ಕರಾರುವಕ್ ದಾಳಿಗೆ ಕುಸಿದ ಮುಂಬೈ, ಹೈದರಾಬಾದ್ ಗೆಲ್ಲಲು 148 ರನ್‌ ಗುರಿ

Posted By:
Sun risers Hyderabad won the toss and choose to field

ಐಪಿಎಲ್‌ 2018ರ ಏಳನೇ ಪಂದ್ಯದಲ್ಲಿ ಇಂದು ಸನ್‌ರೈಸರ್ಸ್‌ ಹೈದರಾಭಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದು, ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 147 ರನ್ ಪೇರಿಸಿದೆ.

ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲೂ 11 ರನ್‌ಗಳಿಗೆ ಔಟ್ ಆದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸಮನ್‌ ಲಿವಿಸ್ ಕೆಲವು ಅದ್ಬುತ ಹೊಡೆತಗಳನ್ನು ಹೊಡೆದರಾದರೂ 29 ರನ್‌ಗಳಿಗೆ ಔಟಾದರು.

ಸ್ಕೋರ್ ಕಾರ್ಡ್, ಗ್ರಾಫಿಕ್ಸ್, ಕಾಮೆಂಟ್ರಿ

ಯುವ ಆಟಗಾರ ಇಶಾನ್ ಕಿಶನ್ (9) ಹೆಚ್ಚು ಹೊತ್ತು ಸ್ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೃನಾಲ್ ಪಾಂಡ್ಯಾ ಕೂಡಾ 15 ರನ್ ಗಳಿಸಿ ಅದೇ ಹಾದಿ ಹಿಡಿದರು. 2 ಸಿಕ್ಸರ್ 3 ಬೌಂಡರಿ ಭಾರಿಸಿ ಭರವಸೆ ಮೂಡಿಸಿದ್ದ ಕೀರನ್ ಪೊಲಾರ್ಡ್‌ 28 ರನ್ ಆಗಿದ್ದಾಗ ಧವನ್‌ಗೆ ಕ್ಯಾಚಿತ್ತು ತೆರಳಿದರು. ಉತ್ತಮ ಹೋರಾಟ ನಡೆಸಿದ ಸೂರ್ಯ ಕುಮಾರ್ ಯಾದವ್ 28 ರನ್ ಗಳಿಸಿದರು.

ಹೈದರಾಬಾದ್ ಬೌಲರ್‌ಗಳು ಯಾವ ಬ್ಯಾಟ್ಸ್‌ಮನ್‌ಗಳನ್ನೂ ಸೆಟ್ ಆಗಲು ಬಿಡಲಿಲ್ಲ, ಸತತ ಬೌಲಿಂಗ್ ಚೇಂಜ್‌ನಿಂದ ಮುಂಬೈ ತಂಡದ ಬ್ಯಾಟ್ಸ್‌ಮನ್‌ಗ ಜೊತೆಯಾಟ ಹೆಚ್ಚು ಹೊತ್ತು ಸಾಗದಂತೆ ನಾಯಕ ಕೇನ್ ವಿಲಿಯಮ್ಸ್ ನೋಡಿಕೊಂಡರು.

ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ರಶೀದ್ ಖಾನ್ 4 ಓವರ್‌ನಲ್ಲಿ ಕೇವಲ 13 ರನ್ ನೀಡಿ 1 ವಿಕೆಟ್ ಪಡೆದರು. ಸಿದ್ದಾರ್ಥ್ ಕೌಲ್ 2 ವಿಕೆಟ್, ಬಿಲ್ಲಿ ಸ್ಟಾನ್‌ಲೆಕ್ 2, ಸಂದೀಪ್ ಶರ್ಮಾ 2, ಶಕಿಬ್ ಉಲ್ ಹಸನ್ 1 ವಿಕೆಟ್‌ ಗಳಿಸಿದರು. ಹೈದರಾಬಾದ್ ತಂಡ ಗೆಲ್ಲಲು 148 ರನ್ ಗಳಿಸಬೇಕಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, April 12, 2018, 19:50 [IST]
Other articles published on Apr 12, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ