ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ನಿಯಮ ಉಲ್ಲಂಘನೆ: ಶಿಕ್ಷೆಗೆ ಒಳಗಾಗುತ್ತಾರಾ ಉತ್ತಪ್ಪ? ವೈರಲ್ ವಿಡಿಯೋ

ಅಪಾರ ನಿರೀಕ್ಷೆಗಳನ್ನು ಇರಿಸಿದ್ದ ರಾಜಸ್ಥಾನ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ಸತತ ವೈಫಲ್ಯಕ್ಕೆ ಒಳಗಾಗುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲಿಯೂ ಉತ್ತಪ್ಪ ಕಳಪೆ ಪ್ರದರ್ಶನ ನೀಡಿದ್ದಾರೆ. ಇದರಿಂದ ತಂಡದಲ್ಲಿ ಅವರ ಸ್ಥಾನಕ್ಕೆ ಸಂಚಕಾರ ಬರುತ್ತಿದೆ. ಈ ನಡುವೆ ಉತ್ತಪ್ಪ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಬಹುಮುಖ್ಯವಾದ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

34 ವರ್ಷದ ರಾಬಿನ್ ಉತ್ತಪ್ಪ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮರಳಿ ಬರುವ ಬಯಕೆ ಹೊಂದಿದ್ದಾರೆ. ಆ ಕನಸನ್ನು ಈಡೇರಿಸಲು ಈ ಬಾರಿಯ ಐಪಿಎಲ್ ಟೂರ್ನಿ ತಮಗೆ ಉತ್ತಮ ವೇದಿಕೆಯಾಗಲಿದೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ದೊರೆತ ಅವಕಾಶಗಳನ್ನು ಅವರು ಕೈಚೆಲ್ಲುತ್ತಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಎರಡಂಕಿ ಸ್ಕೋರ್ ಮಾಡಲೂ ವಿಫಲವಾಗಿದ್ದಾರೆ. ಅಷ್ಟೇ ಅಲ್ಲ ಸುಲಭದ ಕ್ಯಾಚ್‌ಗಳನ್ನು ಸಹ ಕೈಚೆಲ್ಲಿದ್ದಾರೆ. ಅವುಗಳ ಮಧ್ಯೆ ಮತ್ತೊಂದು ವಿವಾದ ಅವರಿಗೆ ಎರವಾಗುವ ಭೀತಿ ಉಂಟಾಗಿದೆ. ಮುಂದೆ ಓದಿ...

ಕ್ಯಾಚ್ ಕೈಚೆಲ್ಲಿದ್ದ ಉತ್ತಪ್ಪ

ಕ್ಯಾಚ್ ಕೈಚೆಲ್ಲಿದ್ದ ಉತ್ತಪ್ಪ

ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ, ಸುನಿಲ್ ನರೇನ್ ನೀಡಿದ ಸುಲಭದ ಕ್ಯಾಚನ್ನು ಹಿಡಿಯವಲ್ಲಿ ವಿಫಲರಾಗಿದ್ದರು. ಕೆಕೆಆರ್ ಇನ್ನಿಂಗ್ಸ್‌ನ ಜೈದೇವ್ ಉನದ್ಕತ್ ಬೌಲಿಂಗ್‌ನಲ್ಲಿ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಸುನಿಲ್ ನರೇನ್ ಬಾರಿಸಿದ ಚೆಂಡು ಮಿಡ್ ಆನ್‌ನಲ್ಲಿ ಗಗನಕ್ಕೆ ಚಿಮ್ಮಿತ್ತು. ಅಲ್ಲಿಯೇ ಇದ್ದ ಉತ್ತಪ್ಪ ಅದನ್ನು ಕೈಚೆಲ್ಲಿದ್ದರು. ಆಗ 1 ರನ್ ಗಳಿಸಿದ್ದ ನರೇನ್, ನಂತರ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ್ದರು.

ಐಪಿಎಲ್ 2020: ನಿರಾಸೆ ಮೂಡಿಸಿದ ಕನ್ನಡಿಗರು ಇವರು

ಚೆಂಡಿಗೆ ಎಂಜಲು ಬಳಕೆ

ಚೆಂಡಿಗೆ ಎಂಜಲು ಬಳಕೆ

ಇಲ್ಲಿ ಉತ್ತಪ್ಪ ಅವರಿಗೆ ಕುತ್ತು ತಂದಿರುವುದು ಕ್ಯಾಚ್ ಕೈಬಿಟ್ಟ ನಂತರ ಅವರು ನಡೆದುಕೊಂಡ ರೀತಿ. ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವಾಗ ಐಸಿಸಿ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಚೆಂಡಿಗೆ ಎಂಜಲು ಹಚ್ಚುವುದು ಕೂಡ ಒಂದು. ಇದು ಮಹತ್ವದ ನಿಯಮ ಕೂಡ. ಇದನ್ನು ಉತ್ತಪ್ಪ ಉಲ್ಲಂಘಿಸಿದ್ದಾರೆ.

ವಿಡಿಯೋದಲ್ಲಿ ಸೆರೆಯಾದ ಘಟನೆ

ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಅದಕ್ಕೆ ಎಂಜಲು ಹಚ್ಚುವುದು ಸಾಮಾನ್ಯ. ಆದರೆ ವೈರಸ್ ಹರಡುವ ಅಪಾಯ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಚೆಂಡಿಗೆ ಎಂಜಲು ಹಚ್ಚುವುದರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಅದರ ಬದಲು ಬೆವರು ಬಳಸಲು ಅವಕಾಶ ನೀಡಲಾಗಿದೆ. ಆದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಉತ್ತಪ್ಪ ಕ್ಯಾಚ್ ಕೈಚೆಲ್ಲಿದ ಬಳಿಕ ಚೆಂಡಿಗೆ ಎಂಜಲು ಹಚ್ಚಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸಂಜು ಸ್ಯಾಮ್ಸನ್ ಇಷ್ಟು ಮಾಡಿದ್ರೆ ಸಾಕು ಭಾರತದ ಪರ ಆಡೋದು ಕನ್ಫರ್ಮ್: ಶೇನ್ ವಾರ್ನ್

ಐಸಿಸಿ ನಿಮಯದ ಪ್ರಕಾರ ಶಿಕ್ಷೆ ಏನು?

ಐಸಿಸಿ ನಿಮಯದ ಪ್ರಕಾರ ಶಿಕ್ಷೆ ಏನು?

ಉತ್ತಪ್ಪ ಅವರು ಎಂಜಲು ಬಳಕೆ ಮಾಡಿರುವುದು ಉದ್ದೇಶಪೂರ್ವಕವಾಗಿಯೇ ಅಥವಾ ಮರೆತು ಹಚ್ಚಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ. ಈ ಬಗ್ಗೆ ಅಂಪೈರ್ ಹಾಗೂ ರೆಫ್ರಿ ಗಂಭೀರವಾಗಿ ಪರಿಗಣಿಸಿದರೆ ಉತ್ತಪ್ಪ ಅವರಿಗೆ ಸಂಕಷ್ಟ ಎದುರಾಗಬಹುದು. ಐಸಿಸಿ ನಿಯಮದ ಪ್ರಕಾರ ಇನ್ನಿಂಗ್ಸ್ ಒಂದರಲ್ಲಿ ಚೆಂಡಿಗೆ ಎಂಜಲು ಬಳಕೆ ಮಾಡಿದರೆ ಆ ತಂಡಕ್ಕೆ ಎರಡು ಬಾರಿ ಎಚ್ಚರಿಕೆ ನೀಡಬಹುದು. ಮತ್ತೊಮ್ಮೆ ತಪ್ಪು ಮರುಕಳಿಸಿದರೆ ಎದುರಾಳಿ ತಂಡಕ್ಕೆ ಐದು ರನ್ ಪೆನಾಲ್ಟಿ ರನ್ ನೀಡಬಹುದು. ಇದರಿಂದ ಉತ್ತಪ್ಪ ಅವರಿಗೆ ಕಠಿಣ ಶಿಕ್ಷೆ ಎದುರಾಗದೆ ಹೋದರೂ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.

Story first published: Thursday, October 1, 2020, 14:49 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X