ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಪ್ರೇಕ್ಷಕರ ಪ್ರವೇಶದ ನಿರ್ಧಾರ ಶೀಘ್ರ ಪ್ರಕಟ: ಗಂಗೂಲಿ

Pink ball Test sold out, decision on crowds in IPL soon, says Sourav Ganguly

ಅಹ್ಮದಾಬಾದ್: ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ ನಡುವಿನ ತೃತೀಯ (ಡೇ-ನೈಟ್) ಟೆಸ್ಟ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟಭಾರತ vs ಇಂಗ್ಲೆಂಡ್: ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

ಮುಂಬರಲಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಬಗ್ಗೆಯೂ ಮಾಹಿತಿ ನೀಡಿರುವ ಸೌರವ್ ಗಂಗೂಲಿ, ಶ್ರೀಘ್ರದಲ್ಲೇ ಐಪಿಎಲ್‌ ವೇಳೆ ವೀಕ್ಷಕರಿಗೆ ಅವಕಾಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿದೆ. ಇದರಲ್ಲಿ ಮೊದಲೆರಡು ಪಂದ್ಯಗಳು 1-1ರಿಂದ ಸಮಬಲಗೊಂಡಿವೆ. ತೃತೀಯ ಪಂದ್ಯ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಿಂದ 28ರವರೆಗೆ ನಡೆಯಲಿದೆ. ಈ ವೇಳೆ 50 ಶೇ. ವೀಕ್ಷಕರಿಗೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.

ಭಾರತ vs ಇಂಗ್ಲೆಂಡ್: ಟೆಸ್ಟ್‌ ಗೆಲುವಿನಲ್ಲಿ ಟೀಮ್ ಇಂಡಿಯಾ ದಾಖಲೆಭಾರತ vs ಇಂಗ್ಲೆಂಡ್: ಟೆಸ್ಟ್‌ ಗೆಲುವಿನಲ್ಲಿ ಟೀಮ್ ಇಂಡಿಯಾ ದಾಖಲೆ

'ಈ ವರ್ಷ ಕ್ರಿಕೆಟ್ ವಿಚಾರಕ್ಕೆ ದೊಡ್ಡ ವರ್ಷವೆನಿಸಲಿದೆ. ಈ ಬಾರಿಯ ಐಪಿಎಲ್ ವೇಳೆ ಪ್ರೇಕ್ಷಕರನ್ನು ಮತ್ತೆ ಮೈದಾನಕ್ಕೆ ಕರೆತರಲಾಗುತ್ತದೆಯೇ ಎಂದು ನೋಡೋಣ. ಈ ಬಗ್ಗೆ ಅಂತಿಮ ನಿರ್ಧಾರ ಶೀಘ್ರ ಪ್ರಕಟಿಸಲಿದ್ದೇವೆ. ಒಂದಂತೂ ನಿಜ; ಈ ಬಾರಿಯದ್ದು ಮತ್ತೊಂದು ದೊಡ್ಡ ಐಪಿಎಲ್ ಟೂರ್ನಿ ಅನ್ನಿಸಲಿದೆ,' ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

Story first published: Tuesday, February 16, 2021, 22:52 [IST]
Other articles published on Feb 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X