ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳು

IPL 2020: Nicholas Pooran Brilliant Fielding And Wheelchair Days

ಒಂದು ಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದು, ಕ್ರಿಕೆಟ್ ದೇವರು ಸಚಿನ್‌ರಿಂದಲೇ ಭೇಷ್ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಇತ್ತೀಚೆಗೆ ತಾನೇ ಭಾರೀ ಸುದ್ದಿಯಾಗಿದ್ರು.

ಕ್ರಿಕೆಟ್‌ ಲೋಕದಲ್ಲಿ ಹಿಂದೆಂದೂ ಬೌಂಡರಿ ಲೈನ್‌ನಲ್ಲಿ ಆ ಮಟ್ಟಿಗೆ ರನ್‌ ಉಳಿಸಿದ್ದನ್ನ ಯಾರೊಬ್ಬರೂ ಕಂಡಿರಲಿಲ್ಲ. ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಐಪಿಎಲ್​ ಪಂದ್ಯದ ವೇಳೆ ಸಿಕ್ಸರ್​ ವೊಂದನ್ನು ಅದ್ಭುತವಾಗಿ ತಡೆದು ಹೀಗೂ ರನ್ ಉಳಿಸಬಹುದಾ? ಎಂದು ಅಚ್ಚರಿ ಮೂಡಿಸಿದ್ರು.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ ಸಿಎಸ್‌ಕೆ: ಟ್ರೋಲ್ ಮೂಲಕ ಕಾಲೆಳೆದ ನೆಟ್ಟಿಗರುಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ ಸಿಎಸ್‌ಕೆ: ಟ್ರೋಲ್ ಮೂಲಕ ಕಾಲೆಳೆದ ನೆಟ್ಟಿಗರು

ಐಪಿಎಲ್ 13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪರ ಕಣಕ್ಕಿಳಿಯುವ ನಿಕೋಲಸ್‌ರ ಕ್ಯಾಚ್‌ ಸಾಮಾಜಿಕ ಜಾಲತಾಣದಲ್ಲಿ ನೋಡಿ ಜನರು ಖುಷಿ ಪಟ್ಟರು. ಆದರೆ ಆ ಮಟ್ಟಿನ ಕ್ಯಾಚ್ ಹಿಡಿಯಲು ಬೇಕಾದ ಫಿಟ್ನೆಸ್‌ಗೆ ಪೂರನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಕಷ್ಟಗಳಿಂದ ಪಾರಾಗಿ ಬಂದಿದ್ದ ನಿಕೋಲಸ್

ಕಷ್ಟಗಳಿಂದ ಪಾರಾಗಿ ಬಂದಿದ್ದ ನಿಕೋಲಸ್

ಹೌದು, ನಿಕೋಲಸ್ ಈ ಮಟ್ಟಿನ ಫಿಟ್ನೆಸ್ ಕಾಪಾಡಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅಭಿಮಾನಿಗಳು ಆತನ ಫೀಲ್ಡಿಂಗ್ ಕಂಡು 'ವಾವ್​....ಸೂಪರ್​...ಅಮೋಘ ಫೀಲ್ಡಿಂಗ್' ಎಂದು ಮೆಚ್ಚುಗೆ ಸೂಚಿಸಿದರು. ಆದರೆ ನಿಕೋಲಸ್​ ಪೂರಾನ್​ ಇಷ್ಟೆಲ್ಲ ಫಿಟ್ನೆಸ್​ ಅನ್ನು ವಾಪಸ್​ ಪಡೆದುಕೊಳ್ಳುವುದರ ಹಿಂದೆ ಎಷ್ಟು ಕಷ್ಟಪಟ್ಟಿರಬಹುದು? ಅವರು ಬದುಕಿನಲ್ಲಿ ಅನುಭವಿಸಿದ ಕಷ್ಟಗಳೇನು? ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.

ನಿಕೋಲಸ್ ಕ್ಯಾಚ್ ನೋಡಿ ಜಾಂಟಿ ರೋಡ್ಸ್ ಕೂಡ ಒಮ್ಮೆ ಬೆಚ್ಚಿ ಬಿದ್ದರು

ನಿಕೋಲಸ್ ಕ್ಯಾಚ್ ನೋಡಿ ಜಾಂಟಿ ರೋಡ್ಸ್ ಕೂಡ ಒಮ್ಮೆ ಬೆಚ್ಚಿ ಬಿದ್ದರು

ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಎಂ.ಅಶ್ವಿನ್​ ಬೌಲಿಂಗ್​ಗೆ ರಾಜಸ್ಥಾನ್​ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ ದೊಡ್ಡ ಹೊಡೆತವನ್ನು ಬಾರಿಸಿದರು. ಇನ್ನೇನು ಸಿಕ್ಸರ್​ ಆಗಬೇಕು ಎನ್ನುವಷ್ಟರಲ್ಲಿ ಚೆಂಡನ್ನು ಅದ್ಭುತವಾಗಿ ತಡೆದ ಪೂರಾನ್​ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಪೂರಾನ್​ ಅಮೋಘ ಫೀಲ್ಡಿಂಗ್​ ಕಂಡು ಸ್ವತಃ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್​ ಮೂಕವಿಸ್ಮಿತರಾಗಿದ್ದರು.

ನನ್ನ ಜೀವನದಲ್ಲಿ ಇಂತಹ ರನ್ ಸೇವ್ ನೋಡಿರ್ಲಿಲ್ಲ-ಸಚಿನ್

ವಿಂಡೀಸ್ ಕ್ರಿಕೆಟಿಗನ ಚುರುಕಿನ ಕ್ಷೇತ್ರ ರಕ್ಷಣೆಗೆ ಅನೇಕರು ಶಹಬ್ಬಾಸ್ ಎಂದಿದ್ದರು. ಆದರೆ ಕ್ರಿಕೆಟ್ ದೇವರು ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಕ್ರಿಕೆಟ್ ಜೀವನದಲ್ಲಿ ನಾನು ನೋಡಿದ ಅತ್ಯದ್ಭುತ ರನ್ ಸೇವ್ ಇದು ಎಂದು ಗುಣಗಾನ ಮಾಡಿದ್ದರು.

ಇಷ್ಟೆಲ್ಲಾ ಅದ್ಭುತ ಫಿಟ್ನೆಸ್‌ಗೂ ಮುನ್ನ ಭೀಕರ ಕಾರು ಅಪಘಾತವಾಗಿತ್ತು!

ಇಷ್ಟೆಲ್ಲಾ ಅದ್ಭುತ ಫಿಟ್ನೆಸ್‌ಗೂ ಮುನ್ನ ಭೀಕರ ಕಾರು ಅಪಘಾತವಾಗಿತ್ತು!

ಸರಿಯಾಗಿ 5 ವರ್ಷಗಳ ಹಿಂದಿನ ಕಥೆಯಿದು. 2015 ಟ್ರೆನಿಡಾಡ್​ನಿಂದ ಕ್ರಿಕೆಟ್​ ತರಬೇತಿ ಮುಗಿಸಿಕೊಂಡು ವಾಪಸ್​ ಆಗುತ್ತಿದ್ದ ಸಂದರ್ಭದಲ್ಲಿ, ಪೂರಾನ್​ ಚಲಾಯಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ತುತ್ತಾಗುತ್ತದೆ. ಪೂರಾನ್​ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಜೊತೆಗೆ ಬಲಗಾಲಿಗೆ ಗಂಭೀರ ಪೆಟ್ಟು ತಗುಲಿತು. 6 ತಿಂಗಳು ಕ್ರಿಕೆಟ್​ ಆಡಲು ಸಾಧ್ಯವಾಗದೆ ವಿಶ್ರಾಂತಿಯಲ್ಲಿದ್ದರು.

ಎರಡು ಮೇಜರ್​ ಸರ್ಜರಿಗೂ ಒಳಗಾಗಿ ಹೆಚ್ಚಿನ ದಿನಗಳನ್ನು ವೀಲ್​ಚೇರ್​ನಲ್ಲಿಯೇ ಕಳೆದಿದ್ದರು. ಆದರೆ ಛಲ ಬಿಡದ ಪೂರನ್​ ನಿಧಾನವಾಗಿ ಚೇತರಿಸಿಕೊಳ್ಳುತ್ತಾ ಬಂದರು. ದಿನನಿತ್ಯ ಗಂಟೆಗಟ್ಟಲೇ ಜಿಮ್‌ನಲ್ಲಿ ಬೆವರು ಸುರಿಸಿ ಮತ್ತೆ ಸ್ಪರ್ಧಾತ್ಮತ ಕ್ರಿಕೆಟ್‌ಗೆ ಮರಳಿದರು.

ತನ್ನ ಕಾಲಿನ ಸರ್ಜರಿಯನ್ನೂ ಮರೆತು ಡೈ ಹೊಡೆದ ಪೂರನ್

ತನ್ನ ಕಾಲಿನ ಸರ್ಜರಿಯನ್ನೂ ಮರೆತು ಡೈ ಹೊಡೆದ ಪೂರನ್

ಹೌದು, ನಿಕೋಲಸ್ ಅದ್ಭುತ ಫೀಲ್ಡಿಂಗ್ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ನಿಕೋಲಸ್ ಯಾವ ಧೈರ್ಯದಿಂದ ಈ ಡೈ ಹೊಡೆದರು ಎಂದು ಅನೇಕ ಕ್ರಿಕೆಟ್ ವಿಶ್ಲೇಷಕರು ಆಶ್ಚರ್ಯ ವ್ಯಕ್ತಪಡಿಸಿದರು. ಅದಾಗಲೇ ಕಾಲಿಗೆ ಎರಡು ಸರ್ಜರಿ ಆಗಿರುವಾಗ ಮತ್ತೇನಾದ್ರೂ ಆಗಿದ್ರೆ ಏನು ಗತಿ ಅನ್ನೋದನ್ನು ಅವರು ಚಿಂತಿಸದೇ ನೂರಕ್ಕೆ ನೂರರಷ್ಟು ಮೈದಾನದಲ್ಲಿ ಬದ್ಧತೆ ಪ್ರದರ್ಶಿಸಿದ್ದಾರೆ ಎಂಬ ಹೊಗಳಿಕೆಗೆ ಕಾರಣರಾಗಿದ್ದಾರೆ.

Story first published: Wednesday, September 30, 2020, 19:22 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X