ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಐಪಿಎಲ್ ಇತಿಹಾಸದಲ್ಲಿ ಮಿಂಚಿನಂತೆ ಶತಕ ಸಿಡಿಸಿದ ಟಾಪ್ 5 ಆಟಗಾರರು

Ipl 2020: Top 5 Fastest Centuries In Ipl

ಐಪಿಎಲ್‌ನ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ಒಂದು ವಾರ ಮಾತ್ರ. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಯುಎಇಗೆ ಸ್ಥಳಾಂತರವಾಗಿದೆ. ಸಾಂಕ್ರಾಕ್ರಾಮಿಕ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ನೇರವಾಗಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಅದೇನೇ ಇದ್ದರೂ ಕ್ರಿಕೆಟ್‌ನ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಹಾಗಾಗಿ ಆಟದ ಸಂಭ್ರಮ ಕಣ್ತುಂಬಿಕೊಳ್ಳಲು ಯಾವುದೇ ಅಡ್ಡಿಯಿಲ್ಲ.

ಐಪಿಎಲ್ ಟೂರ್ನಿಯ ಕಳೆದ 12 ಆವೃತ್ತಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಭರ್ಜರಿ ಮನರಂಜನೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯ ಮನರಂಜನೆ ಈ ಬಾರಿಯೂ ಅಭಿಮಾನಿಗಳಿಗೆ ಖಂಡಿತಾ ದೊರೆಯುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಐಪಿಎಲ್ ಇತಿಹಾಸದಲ್ಲಿ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದ ಕೆಲ ಆಟಗಾರರ ಸ್ಪೋಟಕ ಬ್ಯಾಟಿಂಗ್ ಬಗ್ಗೆ ಈ ವರದಿಯಲ್ಲಿ ನೋಡೋಣ.

ಕ್ರಿಕೆಟ್ ಸೌತ್ ಆಫ್ರಿಕಾ ಕಿತ್ತು ಹಾಕಿದ ದಕ್ಷಿಣ ಆಫ್ರಿಕಾ ಒಲಿಂಪಿಕ್ ಸಮಿತಿಕ್ರಿಕೆಟ್ ಸೌತ್ ಆಫ್ರಿಕಾ ಕಿತ್ತು ಹಾಕಿದ ದಕ್ಷಿಣ ಆಫ್ರಿಕಾ ಒಲಿಂಪಿಕ್ ಸಮಿತಿ

ಐಪಿಎಲ್ ಇತಿಹಾಸದಲ್ಲಿ ಸಾಕಷ್ಟು ಶತಕಗಳು ದಾಖಲಾಗಿದೆ. ಅತ್ಯಂತ ವೇಗವಾಗಿ ಶತಕವನ್ನು ಗಳಿಸಿದ ಟಾಪ್ 5 ಆಟಗಾರರು ಹಾಗೂ ಎದುರಿಸಿದ ಎಸೆತಗಳ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ..

1. ಕ್ರಿಸ್ ಗೇಲ್- 30 ಎಸೆತಗಳಲ್ಲಿ 100 ರನ್

1. ಕ್ರಿಸ್ ಗೇಲ್- 30 ಎಸೆತಗಳಲ್ಲಿ 100 ರನ್

ಟಿ20 ಕ್ರಿಕೆಟ್‌ನ ಅತ್ಯಂತ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಐಪಿಎಲ್ ಇತಿಹಾಸದ ಸ್ಪೋಟಕ ಶತಕಗಳಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಕೇವಲ 66 ಎಸೆತಗಳಲ್ಲಿ 175 ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗೇಲ್ ತಮ್ಮ ಶತಕವನ್ನು ಪೂರೈಸಲು ತೆಗೆದುಕೊಂಡಿದ್ದು ಕೇವಲ 30 ಎಸೆತಗಳನ್ನು ಮಾತ್ರ. 17 ಸಿಕ್ಸರ್ ಹಾಗೂ 13 ಬೌಡರಿಗಳನ್ನು ಬಾರಿಸಿದ್ದರು ಗೇಲ್. ಈ ಪಂದ್ಯದಲ್ಲಿ ಆರ್‌ಸಿಬಿ 263/5 ರನ್ ಗಳಿಸಿತ್ತು. 130 ರನ್‌ಗಳಿಂದ ಈ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಂಡಿತ್ತು.

2. ಯೂಸುಫ್ ಪಠಾಣ್- 37 ಎಸೆತಗಳಲ್ಲಿ 100 ರನ್

2. ಯೂಸುಫ್ ಪಠಾಣ್- 37 ಎಸೆತಗಳಲ್ಲಿ 100 ರನ್

2010ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 212/6 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಿತ್ತು. ಇದನ್ನು ಬೆನ್ನತ್ತಿದ ಆರ್‌ಆರ್ ತಂಡ 9.2 ಓವರ್‌ಗಳಲ್ಲಿ 66/4 ಗಳಿಸಿ ಕುಂಟುತ್ತಿತ್ತು. ಆದರೆ ಬಳಿಕ ಕಣಕ್ಕಿಳಿದ ಯುಸೂಫ್ ಪಠಾಣ್ ಮೈದಾನದಲ್ಲಿ ಬಿರುಗಾಳಿಯೆಬ್ಬಿಸಿದರು. 37 ಎಸೆತಗಳಲ್ಲಿ ಶತಕವನ್ನು ಗಳಿಸಿದ ಯುಸೂಫ್ ಪಠಾಣ್ ತಂಡವನ್ನು ಗೆಲ್ಲಿಸಲು ಕಠಿಣ ಸಾಹಸ ಮಾಡಿದರಾದರೂ ಕೇವಲ 4 ರನ್‌ಗಳ ಅಂತರದಿಂದ ಶರಣಾಯಿತು.

3. ಡೇವಿಡ್ ಮಿಲ್ಲರ್- 38 ಎಸೆತಗಳಲ್ಲಿ 100 ರನ್

3. ಡೇವಿಡ್ ಮಿಲ್ಲರ್- 38 ಎಸೆತಗಳಲ್ಲಿ 100 ರನ್

ಕಿಂಗ್ಸ್ XI ಪಂಜಾಬ್ ತಂಡದ ಪರವಾಗಿ ಡೇವಿಡ್ ಮಿಲ್ಲರ್ ಸ್ಪೋಟಕ ಶತಕವನ್ನು ಬಾರಿಸಿ ಮಿಂಚಿದ್ದು 2013ರಲ್ಲಿ. ಆರ್‌ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಕೇವಲ 38 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 190 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಪಂಜಾಬ್ ಮೊದಲ 10 ಓವರ್‌ಗಳಲ್ಲಿ 64 ರನ್‌ಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಆದರೆ ಡೇವಿಡ್ ಮಿಲ್ಲರ್ ಬ್ಯಾಟಿಂಗ್‌ಗೆ ಪಂದ್ಯದ ಪಲಿತಾಂಶವನ್ನೇ ಬದಲಿಸಿ ಬಿಟ್ಟರು. ರಾಜ್‌ಗೋಪಾಲ್ ಸತೀಶ್ ಜೊತೆಗೆ ಸೇರಿಕೊಂಡ ಡೇವಿಡ್ ಮಿಲ್ಲರ್ ಮುಂದಿನ 8 ಓವರ್‌ಗಳಲ್ಲಿ 130 ರನ್ ದೋಚಿದರು. ಇನ್ನೂ ಎರಡು ಓವರ್‌ಗಳು ಉಳಿದಿರುವಂತೆಯೇ ಕಿಂಗ್ಸ್ ಜಯಭೇರಿ ಬಾರಿಸಿತು.

4. ಆಡಂ ಗಿಲ್‌ಕ್ರಿಸ್ಟ್- 42 ಎಸೆತಗಳಲ್ಲಿ 100 ರನ್

4. ಆಡಂ ಗಿಲ್‌ಕ್ರಿಸ್ಟ್- 42 ಎಸೆತಗಳಲ್ಲಿ 100 ರನ್

ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಈ ವೇಗದ ಶತಕವನ್ನು ಸಿಡಿಸಿದ ಸಾಧನೆಯನ್ನು ಗಿಲ್‌ಕ್ರಿಸ್ಟ್ ಮಾಡಿದ್ದಾರೆ. ಡಿವೈ ಪಾಟೀಲ್ ಸ್ಟೇಡಿಯಮ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಿ ಗಳಿಸಿದ್ದು ನಿಗದಿತ 20 ಓವರ್‌ಗಳಲ್ಲಿ 154/7. ಇದನ್ನು ಬೆನ್ನತ್ತಿದ ಪಂಜಾಬ್ ಗಿಲ್‌ಕ್ರಿಸ್ಟ್ ಅಬ್ಬರದ ಆಟಕ್ಕೆ ಸಾಕ್ಷಿಯಾಯಿತು. 42 ಎಸೆತಗಳಲ್ಲಿ ಗಿಲ್ಲಿ ಶತಕವನ್ನು ಸಿಡಿಸಿದರು. 9 ಬೌಂಡರಿ ಹಾಗೂ 10 ಸಿಕ್ಸರ್ ಸಿಡಿಸಿ 12 ಓವರ್‌ಗಳಲ್ಲಿ 10 ವಿಕೆಟ್‌ಗಳ ಗೆಲುವಿ ದಾಖಲಾಗಲು ಕಾರಣರಾದರು. ಗಿಲ್ಲಿಗೆ ಆರಂಭಿಕರಾಗಿ ಇನ್ನೊಂದು ತುದಿಯಲ್ಲಿ ಸಾಥ್ ನೀಡಿದ ವಿವಿಎಸ್ ಲಕ್ಷ್ಮಣ್ 26 ಎಸೆತಗಳಲ್ಲಿ 37 ರನ್ ಗಳಿಸಿದ್ದರು.

5. ಎಬಿ ಡಿವಿಲಿಯರ್ಸ್- 43 ಎಸೆತಗಳಲ್ಲಿ 100 ರನ್

5. ಎಬಿ ಡಿವಿಲಿಯರ್ಸ್- 43 ಎಸೆತಗಳಲ್ಲಿ 100 ರನ್

ಗುಜರಾತ್ ಲಯನ್ಸ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಶತಕಗಳ ನೆರವಿನಿಂದ ಆರ್‌ಸಿಬಿ 248/3 ರನ್ ಗಳಿಸಿತ್ತು. ಎಬಿಡಿ ಈ ಪಂದ್ಯದಲ್ಲಿ 52 ಎಸತಗಳಲ್ಲಿ 129 ರನ್ ಗಳಿಸಿದರು. ಇದರಲ್ಲಿ 10 ಬೌಂಡರ್ ಹಾಗೂ 12 ಸಿಕ್ಸರ್ ಒಳಗೊಂಡಿತ್ತು. ಈ ಪಂದ್ಯದಲ್ಲಿ ಶತಕವನ್ನು ಪೂರೈಸಲು ಎಬಿಡಿ ತೆಗೆದುಕೊಂಡಿದ್ದು 43 ಎಸೆತಗಳನ್ನು ಮಾತ್ರ. 248.07ರ ಸ್ಟ್ರೈಕ್‌ರೇಟ್‌ನಲ್ಲಿ ಎಬಿಡಿ ಅಬ್ಬರಿಸಿದ್ದರು. ನಾಯಕ ಕೊಹ್ಲಿ ಈ ಪಂದ್ಯದಲ್ಲಿ 55 ಎಸೆತದಲ್ಲಿ 109 ರನ್ ಗಳಿಸಿದರು.

Story first published: Saturday, September 12, 2020, 9:41 [IST]
Other articles published on Sep 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X