ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರನ್ ಬೆಟ್ಟ ಪೇರಿಸಿದ ಡೆಲ್ಲಿ, ಕೊಲ್ಕತ್ತ ಮುಂದಿದೆ 220 ರನ್‌ ಗುರಿ

ipl 2018 match 26 Delhi Daredevils Kolkata Night Riders

ನವದೆಹಲಿ, ಏಪ್ರಿಲ್ 27: ಕೊಲ್ಕತ್ತ ತಂಡದ ಬೌಲರ್‌ಗಳನ್ನು ಇನ್ನಿಲ್ಲದಂತೆ ದಂಡಿಸಿದ ಡೆಲ್ಲಿ ಬ್ಯಾಟ್ಸ್‌ಮನ್‌ಗಳು 20 ಓವರ್‌ಗೆ ಬರೋಬ್ಬರಿ 219 ರನ್ ಭಾರಿಸಿದರು. ಕೊಲ್ಕತ್ತ ತಂಡವು ಗೆಲ್ಲಲು ಓವರ್‌ಗೆ 11 ರನ್‌ನಂತೆ 220 ರನ್‌ ಗಳಿಸಬೇಕಿದೆ.

ಟಾಸ್ ಸೋತರೂ ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ಆರಂಭದಿಂದಲೇ ಭಿರುಸಿನ ಬ್ಯಾಟಿಂಗ್ ನಡೆಸಿತು. ಹೊಸ ಪ್ರತಿಭೆ ಪೃಥ್ವಿ ಶಾ ಇಂದು ಅತ್ಯುತ್ತಮ ಆಟವಾಡಿದರು. 44 ಎಸೆತಕ್ಕೆ 62 ರನ್ ಗಳಿಸಿದರು. ಅವರ ಜೊತೆಗಾರ ಕಾಲಿನ್ ಮುನ್ರೊ ಬಿರುಗಾಳಿ ಬ್ಯಾಟಿಂಗ್ ನಡೆಸಿ 18 ಎಸೆತಕ್ಕೆ 33 ರನ್ ಗಳಿಸಿದರು.

ಪಂದ್ಯದ ಸ್ಕೋರ್ ಕಾರ್ಡ್

ಆ ನಂತರ ಸ್ಕ್ರೀಜಿಗೆ ಬಂದ ಶ್ರೇಯಸ್ ಐಯರ್ ಮೊದಲಿಗೆ ನಿಧಾನಗತಿ ಬ್ಯಾಟಿಂಗ್ ನಡೆಸಿ ಕೊನೆಗೆ ಭಿರುಸಿನ ಬ್ಯಾಟಿಂಗ್‌ಗೆ ಇಳಿದರು. ಅವರು ಕೇವಲ 40 ಎಸೆತದಲ್ಲಿ 93 ರನ್ ಭಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ 3 ಬೌಂಡರಿಗಳಿದ್ದವು.

ಬೌಲಿಂಗ್‌ನಲ್ಲಿ ಎಡವಿದ್ದಕ್ಕೆ ಕೊಹ್ಲಿ ಮತ್ತೊಂದು ದಂಡವನ್ನೂ ತೆರಬೇಕಾಯ್ತು! ಬೌಲಿಂಗ್‌ನಲ್ಲಿ ಎಡವಿದ್ದಕ್ಕೆ ಕೊಹ್ಲಿ ಮತ್ತೊಂದು ದಂಡವನ್ನೂ ತೆರಬೇಕಾಯ್ತು!

ಕೊನೆಯಲ್ಲಿ ಡೆಲ್ಲಿ ತಂಡವನ್ನು 200ರ ಗಡಿ ದಾಟಿಸಿದ ಭಿರುಸಿನ ಹೊಡೆತಗಾರ ಮ್ಯಾಕ್ಸ್‌ವೆಲ್‌ 18 ಎಸೆತಕ್ಕೆ 27 ರಮನ್ ಚಚ್ಚಿದರು. ಕೊಲ್ಕತ್ತ ಪರ ಎಲ್ಲಾ ಬೌಲರ್‌ಗಳು ಇಂದು ಸುಮ್ಮನೆ ಬೆವರು ಹರಿಸಿದ್ದೇ ಬಂತು. ಚಾವ್ಲಾ ಒಂದು ವಿಕೆಟ್, ಶಿವಂಮಣಿ ಮತ್ತು ಆಂಡ್ರೂ ರಸೆಲ್ ಒಂದು ವಿಕೆಟ್ ಗಳಿಸಿದರು.

ಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಐಸಿಸಿ ಟಿ20 ಮಾನ್ಯತೆಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಐಸಿಸಿ ಟಿ20 ಮಾನ್ಯತೆ

ಎರಡೂ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಗೌತಮ್ ಗಂಭೀರ್ ಬದಲು ವಿಜಯ್ ಶಂಕರ್‌ ಹಾಗೂ ಜೇಸನ್ ರಾಯ್ ಸ್ಥಾನದಲ್ಲಿ ಕಾಲಿನ್ ಮುನ್ರೊ ಆಡಲಿದ್ದಾರೆ. ಕೋಲ್ಕತ್ತ ತಂಡದಲ್ಲಿ ಟಾಮ್ ಕುರ್ರನ್ ಬದಲು ಮಿಚೆಲ್ ಜಾನ್ಸನ್ ಸ್ಥಾನ ಪಡೆದಿದ್ದಾರೆ.

ತಂಡಗಳು ಹೀಗಿವೆ:
ದೆಹಲಿ: ಪೃಥ್ವಿ ಶಾ, ಕಾಲಿನ್ ಮುನ್ರೊ, ಶ್ರೇಯಸ್ ಅಯ್ಯರ್, ರಿಶಬ್ ಪಂತ್, ಗ್ಲೆನ್ ಮ್ಯಾಕ್ಸ್‌ವೆಲ್, ರಾಹುಲ್ ಟೆವಾಟಿಯಾ, ವಿಜಯ್ ಶಂಕರ್, ಲಿಯಾಮ್ ಪ್ಲಂಕೆಟ್, ಅಮಿತ್ ಮಿಶ್ರಾ, ಆವೇಶ್ ಖಾನ್, ಟ್ರೆಂಟ್ ಬೋಲ್ಟ್

ಕೋಲ್ಕತ್ತ: ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಶುಬ್‌ಮನ್‌ ಗಿಲ್, ಮಿಚೆಲ್ ಜಾನ್ಸನ್, ಪಿಯೂಷ್ ಚಾವ್ಲಾ, ಶಿವಮ್ ಮವಿ, ಕುಲದೀಪ್ ಯಾದವ್.

Story first published: Friday, April 27, 2018, 22:33 [IST]
Other articles published on Apr 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X