ಉತ್ತಮ ಮೊತ್ತದತ್ತ ರಾಜಸ್ಥಾನ ರಾಯಲ್ಸ್, ಮಳೆಯಿಂದ ಅಡಚಣೆ

Written By:
ipl-2018-match-06-rajasthan-royals-delhi-daredevils

ಐಪಿಎಲ್‌ 2018ರ ಆರನೇ ಪಂದ್ಯ ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ನಡುವೆ ನಡೆಯುತ್ತಿದ್ದು, ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡವು 17.5 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ. ಮಳೆ ಬಂದ ಕಾರಣ ಪಂದ್ಯಕ್ಕೆ ಅಡಚಣೆ ಉಂಟಾಗಿದೆ.

ರಾಜಸ್ಥಾನದ ತವರು ನೆಲ ಜೈಪುರದ ಹವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಈ ಮುಂಚೆ ಇತ್ತಂಡಗಳು ಆಡಿದ ಒಂದೊಂದು ಪಂದ್ಯಗಳನ್ನು ಸೋತಿವೆ.

ರಾಜಸ್ಥಾನ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ನಾಯಕ ಅಜಿಂಕ್ಯಾ ರಹಾನೆ 45 ರನ್ ಗಳಿಸಿದರು. ಉತ್ತಮವಾಗಿ ಆಡಿದ ಯುವಕ ಸಂಜು ಸ್ಯಾಮ್‌ಸನ್‌ 22 ಎಸೆತಕ್ಕೆ 37 ರನ್ ಗಳಿಸಿ ರನ್ ವೇಗ ಹೆಚ್ಚಿಸಿದರು. ಜಾಸ್ ಬಟ್ಲರ್‌ 18 ಎಸೆತಕ್ಕೆ 29 ರನ್ ಗಳಿಸಿ ಔಟಾದರು.

ರಾಜಸ್ಥಾನ ತಂಡದ ಮೊತ್ತ 17.5 ಓವರ್‌ಗೆ 153-5 ಆಗಿದ್ದಾಗ ಮಳೆ ಬಂದ ಕಾರಣ ಕೆಲ ಕಾಲ ಪಂದ್ಯವನ್ನು ತಡೆಯಲಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 11, 2018, 19:42 [IST]
Other articles published on Apr 11, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ