕರಿನೆರಳು ಬಿದ್ದಿತ್ತಾದರೂ ಸಹ ಕ್ರಿಕೆಟ್ ಎಲ್ಲದನ್ನೂ ಮೀರಿ ನಿಂತಿತ್ತು.

 India won the inaugural edition of Asia Cup in 1984

1984 ರಲ್ಲಿ ಮೊದಲ ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯ ಶ್ರೀಲಂಕಾ ಮತ್ತು ಭಾರತದ ನಡುವೆ ನಡೆದಿತ್ತು. ಆಗತಾನೆ ವಿಶ್ಕಪ್ ಗೆದ್ದಿದ್ದ ಭಾರತ ತಂಡ ಸಹಜವಾಗಿಯೇ ಟೂರ್ನಿಯ ಫೇವರೇಟ್ ಆಗಿತ್ತು. ಆದರೆ ವಿಶ್ವಕಪ್ ಹೀರೋಗಳಾದ ಕಪಿಲ್ ದೇವ್, ಕೃಷ್ಣಮಾಚಾರಿ ಶ್ರೀಕಾಂತ್, ಸೈಯದ್ ಕಿರ್ಮಾನಿ, ಮೊಹಿಂದರ್ ಅಮರ್ನಾಥ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ಸುನಿಲ್ ಗವಾಸ್ಕರ್, ಮನೋಜ್ ಪ್ರಭಾಕರ್ ಇದ್ದರು

ಸುನಿಲ್ ಗವಾಸ್ಕರ್, ಮನೋಜ್ ಪ್ರಭಾಕರ್ ಇದ್ದರು

ಆದರೆ ವಿಶ್ವಕಪ್ ಹೀರೋಗಳಾದ ಸುನಿಲ್ ಗವಾಸ್ಕರ್, ಮನೋಜ್ ಪ್ರಭಾಕರ್, ಚೇತನ್ ಶರ್ಮಾ, ಸುರೀಂದ್ರ ಖನ್ನಾ ತಂಡದಲ್ಲಿದ್ದು. ಮೊದಲ ಏಷ್ಯಾ ಕಪ್‌ ಕೇವಲ ಮೂರು ಪಂದ್ಯಗಳದ್ದಾಗಿತ್ತು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತ ವಿಜಯ ಸಾಧಿಸಿ ಮೊದಲ ಏಷ್ಯಾ ಕಪ್ ಅನ್ನು ಮುಡಿಗೇರಿಸಿಕೊಂಡಿತು. ಸುನಿಲ್ ಗವಾಸ್ಕರ್ ನಾಯಕರಾಗಿದ್ದರು.

ಶ್ರೀಲಂಕಾವನ್ನು 94 ಕ್ಕೆ ಆಲ್‌ಔಟ್

ಶ್ರೀಲಂಕಾವನ್ನು 94 ಕ್ಕೆ ಆಲ್‌ಔಟ್

ಆಗ ತಾನೆ ಕ್ರಿಕೆಟ್‌ ಜಗತ್ತಿಗೆ ಕಾಲಿಟ್ಟಿದ್ದ ಶ್ರೀಲಂಕಾ ತಂಡವನ್ನು ಮೊದಲ ಪಂದ್ಯದಲ್ಲಿ ಬಹಳ ಸುಲಭವಾಗಿ ಭಾರತ ಸೋಲಿಸಿತು. ಭಾರತದ ಬೌಲರ್‌ಗಳು ಶ್ರೀಲಂಕಾವನ್ನು ಕೇವಲ 94 ರನ್‌ಗಳಿಗೆ ಆಲ್‌ಔಟ್ ಮಾಡಿದರು. ಚೇತನ್ ಶರ್ಮಾ, ಮನೋಜ್ ಪ್ರಭಾಕರ್ ತಲಾ ಮೂರು ವಿಕೆಟ್ ಗಳಿಸಿ ಮಿಂಚಿದರು.

ಪಾಕಿಸ್ತಾನವನ್ನೂ ಬಗ್ಗುಬಡಿದಿದ್ದ ಭಾರತ

ಪಾಕಿಸ್ತಾನವನ್ನೂ ಬಗ್ಗುಬಡಿದಿದ್ದ ಭಾರತ

ನಂತರದ ಪಂದ್ಯದಲ್ಲಿ ಆಗಲೂ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿದ್ದ ಪಾಕಿಸ್ತಾನವನ್ನು ಎದುರಿಸಿದ ಭಾರತ ತಂಡ ಅಲ್ಲಿಯೂ ಸಹ ಸುಲಭ ಗೆಲುವನ್ನೇ ಸಾಧಿಸಿತು. ಟೂರ್ನಿಯಲ್ಲಿ ಎರಡು ಗೆಲುವು ಸಾಧಿಸಿದ ಭಾರತ ಪ್ರಶಸ್ತಿ ವಿಜೇತ ಎನಿಸಿಕೊಂಡರೆ ಪಾಕಿಸ್ತಾನ ಒಂದು ಪಂದ್ಯ ಮಾತ್ರ ಗೆದ್ದಿತು. ಶ್ರೀಲಂಕಾ ಎರಡೂ ಪಂದ್ಯವನ್ನು ಸೋತಿತು.

ಈ ಬಾರಿ ದುಬೈನಲ್ಲಿ ಟೂರ್ನಿ

ಈ ಬಾರಿ ದುಬೈನಲ್ಲಿ ಟೂರ್ನಿ

ಈ ಬಾರಿ ಏಷ್ಯಾ ಕಪ್ ಟೂರ್ನಿಯು ದುಬೈನಲ್ಲಿ ನಡೆಯಲಿದೆ. ಸೆಪ್ಟೆಂಬರ್ 15ಕ್ಕೆ ಮೊದಲ ಪಂದ್ಯವು ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಬಾರಿ ಹಾಂಕಾಂಗ್ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 19ರಂದು ಪಂದ್ಯ ನಡೆಯಲಿದೆ.

Story first published: Friday, September 14, 2018, 18:28 [IST]
Other articles published on Sep 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X