ಗಾಯಾಳು ಕಗಿಸೊ ರಬಾಡ ಐಪಿಎಲ್‌ಗೆ ಅಲಭ್ಯ, ಡೆಲ್ಲಿಗೆ ಹಿನ್ನೆಡೆ

Posted By:
Injured Kagiso Rabada ruled out from IPL

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್ ಕಗಿಸೊ ರಬಾಡಾ ಅವರು ಗಾಯದ ಕಾರಣದಿಂದ ಮೂರು ತಿಂಗಳ ಕಾಲ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯಬೇಕಿರುವ ಕಾರಣ ಅವರು ಈ ಬಾರಿಯ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ರಬಾಡಾ ಅವರನ್ನು 4.5 ಕೋಟಿ ಹಣಕ್ಕೆ ಖರೀದಿಸಿತ್ತು. ಇದೀಗ ರಬಾಡಾ ಅವರು ಪೂರ್ಣ ಸರಣಿಗೆ ಅಲಭ್ಯರಾಗಿರುವ ಕಾರಣ ಡೆಲ್ಲಿಯು ಪರ್ಯಾಯ ಬೌಲರ್‌ಗಾಗಿ ಹುಡುಕಾಟ ನಡೆಸಬೇಕಿದೆ.

ಡೆಲ್ಲಿ ತಂಡದ ಪ್ರಮುಖ ಬೌಲರ್ ಆಗಿದ್ದ ರಬಾಡಾ ಅವರ ಅನುಪಸ್ಥಿತಿಯಿಂದ ಡೆಲ್ಲಿ ಬೌಲಿಂಗ್‌ ವಿಭಾಗಕ್ಕೆ ಹೊಡೆತ ಬೀಳಲಿದ್ದು, ರಬಾಡಾ ಅವರಷ್ಟೆ ಕ್ಷಮತೆಯುಳ್ಳ ಬೌಲರ್‌ ಅನ್ನು ಸರಣಿಯ ಪ್ರಾರಂಭದ ಈ ಹಂತದಲ್ಲಿ ಹುಡುಕುವುದು ಡೆಲ್ಲಿಗೆ ಕಷ್ಟವಾಗಲಿದೆ. ಇದು ಆ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುವುದನ್ನೂ ಅಲ್ಲಗಳೆಯುವಂತಿಲ್ಲ.

ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್‌ ಆಗಿರುವ ರಬಾಡಾ ಅವರು ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದರು.

ಕೆಳ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 8 ಓವರ್‌ ಮಾತ್ರ ಅವರು ಬೌಲಿಂಗ್ ಮಾಡಿದ್ದರು.

ರಬಾಡಾ ಅವರು ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ದ.ಆಫ್ರಿಕಾ ತಂಡದ ಮ್ಯಾನೇಜರ್‌, 'ರಬಾಡಾ ಅವರಿಗೆ ಚಿಕಿತ್ಸೆ ಮತ್ತು ಹೆಚ್ಚಿನ ವಿಶ್ರಾಂತಿ ಅಗತ್ಯವಿರುವ ಕಾರಣ ಅವರು ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ' ಎಂದಿದ್ದಾರೆ.

ಜುಲೈ ನಲ್ಲಿ ನಡೆಯಲಿರುವ ದ.ಆಫ್ರಿಕಾ-ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಗೆ ಅವರು ಮತ್ತೆ ಕ್ರಿಕೆಟ್‌ ಅಂಗಳಕ್ಕಿಳಿಯಲಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, April 6, 2018, 16:14 [IST]
Other articles published on Apr 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ