ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮರಳಿದ ಶೇನ್ ವಾರ್ನ್!

Posted By:
IPL 2018: Rajasthan Royals appoint Shane Warne as mentor

ಬೆಂಗಳೂರು, ಫೆಬ್ರವರಿ 13: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮರಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಪ್ ಎತ್ತಿ ಹಿಡಿದಿದ್ದರು. ಈಗ ತಂಡದ ಮಾರ್ಗದರ್ಶಿಯಾಗಿ ಮತ್ತೊಮ್ಮೆ ತಂಡಕ್ಕೆ ಬಲ ತುಂಬಲಿದ್ದಾರೆ.

2008ರಲ್ಲಿ ಕ್ಯಾಪ್ಟನ್ ಕಮ್ ಕೋಚ್ ಆಗಿ ಎಲ್ಲರೂ ಅಚ್ಚರಿ ಪಡುವಂತೆ ತಂಡವನ್ನು ಮುನ್ನಡೆಸಿ, ಕಪ್ ಗೆಲ್ಲುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ರಾಜಸ್ಥಾನ್ ತಂಡ ಸೇರುವುದಕ್ಕೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅಲ್ಲದೆ, ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್, ಅತ್ಯಂತ ದುಬಾರಿ ಬೆಲೆಗೆ ಸೇಲ್ ಆದ ವೇಗಿ ಜಯದೇವ್ ಉನದ್ಕತ್, ಅಜಿಂಕ್ಯ ರಹಾನೆ, ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಅವರಿದ್ದಾರೆ.

ವಾರ್ನೆ ಅವರು 2011ರಲ್ಲಿ ಕೊನೆ ಬಾರಿಗೆ ಐಪಿಎಲ್ ನಲ್ಲಿ ಕಾಣಿಸಿಕೊಂಡರು. 52 ಐಪಿಎಲ್ ಪಂದ್ಯಗಳಿಂದ 56 ವಿಕೆಟ್ ಗಳನ್ನು ಗಳಿಸಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, February 13, 2018, 18:02 [IST]
Other articles published on Feb 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ