ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಬದಲು ಸನ್ ರೈಸರ್ಸ್ ಹೈದರಾಬಾದ್ ತಂಡ ಅಬ್ದುಲ್ ಸಮದ್ ಎಂಬ ಹೊಸ ಮುಖವನ್ನು ಕಣಕ್ಕಿಳಿಸಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಸನ್ ರೈಸರ್ಸ್ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಇಂತಹ ಸಂದರ್ಭದಲ್ಲಿ ಅನುಭವಿ ಸಹಾ ಬದಲು ಹೆಚ್ಚು ಪರಿಚಿತರಲ್ಲದ ಸಮದ್ ಅವರಿಗೆ ಪದಾರ್ಪಣೆಯ ಟೊಪ್ಪಿ ನೀಡಿ ಸ್ವಾಗತಿಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

ಮೊದಲ ಪಂದ್ಯದಲ್ಲಿ ಹೆಚ್ಚು ಅವಕಾಶ ಸಿಗದಿದ್ದರೂ ಏಳು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಹಿತ ಅಜೇಯ 12 ರನ್ ಗಳಿಸುವ ಮೂಲಕ ಅಬ್ದುಲ್ ಸಮದ್ ಗಮನ ಸೆಳೆದರು. ವೃತ್ತಿಪರ ಬ್ಯಾಟ್ಸ್‌ಮನ್ ಆಗಿರುವ ಅವರು ಫೀಲ್ಡಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಯಾರು ಈ ಅಬ್ದುಲ್ ಸಮದ್? ಐಪಿಎಲ್‌ನಂತಹ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಹೇಗೆ ಅವಕಾಶ ಗಿಟ್ಟಿಸಿಕೊಂಡರು? ಮುಂದೆ ಓದಿ...

ಮೂರನೇ ಆಟಗಾರ

ಮೂರನೇ ಆಟಗಾರ

ಅಬ್ದುಲ್ ಸಮದ್ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದವರು. ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದ ಜಮ್ಮು ಮತ್ತು ಕಾಶ್ಮೀರದ ಮೂರನೇ ಆಟಗಾರ. ಇದಕ್ಕೂ ಮುನ್ನ ಪರ್ವೇಜ್ ರಸೂಲ್ (ಪುಣೆ ವಾರಿಯರ್ಸ್, ಆರ್‌ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್) ಹಾಗೂ ರಸಿಖ್ ಸಲಂ (ಮುಂಬೈ ಇಂಡಿಯನ್ಸ್) ಐಪಿಎಲ್‌ನಲ್ಲಿ ಆಡಿದ್ದರು.

ಏನೇ ನಂಬಿದರೂ ಜೀವನದಲ್ಲಿ ಆರ್‌ಸಿಬಿ ಬೌಲಿಂಗ್ ಮಾತ್ರ ನಂಬಲೇಬಾರದು: ಸೆಹ್ವಾಗ್

ಪಠಾಣ್ ಗುರುತಿಸಿದ ಪ್ರತಿಭೆ

ಪಠಾಣ್ ಗುರುತಿಸಿದ ಪ್ರತಿಭೆ

18 ವರ್ಷದ ಅಬ್ದುಲ್ ಸಮದ್, ಚೆಂಡನ್ನು ಬೌಂಡರಿಗಟ್ಟುವಲ್ಲಿ ನಿಸ್ಸೀಮ. ಮುಖ್ಯವಾಗಿ ಫಿನಿಶರ್ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಅಂದಹಾಗೆ ಈ ಆಟಗಾರನನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಿ ಐಪಿಎಲ್ ಪ್ರವೇಶಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು, ದೇಶ ಕಂಡ ಉತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಇರ್ಫಾನ್ ಪಠಾಣ್.

ವಲಸೆ ಹೋಗಿದ್ದ ಪಠಾಣ್

ವಲಸೆ ಹೋಗಿದ್ದ ಪಠಾಣ್

ರಾಷ್ಟ್ರೀಯ ತಂಡದಿಂದ ಕೈಬಿಟ್ಟ ಬಳಿಕ ಇರ್ಫಾನ್ ಪಠಾಣ್, ಬರೋಡಾ ರಣಜಿ ತಂಡದಲ್ಲಿಯೂ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾದರು. ಬಳಿಕ ಅವರು ಜಮ್ಮು ಮತ್ತು ಕಾಶ್ಮೀರ ತಂಡವನ್ನು ಸೇರಿಕೊಂಡರು. ಅಲ್ಲಿ ರಣಜಿ ಪಂದ್ಯಗಳನ್ನಾಡಿದ ಅವರು, ಅದೇ ತಂಡದ ಕೋಚ್ ಕೂಡ ಆದರು. ಆಗ ಅವರು ಅಬ್ದುಲ್ ಸಮದ್ ಎಂಬ ಪ್ರತಿಭೆಯನ್ನು ಗುರುತಿಸಿದ್ದರು.

ಆತ ಇದ್ದಿದ್ದರೆ ವಿಶ್ವಕಪ್ ಗೆಲ್ಲಿಸುತ್ತಿದ್ದ: ತನ್ನ ರಾಜ್ಯದ ಪ್ರತಿಭೆಯನ್ನು ಹೊಗಳಿದ ಶ್ರೀಶಾಂತ್

ಲಕ್ಷ್ಮಣ್ ಬಯಸಿದ್ದ ಪ್ರತಿಭೆ

ಲಕ್ಷ್ಮಣ್ ಬಯಸಿದ್ದ ಪ್ರತಿಭೆ

2019ರ ಡಿಸೆಂಬರ್‌ನಲ್ಲಿ ನಡೆದ ಪ್ರಸಕ್ತ ಸಾಲಿನ ಐಪಿಎಲ್ ಹರಾಜಿಗೂ ಮುನ್ನ ನವೆಂಬರ್‌ನಲ್ಲಿ ಇರ್ಫಾನ್ ಪಠಾಣ್ ಅವರನ್ನು ಸಂಪರ್ಕಿಸಿದ್ದ ಎಸ್‌ಆರ್‌ಎಚ್‌ನ ವಿವಿಎಸ್ ಲಕ್ಷ್ಮಣ್, ತಮ್ಮ ಹೈದರಾಬಾದ್ ತಂಡಕ್ಕೆ ಫಿನಿಷರ್ ಪಾತ್ರ ನಿಭಾಯಿಸಬಲ್ಲ ಪ್ರತಿಭೆಯ ಬಗ್ಗೆ ವಿಚಾರಿಸಿದ್ದರು ಎನ್ನಲಾಗಿದೆ.

ಟಿ20ರಲ್ಲಿ 40ರ ಸರಾಸರಿ

ಟಿ20ರಲ್ಲಿ 40ರ ಸರಾಸರಿ

ಇನ್ನು ಒಂದು ತಿಂಗಳಲ್ಲಿ 19 ವರ್ಷಕ್ಕೆ ಕಾಲಿರಿಸಲಿರುವ ಅಬ್ದುಲ್ ಸಮದ್, 2019ರಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಮೊದಲ ದರ್ಜೆ, ಲಿಸ್ಟ್-ಎ ಮತ್ತು ಟಿ20 ಪದಾರ್ಪಣೆ ಮಾಡಿದ್ದರು. 11 ಟಿ 20 ಪಂದ್ಯಗಳನ್ನು ಆಡಿರುವ ಅವರು, 40ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಜತೆಗೆ ಅವರ ಸ್ಟ್ರೈಕ್ ರೇಟ್ 136.36 ಇದೆ. ತಂಡಕ್ಕೆ ನೆರವಾಗಬಲ್ಲ ಲೆಗ್ ಸ್ಪಿನ್ನರ್ ಕೂಡ ಹೌದು.

ರಣಜಿಯಲ್ಲಿ ಅತ್ಯಧಿಕ ಸಿಕ್ಸರ್

ರಣಜಿಯಲ್ಲಿ ಅತ್ಯಧಿಕ ಸಿಕ್ಸರ್

ರಜೌರಿ ಮೂಲದ ಸಮದ್, ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. 2019-20ರ ರಣಜಿ ಆವೃತ್ತಿಯಲ್ಲಿ ಮೂರು ಶತಕಗಳ ಸಹಿತ 592 ರನ್ ಬಾರಿಸಿದ್ದರು. ಇದರಲ್ಲಿ 36 ಸಿಕ್ಸರ್‌ಗಳಿದ್ದವು. ಈ ಆವೃತ್ತಿಯಲ್ಲಿ ಇಷ್ಟು ಸಿಕ್ಸರ್‌ಗಳನ್ನು ಬೇರೆ ಯಾವ ಆಟಗಾರನೂ ಬಾರಿಸಿಲ್ಲ.

Story first published: Tuesday, September 29, 2020, 23:29 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X