ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏನೇ ನಂಬಿದರೂ ಜೀವನದಲ್ಲಿ ಆರ್‌ಸಿಬಿ ಬೌಲಿಂಗ್ ಮಾತ್ರ ನಂಬಲೇಬಾರದು: ಸೆಹ್ವಾಗ್

ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರೋಚಕ ಅನುಭವ ನೀಡಿದೆ. ಸೂಪರ್ ಓವರ್‌ನಲ್ಲಿ ವೇಗಿ ನವದೀಪ್ ಸೈನಿ ಮಾಡಿದ ಬೌಲಿಂಗ್ ಎಲ್ಲರ ಮೆಚ್ಚುಗೆಗೆ ಒಳಗಾಗಿದೆ. ಆದರೆ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೋಲಿನಂಚಿಗೆ ತಂದ ಆರ್‌ಸಿಬಿಯ ದುರ್ಬಲ ಬೌಲಿಂಗ್ ಅಷ್ಟೇ ಟೀಕೆಗೆ ಒಳಗಾಗಿದೆ.

202 ರನ್‌ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ನಿರಂತರ ವಿಕೆಟ್‌ಗಳನ್ನು ಕಳೆದುಕೊಂಡು 15ನೇ ಓವರ್ ವೇಳೆಗೆ ಸೋಲಿನ ಅಂಚಿಗೆ ತಲುಪಿತ್ತು. ಕೊನೆಯ 30 ಎಸೆತಗಳಲ್ಲಿ 90 ರನ್ ಗಳಿಸುವ ಗುರಿ ಇದ್ದಾಗ, ಆರ್‌ಸಿಬಿಗೆ ಈ ಪಂದ್ಯ ಸುಲಭದ ತುತ್ತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆಡಂ ಝಂಪಾ ಎಸೆದ 17ನೇ ಓವರ್‌ನಲ್ಲಿ ಕೀರನ್ ಪೊಲಾರ್ಡ್ 27 ರನ್ ಚಚ್ಚಿದರು. ಇಲ್ಲಿಂದ ಪಂದ್ಯದ ಗತಿ ಬದಲಾಯಿತು. ಆರ್‌ಸಿಬಿಯ ಡೆತ್ ಬೌಲಿಂಗ್‌ ಅನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಲೇವಡಿ ಮಾಡಿದ್ದಾರೆ. ಮುಂದೆ ಓದಿ...

ಜೀವಮಾನದಲ್ಲಿ ನಂಬಬೇಡಿ

ಜೀವಮಾನದಲ್ಲಿ ನಂಬಬೇಡಿ

'ಜೀವನದಲ್ಲಿ ನೀವು ಯಾರನ್ನು ನಂಬಬೇಕು ಮತ್ತು ನಂಬಬಾರದು ನೀವು ಆಯ್ಕೆ ಮಾಡಿಕೊಳ್ಳಬಹುದು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೆತ್ ಬೌಲಿಂಗ್ ಅನ್ನು ಮಾತ್ರ ನೀವು ಜೀವಮಾನದಲ್ಲಿ ನಂಬಲೇ ಬಾರದು' ಎಂದು ಸೆಹ್ವಾಗ್ ಹೇಳಿದ್ದಾರೆ.

ಆರ್‌ಸಿಬಿಯ ಈ ತಪ್ಪುಗಳನ್ನ ಒಪ್ಪಿಕೊಂಡ ಎಬಿ ಡಿವಿಲಿಯರ್ಸ್!

ಗೆಲ್ಲುವಂತಹ ಪಂದ್ಯ

ಗೆಲ್ಲುವಂತಹ ಪಂದ್ಯ

'ಸುಲಭವಾಗಿ ಗೆದ್ದುಬಿಡುವಂತಹ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಕೊನೆಯಲ್ಲಿ ಸೂಪರ್ ಓವರ್‌ಗೆ ತಂದಿಟ್ಟರು' ಎಂದು ವೀರೇಂದ್ರ ಸೆಹ್ವಾಗ್ ಡೆತ್ ಬೌಲಿಂಗ್‌ ದೌರ್ಬಲ್ಯವನ್ನು ಟೀಕಿಸಿದ್ದಾರೆ.

ಆರ್‌ಸಿಬಿ ಬಯಸಿದ್ದ ಆಟಗಾರ ಪಡಿಕ್ಕಲ್

ಆರ್‌ಸಿಬಿ ಬಯಸಿದ್ದ ಆಟಗಾರ ಪಡಿಕ್ಕಲ್

ಕರ್ನಾಟಕದ ಸ್ಫೋಟಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಆರ್‌ಸಿಬಿ ತಂಡದ ಆರಂಭಿಕನಾಗಿ ನೀಡುತ್ತಿರುವ ಪ್ರದರ್ಶನವನ್ನು ಸೆಹ್ವಾಗ್ ಪ್ರಶಂಸಿಸಿದ್ದಾರೆ. ಆರ್‌ಸಿಬಿ ತಂಡವು ಎರಡು ವರ್ಷಗಳಿಂದ ಎದುರು ನೋಡುತ್ತಿದ್ದಂತಹ ಬ್ಯಾಟ್ಸ್‌ಮನ್ ಸಿಕ್ಕಿದ್ದಾರೆ ಎಂದಿದ್ದಾರೆ.

ಕನ್ನಡಿಗರ ಹೃದಯ ಗೆದ್ದ ಆರ್‌ಸಿಬಿ ಬೌಲರ್ ಚಾಹಲ್

ಎಬಿಡಿ ಗುರಿಯೇ ಅದು

ಎಬಿಡಿ ಗುರಿಯೇ ಅದು

ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡುವಾಗ ಒಂದೇ ಒಂದು ಗುರಿಯನ್ನು ಹೊಂದಿರುತ್ತಾರೆ. ಅದು ಸ್ಟೇಡಿಯಂನ ಹೊರಗೆ ಚೆಂಡನ್ನು ಸಿಡಿಸುವುದಾಗಿದೆ ಎಂದು ಸೆಹ್ವಾಗ್ ಬಣ್ಣಿಸಿದ್ದಾರೆ. ಆರ್‌ಸಿಬಿಯನ್ನು ಸೋಲಿನ ದವಡೆಯಿಂದ ಕಾಪಾಡಿದ ಯುವ ಬೌಲರ್‌ಗಳಾದ ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಕೂಡ ಹೊಗಳಿದ್ದಾರೆ.

Story first published: Wednesday, September 30, 2020, 10:04 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X