ಮುಂಬೈ ಇಂಡಿಯನ್ಸ್ ಜೊತೆ ಕಾಣಿಸಿಕೊಂಡ ಅರ್ಜುನ್ ತೆಂಡೂಲ್ಕರ್, ಕಾರಣ ಇಲ್ಲಿದೆ!

ಐಪಿಎಲ್ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಬಯೋ ಸೆಕ್ಯೂರ್ ಬಬಲ್‌ನಲ್ಲಿದ್ದು ಕಠಿಣ ತರಬೇತಿಯನ್ನು ನಡೆಸುತ್ತಿದೆ. ತಂಡದ ಅಭ್ಯಾಸ, ಬಿಡುವಿನ ವೇಲೆಯ ಮೋಜು ಮಸ್ತಿಗಳ ಫೋಟೋ ವಿಡಿಯಗಳನ್ನು ತಮ್ಮ ತಮ್ಮ ಫ್ರಾಂಚೈಸಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಳ್ಳುತ್ತಿದೆ. ಹೀಗೆ ಹಂಚಿಕೊಂಡ ಫೋಟೋವೊಂದು ಅಭಿಮಾನಿಗಳಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಸ್ವಿಮ್ಮಿಂಗ್‌ಫೂಲ್‌ನಲ್ಲಿರುವ ಫೋಟೋವನ್ನು ಟ್ವಿಟ್ಟರ್‌ ಹಂಚಿಕೊಳ್ಳಲಾಗಿತ್ತು. ಈ ಫೋಟೋದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಂಡದ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಜೊತೆಗೆ ಆಟಗಾರನಾಗಿ ಸೇರಿಕೊಂಡಿದ್ದಾರಾ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

'ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಐಪಿಎಲ್ ಆರಂಭದಲ್ಲಿ ಆಡೋ ಖಾತ್ರಿಯಿಲ್ಲ'

20 ವರ್ಷದ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಜೊತಗೆ ಕಾಣಿಸಿಕೊಂಡಿರುವ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಜೊತೆಗೆ ಯುಎಇಗೆ ಹಾರಿದ್ದು ನೆಟ್ ಬೌಲರ್ ಆಗಿ ಎಂಬುದು ಸ್ಪಷ್ಟವಾಗಿದೆ.

ಹೌದು, ಈ ಬಾರಿ ಬಯೋ ಸೆಕ್ಯೂರ್ ಬಬಲ್ ಇರುವ ಕಾರಣ ಸ್ಥಳೀಯ ಬೌಲರ್‌ಗಳನ್ನು ನೆಟ್ ಬೌಲರ್‌ಗಳಾಗಿ ಬಳಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಫ್ರಾಂಚೈಸಿಗಳು ತಮ್ಮ ತಂಡದ ಜೊತೆಗೆ ನೆಟ್ ಬೌಲರ್‌ಗಳನ್ನು ಕರೆದುಕೊಂಡು ಹೋಗಿದ್ದಾರೆ. ಎಸಗೈ ವೇಗಿಯಾಗಿ ಮಿಂಚಿರುವ ಅರ್ಜುನ್ ತೆಂಡೂಲ್ಕರ್ ನೆಟ್ ಬೌಲರ್ ಆಗಿ ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಸೇರಿಕೊಂಡಿದ್ದಾರೆ. ಈ ಹಿಂದಿನ ಆವೃತ್ತಿಯಲ್ಲೂ ಅರ್ಜುನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಬೌಲಿಂಗ್ ಮಾಡಿದ್ದರು.

ಐಪಿಎಲ್ 2020: ಡೆತ್ ಓವರ್‌ನತ್ತ ಚಿತ್ತ ನೆಟ್ಟ ಆರ್‌ಸಿಬಿ ಸ್ಪಿನ್ನರ್ ಆ್ಯಡಂ ಜಂಪಾ

ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಉದ್ಘಾಟನಾ ದಿನದಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್‌ಗೆ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ಎದುರಾಳಿಯಾಗಿದೆ. ಶನಿವಾರ ನಡೆಯಲಿರುವ ಈ ಮೊದಲ ಪಂದ್ಯಕ್ಕೆ ಕಾತುರತೆ ಹೆಚ್ಚಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, September 15, 2020, 17:18 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X