ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು ಬದಲಿಗೆ ಜೈಪುರದಲ್ಲಿ ಐಪಿಎಲ್ 2019ರ ಹರಾಜು

IPL 2019 auctions to be held in Jaipur reports

ಬೆಂಗಳೂರು, ನವೆಂಬರ್ 08: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20ಐ ಸರಣಿ ಕಂಡು ಥ್ರಿಲ್ ಆಗಿರುವ ಕ್ರಿಕೆಟ್ ಅಭಿಮಾನಿಗಳ ಮನ ತಣಿಸಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿ ಎಲ್) 2019 ಸಜ್ಜಾಗುತ್ತಿದೆ. ಈ ಬಾರಿ ಅವಧಿಗೂ ಮುನ್ನವೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರಿನ ಬದಲಿಗೆ ಜೈಪುರದಲ್ಲಿ ಬಹುತೇಕ ಆಟಗಾರರ ಹರಾಜು ನಡೆಸಲಾಗುತ್ತದೆ.

ಸ್ಪೋರ್ಟ್ಸ್ ಸ್ಟಾರ್ ವರದಿಯಂತೆ 2019ನೇ ಸಾಲಿನ 12ನೇ ಆವೃತ್ತಿಯ ಐಪಿಎಲ್ ಗಾಗಿ ಜೈಪುರದಲ್ಲಿ ಡಿಸೆಂಬರ್ 17 ಹಾಗೂ 18ರಂದು ಹರಾಜು ನಡೆಸಲಾಗುತ್ತದೆ.

ಐಪಿಎಲ್ ಆಡಬೇಡಿ ಎಂದು ಕೊಹ್ಲಿ ಸಲಹೆ ನೀಡಿದ್ದು ಯಾರಿಗೆ? ಐಪಿಎಲ್ ಆಡಬೇಡಿ ಎಂದು ಕೊಹ್ಲಿ ಸಲಹೆ ನೀಡಿದ್ದು ಯಾರಿಗೆ?

ಈ ಮುಂಚೆ ಗೋವಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲು ಯತ್ನಿಸಲಾಗಿತ್ತು. ಆದರೆ, ಫ್ರಾಂಚೈಸಿಗಳ ಬೇಡಿಕೆಗೆ ಮಣಿದು ಜೈಪುರದಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಇಷ್ಟಕ್ಕೂ ಈ ಬಾರಿ ಐಪಿಎಲ್ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಆ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

ಐಪಿಎಲ್: ಪ್ರೀತಿ ಜಿಂಟಾ ತಂಡವನ್ನು ಸೆಹ್ವಾಗ್ ತೊರೆದಿದ್ದೇಕೆ? ಐಪಿಎಲ್: ಪ್ರೀತಿ ಜಿಂಟಾ ತಂಡವನ್ನು ಸೆಹ್ವಾಗ್ ತೊರೆದಿದ್ದೇಕೆ?

2009 ಹಾಗೂ 2014ರಲ್ಲಿ ಭಾರತದ ಹೊರಗೆ ಐಪಿಎಲ್ ಆಯೋಜಿಸಲಾಗಿತ್ತು. ಐಪಿಎಲ್ ಗೆ ಪುನರ್ ಪ್ರವೇಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಪ್ ಎತ್ತಿತ್ತು. ವಿಶ್ವಕಪ್ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಮೆಂಟ್ ಏಪ್ರಿಲ್ -ಮೇ ಅವಧಿಯಲ್ಲಿ ನಡೆಸಲಾಗುತ್ತಿದೆ. ವಿಶ್ವಕಪ್ ಈ ಬಾರಿ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 05ರಂದು ಆಡಲಿದೆ.

Story first published: Thursday, November 8, 2018, 16:41 [IST]
Other articles published on Nov 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X