ಚೆನ್ನೈ ತಂಡಕ್ಕೆ ಜೋಶ್ ಹೇಜಲ್‌ವುಡ್ ಬದಲಿ ಆಟಗಾರ ಎಂಟ್ರಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 14ನೇ ಆವೃತ್ತಿಗಾಗಿ ಆಸ್ಟ್ರೇಲಿಯಾದ ಮಧ್ಯಮ ವೇಗಿ ಜೋಶ್ ಹೇಜಲ್‌ವುಡ್ ಗೆ ಬದಲಾಗಿ ಆಸೀಸ್ ವೇಗಿ ಜೇಸನ್ ಬೆಹ್ರೆಂಡೋರ್ಫ್ ಅವರನ್ನು ಹೆಸರಿಸಿದೆ.
ಐಪಿಎಲ್ 2021ರ ಆವೃತ್ತಿಯಿಂದ ಜೋಶ್ ಹೇಜಲ್‌ವುಡ್ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು. ಈ ತಿಂಗಳ ಆರಂಭದಲ್ಲಿ ಹ್ಯಾಝಲ್ವುಡ್, ಐಪಿಎಲ್‌ನಿಂದ ದೂರ ಉಳಿಯುವ ನಿರ್ಧಾರ ತಿಳಿಸಿದ್ದರು. ಹೀಗಾಗಿ ಜೋಶ್ ಬದಲು ಜೇಸನ್ ಬೆಹ್ರೆಂಡೋರ್ಫ್ ಜೊತೆಗೆ ಚೆನ್ನೈ ಒಪ್ಪಂದ ಮಾಡಿಕೊಂಡಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಬೆಹ್ರೆಂಡೋರ್ಫ್, ಆಸ್ಟ್ರೇಲಿಯಾ ತಂಡದ ಪರ 11 ಏಕದಿನ ಪಂದ್ಯಗಳು, 7 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 16 ವಿಕೆಟ್‌ಗಳು ಮತ್ತು ಟಿ20ಐನಲ್ಲಿ 7 ವಿಕೆಟ್‌ಗಳನ್ನು ಹೇಜಲ್‌ವುಡ್ ಪಡೆದಿದ್ದಾರೆ. ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪಂದ್ಯ ನಡೆಯಲಿದೆ.
ಜೇಸನ್ ಬೆಹ್ರೆಂಡೋರ್ಫ್ ಐಪಿಎಲ್‌ನಲ್ಲಿ ಪ್ರತಿನಿಧಿಸುತ್ತಿರುವುದು ಇದು ಎರಡನೇ ತಂಡ. ಇದಕ್ಕೂ ಮುನ್ನ 2019ರಲ್ಲಿ ಮುಂಬೈ ಇಂಡಿಯನ್ಸ್ ಪರ ಬೆಹ್ರೆಂಡೋರ್ಫ್ ಆಡಿದ್ದರು. ಐದು ಪಂದ್ಯಗಳನ್ನಾಡಿದ್ದ ಬೆಹ್ರೆಂಡೋರ್ಫ್ 5 ವಿಕೆಟ್ ಪಡೆದಿದ್ದರು. ಬೆಹ್ರೆಂಡೋರ್ಫ್‌ಗೀಗ 30ರ ಹರೆಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications