ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ ವಿರುದ್ಧ ಪಂಜಾಬ್ ಸೋಲಿನ ಕಾರಣ ಬಿಚ್ಚಿಟ್ಟ ಸಚಿನ್

ಶಾರ್ಜಾ, ಸೆ. 28: ಶಾರ್ಜಾ ಮೈದಾನದ ಸುಲ್ತಾನ ಎಂದೇ ಕ್ರಿಕೆಟ್ ದಿಗ್ಗಜ ಸಚಿನ್ ರನ್ನು ಕರೆಯಬಹುದು. ಮೈದಾನದ ಉದ್ದಗಲ ಬೌಂಡರಿ, ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿರುವ ಸಚಿನ್, ಐಪಿಎಲ್ 2020ರ ಪ್ರತಿ ಪಂದ್ಯವನ್ನು ಆಸಕ್ತಿಯಿಂದ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದರಂತೆ, ರಾಜಸ್ಥಾನ ವಿರುದ್ಧ ಪಂಜಾಬ್ ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ.

ಕೆಎಲ್ ರಾಹುಲ್ ಅರ್ಧ ಶತಕ ಹಾಗೂ ಮಯಾಂಕ್ ಅಗರವಾಲ್ ಮೊದಲ ಶತಕ ಹಾಗೂ ಉತ್ತಮ ಜೊತೆಯಾಟದ ನೆರವಿನಿಂದ ಕಿಂಗ್ಸ್ ಎಲೆವನ್ ಪಂಜಾಬ್ ತಂಡವು 223/2 ಬೃಹತ್ ಮೊತ್ತ ಕಲೆ ಹಾಕಿತ್ತು.

ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!

224ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ್ದ ರಾಜಸ್ಥಾನಕ್ಕೆ ಉತ್ತಮ ಆರಂಭ ದೊರೆಯದಿದ್ದರೂ ನಾಯಕ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಗೆಲುವಿನ ಭರವಸೆ ಮೂಡಿಸಿದ್ದರು. ಸ್ಮಿತ್ 27 ಎಸೆತಗಳಲ್ಲಿ 50ರನ್, ಸಂಜು 42 ಎಸೆತಗಳಲ್ಲಿ 85ರನ್(4 ಬೌಂಡರಿ, 7ಸಿಕ್ಸರ್) ಬಾರಿಸಿದ್ದರು.

ಆದರೆ, ಬಟ್ಲರ್, ಸ್ಮಿತ್ ನಂತರ ತೇವಾಟಿಯಾ ವಿಕೆಟ್ ಪಡೆಯಲು ಪಂಜಾಬ್ ತಂಡ ಹೆಣಗಾಡಿತು. ಈ ಸಂದರ್ಭದಲ್ಲಿ ಸ್ಪಿನ್ ದಾಳಿಯನ್ನು ಸೂಕ್ತವಾಗಿ ಕೆಎಲ್ ರಾಹುಲ್ ಬಳಸಿಕೊಳ್ಳಬಹುದಾಗಿತ್ತು ಎಂದು ಸಚಿನ್ ಹೇಳಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಸಿಕ್ಸ್ ಮಳೆ ಸುರಿಯುವುದು ನಿರೀಕ್ಷಿತವಾಗಿತ್ತು

ಸಿಕ್ಸ್ ಮಳೆ ಸುರಿಯುವುದು ನಿರೀಕ್ಷಿತವಾಗಿತ್ತು

ಶಾರ್ಜಾದಲ್ಲಿ ಎರಡು ಪಂದ್ಯಗಳಾಗಿದ್ದು, 51ಪ್ಲಸ್ ಸಿಕ್ಸ್ ಗಳು ಬಂದಿವೆ. ಅಬುದಾಭಿ ಹಾಗೂ ದುಬೈ ಮೈದಾನದಲ್ಲಿ 7 ಪಂದ್ಯಗಳಲ್ಲಿ 50 ಸಿಕ್ಸರ್ ಸಿಡಿದಿಲ್ಲ. ಹೀಗಾಗಿ, ಯಾರಾದ್ರೂ ಬ್ಯಾಟ್ಸ್ ಮನ್ ಕೊನೆ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಹುದು ಎಂಬುದು ನಿರೀಕ್ಷಿತ. ಹೀಗಾಗಿ, ಸ್ಪಿನ್ ದಾಳಿಯನ್ನು ಸೂಕ್ತವಾಗಿ 10-15 ಓವರ್ ಗಳ ಅವಧಿಯಲ್ಲಿ ಬಳಸಿ ಎದುರಾಳಿ ತಂಡವನ್ನು ಕಟ್ಟಿ ಹಾಕಬಹುದಾಗಿತ್ತು ಎಂದು ಸಚಿನ್ ಹೇಳಿದ್ದಾರೆ.

ಮುರುಗನ್ ಅಶ್ವಿನ್ ಬಗ್ಗೆ ಸಚಿನ್

ಮುರುಗನ್ ಅಶ್ವಿನ್ ಬಗ್ಗೆ ಸಚಿನ್

ಶಾರ್ಜಾ ಪಿಚ್ ನಲ್ಲಿ ಸಿನ್ನರ್ ಗಳಿಗೆ ಅಷ್ಟು ಸಹಾಯಕವಲ್ಲ ಎಂಬ ನಂಬಿಕೆ ಇದೆ ನಿಜ. ಆದರೆ, ಮುರಗನ್ ಅಶ್ವಿನ್, ಮ್ಯಾಕ್ಸ್ ವೆಲ್(ಮೊದಲ ಎರಡು ಓವರ್), ರವಿ ಬಿಷ್ನೋಯಿ ಉತ್ತಮವಾಗಿ ಬೌಲ್ ಮಾಡಿದ್ದಾರೆ. ಮುರುಗನ್ ಅಶ್ವಿನ್ ಅವರಿಗೆ ಕೇವಲ 1.3 ನೀಡಿದ್ದೇಕೆ? 16ರನ್ ಮಾತ್ರ ಬಿಟ್ಟು ಕೊಟ್ಟಿದ್ದ ಮುರುಗನ್ ಗೆ ಕೊನೆ ಓವರ್ ಬೌಲಿಂಗ್ ಕೊಡುವ ಬದಲು ಮೊದಲೇ ಬಳಕೆ ಮಾಡಬೇಕಿತ್ತು. 2 ಓವರ್ ಬೇಕಿದ್ದಾಗ ಯಾವ ಬೌಲರ್ ಗೆ ಕೊಟ್ಟರೆ ಏನು ಎಂದಿದ್ದಾರೆ. ಮುರುಗನ್ ಕೊನೆ ಓವರ್ ನಲ್ಲೂ ರಿಯಾಬ್ ಪರಾಗ್ ವಿಕೆಟ್ ಕಿತ್ತರೂ ಟಾಮ್ ಕರನ್, ಆರ್ಚರ್ ಇನ್ನು 3 ಎಸೆತ ಬಾಕಿ ಇರುವಂತೆ ತಂಡಕ್ಕೆ ಜಯ ತಂದಿತ್ತರು.

ವೇಗಿಗಳಿಗೆ ಹೊಡೆತ ಕೊಟ್ಟ ಪಂದ್ಯ

ವೇಗಿಗಳಿಗೆ ಹೊಡೆತ ಕೊಟ್ಟ ಪಂದ್ಯ

ಶಾರ್ಜಾ ಚಿಕ್ಕ ಮೈದಾನದಲ್ಲಿ ಮೊಹಮ್ಮದ್ ಶಮಿ ಹಾಗೂ ಶೆಲ್ಡನ್ ಕಾಂಟ್ರೆಲ್ ಇಬ್ಬರು 50 ಪ್ಲಸ್ ರನ್ ಹೊಡೆಸಿಕೊಂಡರು. ಅದರಲ್ಲೂ ಕಾಟ್ರೆಲ್ ಅವರ 18ನೇ ಓವರ್ ಪಂದ್ಯದ ಗತಿ ಬದಲಾಯಿಸಿಬಿಟ್ಟಿತು. ರಾಹುಲ್ ತೇವಾಟಿಯಾ 5 ಸಿಕ್ಸರ್ ಸಿಡಿಸಿ ರಾಜಸ್ಥಾನ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಕಾಟ್ರೆಲ್ 3 ಓವರ್ ಗಳಲ್ಲಿ 52/1, ಶಮಿ 4 ಓವರ್ ಗಳಲ್ಲಿ 53/3 ಗಳಿಸಿದರು. ಮಧ್ಯಮ ವೇಗಿ ನೀಶಂ 4 ಓವರ್ ಗಳಲ್ಲಿ 40/1 ಗಳಿಸಿದರು. ಎರಡನೇ ಅವಧಿಯಲ್ಲಿ ಪಿಚ್ ತೇವಾಂಶ, ಗಾಳಿ ಯಾವುದೂ ವೇಗಿಗಳಿಗೆ ಅನುಕೂಲವಾಗಲಿಲ್ಲ.

ಉತ್ತಮ ಪಂದ್ಯ ಎಂದು ಹೊಗಳಿದ ಸಚಿನ್

ಉತ್ತಮ ಪಂದ್ಯ ಎಂದು ಹೊಗಳಿದ ಸಚಿನ್

ರಾಜಸ್ಥಾನ ರಾಯಲ್ಸ್ ತಂಡ ಸ್ಮಿತ್, ಸಂಜು, ತೇವಾಟಿಯಾ ರನ್ ಚೇಸ್ ಮೆಚ್ಚಿಕೊಂಡ ಸಚಿನ್, ತಾಳ್ಮೆಯಿಂದ ಗುರಿ ಬೆನ್ನು ಹತ್ತಿದ ರೀತಿ ಇಷ್ಟವಾಯಿತು ಎಂದಿದ್ದಾರೆ. ಪಂಜಾಬ್ ವೇಗಿಗಳು ಯಾರ್ಕರ್, ಸ್ಲೋ ಬಾಲ್ ಸರಿಯಾಗಿ ಬಳಸಲಿಲ್ಲ ಎಂದಿದ್ದಾರೆ. ಪಂಜಾಬ್ ಫೀಲ್ಡರ್ಸ್ ಅದರಲ್ಲೂ ಪೂರನ್ ಬೌಂಡರಿ ಬಳಿ ಎಗರಿ ಚೆಂಡು ತಡೆದು ಎಸೆದ ರೀತಿಯನ್ನು ಇಲ್ಲಿ ತನಕ ನಾನು ನೋಡಿಲ್ಲ, ಅದ್ಭುತ ಎಂದು ಸಚಿನ್ ಬಣ್ಣಿಸಿದ್ದಾರೆ.

Story first published: Monday, September 28, 2020, 15:18 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X