ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಗೂ 1 ಕೋಟಿಗೆ ಮುಂಬೈ ಪಾಲಾದ ಯುವರಾಜ್ ಸಿಂಗ್

IPL 2019 Yuvraj singh sold to mumbai indians for 1 crore

ಜೈಪುರ, ಡಿಸೆಂಬರ್ 18: ಭಾರತದ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಮುಂದಿನ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಲಿದ್ದಾರೆ.

ಜೈಪುರದಲ್ಲಿ ನಡೆದ ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಯುವರಾಜ್ ಸಿಂಗ್ ಅವರನ್ನು ಯಾವ ಫ್ರಾಂಚೈಸಿಗಳೂ ಖರೀದಿಸಲು ಮುಂದಾಗಲಿಲ್ಲ. ಒಂದು ಕಾಲಕ್ಕೆ ದೆಹಲಿ ತಂಡಕ್ಕೆ 16 ಕೋಟಿ ರೂ.ಗೆ ಮಾರಾಟವಾಗಿದ್ದರು. ಈ ಬಾರಿ ಕೇವಲ ಒಂದು ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಯುವರಾಜ್ ಅವರನ್ನು ಎಲ್ಲರೂ ಕಡೆಗಣಿಸಿದ್ದರು.

ಐಪಿಎಲ್ 2019 ಹರಾಜು LIVE : ಅಕ್ಷರ್ ಪಟೇಲ್ ಗೆ 5 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್ಐಪಿಎಲ್ 2019 ಹರಾಜು LIVE : ಅಕ್ಷರ್ ಪಟೇಲ್ ಗೆ 5 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

ಫಾರ್ಮ್‌ ಕಳೆದುಕೊಂಡಿರುವ ಯುವಿ, ರಣಜಿಯಲ್ಲಿಯೂ ಅಷ್ಟೇನೂ ಗಮನಾರ್ಹ ಪ್ರದರ್ಶನ ತೋರಿರಲಿಲ್ಲ. ಕಳೆದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 2 ಕೋಟಿ ರೂ.ಗೆ ಮಾರಾಟವಾಗಿದ್ದರು. ಆದರೆ, ಅವರಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಪಂಜಾಬ್ ಅವರನ್ನು ಈ ಬಾರಿ ತಂಡದಿಂದ ಕೈಬಿಟ್ಟಿತ್ತು.

ಐಪಿಎಲ್ ಹರಾಜು: ಬಂಪರ್ ಹೊಡೆದ 'ಮಿಸ್ಟರಿ ಸ್ಪಿನ್ನರ್' ಚಕ್ರವರ್ತಿ ಐಪಿಎಲ್ ಹರಾಜು: ಬಂಪರ್ ಹೊಡೆದ 'ಮಿಸ್ಟರಿ ಸ್ಪಿನ್ನರ್' ಚಕ್ರವರ್ತಿ

ಮತ್ತೆ ಹರಾಜಿಗೆ ಬಂದಿದ್ದ ಯುವಿ ಮೊದಲ ಸುತ್ತಿನಲ್ಲಿ ಅನ್ ಸೋಲ್ಡ್ ಆಗಿದ್ದರು. ಎರಡನೆಯ ಬಾರಿಗೆ ಮತ್ತೆ ಹರಾಜಿಗೆ ಬಂದಾಗ ಅವರ ಮೂಲ ಬೆಲೆಯಾದ 1 ಕೋಟಿಗೆ ಬಿಡ್ಡಿಂಗ್ ನಡೆಯಿತು. ಆಗ ಮುಂಬೈ ಇಂಡಿಯನ್ಸ್ ಮಾಲೀಕರು ಯುವಿಯನ್ನು ಮೂಲಬೆಲೆಗೆ ಖರೀದಿಸುವುದಾಗಿ ಹೇಳಿದರು. ಅವರ ಬಳಿಕ ಯಾವ ಫ್ರಾಂಚೈಸಿಗಳೂ ಬೆಲೆ ಹೆಚ್ಚಿಸಿ ಖರೀದಿ ಮಾಡಲು ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಯುವಿ ಕೊನೆಗೂ ಖರೀದಿಯಾಗುವ ಮೂಲಕ ಗೌರವ ಉಳಿಸಿಕೊಂಡರು.

ಟ್ವೀಟ್ಸ್ ಸ್ವಾಗತ: ಗೇಲ್ ಹೋದ, ಹೆಟ್ಮೆಯರ್ ಬಂದ ಢುಂ ಢುಂ ಟ್ವೀಟ್ಸ್ ಸ್ವಾಗತ: ಗೇಲ್ ಹೋದ, ಹೆಟ್ಮೆಯರ್ ಬಂದ ಢುಂ ಢುಂ

ಯುವರಾಜ್ ಸಿಂಗ್ ಐಪಿಎಲ್ ಪ್ರಯಾಣ ಹೀಗಿದೆ.
2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಐಕಾನ್ ಪ್ಲೇಯರ್
2011 ಪುಣೆ ವಾರಿಯರ್ಸ್ 8.28 ಕೋಟಿ
2014 ಆರ್ ಸಿಬಿ 14 ಕೋಟಿ
2015 ಡೆಲ್ಲಿ ಡೇರ್ ಡೆವಿಲ್ಸ್ 16 ಕೋಟಿ
2016 ಸನ್ ರೈಸರ್ಸ್ ಹೈದರಾಬಾದ್ 7 ಕೋಟಿ
2018 ಕಿಂಗ್ಸ್ ಇಲವೆನ್ ಪಂಜಾಬ್ 2 ಕೋಟಿ
2019 ಮುಂಬೈ ಇಂಡಿಯನ್ಸ್ 1 ಕೋಟಿ

Story first published: Tuesday, December 18, 2018, 22:39 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X