ಯುವತಾರೆ ರಿಷಬ್ ಪಂತ್ ಅಬ್ಬರ, ಗುಜರಾತ್ ತತ್ತರ

Posted By:

ರಾಜ್ ಕೋಟ್,ಮೇ 04: ಭಾರತದ ಭವಿಷ್ಯದ ತಾರೆ ದೆಹಲಿಯ ರಿಷಬ್ ಪಂತ್ ಮತ್ತೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಪಂತ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗುಜರಾತ್ ಲಯನ್ಸ್ ತಂಡದ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಹಿಂದಿನ ಪಂದ್ಯದಲ್ಲಿ 1 ರನ್ ಗಳ ರೋಚಕ ಸೋಲು ಕಂಡಿದ್ದ ಡೆಲ್ಲಿ, ಈಗ ಸೇಡು ತೀರಿಸಿಕೊಂಡಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ಪರ 18 ಎಸೆತಗಳಲ್ಲಿ 50ರನ್ ದಾಖಲಿಸಿದ್ದ ರಿಷಬ್ ಪಂತ್ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಮಿಂಚುತ್ತಿದ್ದಾರೆ.

IPL 2016: Rishabh Pant shines as Delhi Daredevils thrash Gujarat Lions

150ರನ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆರಂಭಿಕ ಜೋಡಿ 115 ರನ್ ಸೇರಿಸಿತು. ಅಂತಿಮವಾಗಿ
17.2 ಓವರ್​ಗಳಲ್ಲಿ 2ವಿಕೆಟ್​ಗೆ 150 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

ಗುಜರಾತ್ ಲಯನ್ಸ್ ಬೌಲರ್ಸ್ ಗಳನ್ನು ಕಾಡಿದ ಪಂತ್ 40 ಎಸೆತಗಳಲ್ಲಿ 69ರನ್ (9x4, 2x6) ಚೆಚ್ಚಿ ಎಲ್ಲರನ್ನು ರಂಜಿಸಿದರು. ಡಿ ಕಾಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 45 ಎಸೆತಗಳಲ್ಲಿ 46(4x4,1x6)ರನ್ ಗಳಿಸಿ ಗೆಲುವಿಗೆ ಬುನಾದಿ ಹಾಕಿಕೊಟ್ಟರು. ನಂತರ ಬಂದ ಸಂಜು ಸಾಮ್ಸನ್ 19 ರನ್, ಜೆಪಿ ಡುಮಿನಿ 13 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಗುಜರಾತ್ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದೆ 7 ವಿಕೆಟ್​ಗೆ 149 ರನ್ ಮಾತ್ರ ಗಳಿಸಿತು. ಬ್ರೆಂಡನ್ ಮೆಕ್ಕಲಂ(1) ಮತ್ತು ಡ್ವೇನ್ ಸ್ಮಿತ್(15) , ಆರನ್ ಫಿಂಚ್(5) ವಿಫಲರಾದ ನಂತರ ಸುರೇಶ್ ರೈನಾ 24, ದಿನೇಶ್ ಕಾರ್ತಿಕ್ 43ಎಸೆತಗಳಲ್ಲಿ 53ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 36ರನ್(26 ಎಸೆತ, 4‍X4,1X6) ನೆರವಿನಿಂದ 149 ರನ್ ಗಳಿಸಿದ್ದೇ ದೊಡ್ಡ ಸಾಧನೆ, ಡೆಲ್ಲಿ ಪರ ಸ್ಪಿನ್ನರ್ 3 ಓವರ್ ಗಳಲ್ಲಿ 23ರನ್ನಿತ್ತು 2 ವಿಕೆಟ್ ಪಡೆದು ಗಮನ ಸೆಳೆದರು.

Story first published: Wednesday, May 4, 2016, 11:45 [IST]
Other articles published on May 4, 2016
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ