ಯುವ ಪ್ರತಿಭೆ ಸುಂದರ್ ಹೆಸರಲ್ಲಿ 'ವಾಷಿಂಗ್ಟನ್' ಏಕಿದೆ?

Posted By:

ಚೆನ್ನೈ, ಮೇ.18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ )10 ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದಲ್ಲಿ ಆಡುತ್ತಿರುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಹೆಸರಿನ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಸುಂದರ್ ಹೆಸರಿಗೆ ವಾಷಿಂಗ್ಟನ್ ಹೇಗೆ ಸೇರ್ಪಡೆಯಾಯಿತು ಎಂಬುದನ್ನು ಸುಂದರ್ ಅವರ ತಂದೆ ವಿವರಿಸಿದ್ದಾರೆ.

ತಮಿಳುನಾಡಿನ 17 ವರ್ಷ ವಯಸ್ಸಿನ ಯುವ ಪ್ರತಿಭೆ ವಾಷಿಂಗ್ಟನ್ ಸುಂದರ್ ಅವರು ಐಪಿಎಲ್ 10ರಲ್ಲಿ ಪುಣೆ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಂದ ತೆರವಾಗಿದ್ದ ಸ್ಪಿನ್ನರ್ ಸ್ಥಾನವನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 16ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರು 3 ಪ್ರಮುಖ ವಿಕೆಟ್ ಉರುಳಿಸಿ, ಪಂದ್ಯಕ್ಕೆ ಒಳ್ಳೆ ತಿರುವು ನೀಡಿದರು.

IPL 2017: MS Washington Sundar did not get his name from American city

ಈ ಪಂದ್ಯದಲ್ಲಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿ ತಂಡವನ್ನು ಫೈನಲಿಗೇರಿಸಿದರು. ಪುಣೆ ತಂಡ ಮೇ 21ರಂದು ಹೈದರಾಬಾದಿನಲ್ಲಿ ಅಂತಿಮ ಹಣಾಹಣಿಗೆ ಸಜ್ಜಾಗುತ್ತಿದೆ.

ಹೆಸರಿನ ರಹಸ್ಯ: ವಾಷಿಂಗ್ಟನ್ ಎಂಬ ಹೆಸರಿನ ಬಗ್ಗೆ ಸುಂದರ್ ಅವರ ತಂದೆ 'ದಿ ಹಿಂದೂ' ಪತ್ರಿಕೆ ಜತೆ ಗುರುವಾರ (ಮೇ 18) ಮಾತನಾಡಿ, ವಿವರಿಸಿದ್ದಾರೆ. ವಾಷಿಂಗ್ಟನ್ ಹೆಸರಿಗೂ ಅಮೆರಿಕದ ನಗರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

' ನಾನೊಬ್ಬ ಹಿಂದೂ ಕುಟುಂಬದಲ್ಲಿ ಬೆಳೆದು ಬಂದವನು. ನಮ್ಮ ಮನೆಯಿಂದ ಎರಡು ಬೀದಿ ಆಚೆಗೆ ಟ್ರಿಪ್ಲಿಕೇನ್(ಚೆನ್ನೈನ ಪ್ರದೇಶ) ನಲ್ಲಿ ಆರ್ಮಿಯಲ್ಲಿದ್ದ ಪಿಡಿ ವಾಷಿಂಗ್ಟನ್ ಎಂಬುವರು ವಾಸವಾಗಿದ್ದರು. ಅವರು ನಾವು ಮರೀನಾ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡುವುದನ್ನು ಗಮನಿಸುತ್ತಿದ್ದರು.

ಬಡತನದಲ್ಲಿದ್ದ ನನಗೆ ಯೂನಿಫಾರ್ಮ್, ಶಾಲೆ ಫೀ, ಪುಸ್ತಕ ಎಲ್ಲವನ್ನು ನೀಡುತ್ತಿದ್ದರು. ನನ್ನ ಕ್ರಿಕೆಟ್ ಆಟವನ್ನು ಬಹುವಾಗಿ ಮೆಚುತ್ತಿದ್ದರು. ನನ್ನ ಹೆಸರು ರಣಜಿ ಟ್ರೋಫಿ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಾಗ ವಾಷಿಂಗ್ಟನ್ ಗೆ ಆದ ಸಂತೋಷ ಅಷ್ಟಿಷ್ಟಲ್ಲ.

1999ರಲ್ಲಿ ವಾಷಿಂಗ್ಟನ್ ಅವರು ನಿಧನರಾದರು. ಕೆಲ ತಿಂಗಳುಗಳ ಬಳಿಕ(ಅಕ್ಟೋಬರ್ 05)ರಂದು ಗಂಡು ಮಗು ಜನನವಾಯಿತು.
ಹಿಂದೂ ಸಂಪ್ರದಾಯದಂತೆ ಮಗುವಿನ ಕಿವಿಯಲ್ಲಿ ದೇವರ ಹೆಸರು( 'ಶ್ರೀನಿವಾಸ') ಮೂರು ಬಾರಿ ಕೂಗಿ ಹೇಳಿದೆ.

ಆದರೆ, ಪ್ರಾತಃ ಸ್ಮರಣೀಯರಾದ ವಾಷಿಂಗ್ಟನ್ ರನ್ನು ಗೌರವಿಸಲು ಮಗನಿಗೆ ವಾಷಿಂಗ್ಟನ್ ಸುಂದರ್ ಎಂದು ಮರು ನಾಮಕರಣ ಮಾಡಿದೆ. ನನಗೆ ಇನ್ನೊಬ್ಬ ಮಗ ಇದ್ದಿದ್ದರೆ ಅವನಿಗೆ ವಾಷಿಂಗ್ಟನ್ ಜ್ಯೂನಿಯರ್ ಎಂದೇ ಹೆಸರಿಡುತ್ತಿದ್ದೆ ಎಂದು ಸುಂದರ್ ಅವರ ತಂದೆ ಎಂ. ಸುಂದರ್ ಹೇಳಿದ್ದಾರೆ. ಎಂ ಸುಂದರ್ ಅವರು ತಮಿಳುನಾಡಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಅವರ ಮಗ ಅಂಡರ್ 19 ಟೀಂ ಇಂಡಿಯಾ, ಐಪಿಎಲ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡುತ್ತಿದ್ದಾರೆ.(ಒನ್ ಇಂಡಿಯಾ ಸುದ್ದಿ)

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, May 18, 2017, 19:27 [IST]
Other articles published on May 18, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ