ಐಪಿಎಲ್ 2021: ನಮ್ಮ ಆಟ ಈಗ ಶುರು; ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರಿಗೆ ಕೋಚ್ ಪಾಂಟಿಂಗ್ ಹೇಳಿದ್ದೇನು!

ಈ ಬಾರಿಯ ಐಪಿಎಲ್‌ನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಮೇಲೆ ಕಣ್ಣಿಟ್ಟಿದೆ. ನಂಬರ್ 1 ತಂಡವಾಗಿ ಪ್ಲೇಆಫ್ ಹಂತಕ್ಕೇರಿರುವ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯುವ ಗುರಿಯನ್ನು ಹೊಂದಿದೆ. ಆದರೆ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಡಿಸಿ ಆರ್‌ಸಿಬಿ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮಾಡಿದ ಎಡವಟ್ಟುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗಲು ಪಂತ್ ಹುಡುಗರು ಸಜ್ಜಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ಮಾತನಾಡಿದ್ದು ಆರ್‌ಸಿಬಿ ವಿರುದ್ಧದ ಸೋಲಿನ ಹೊರತಾಗಿಯೂ ತಂಡದಲ್ಲಿ ಸಕಾರಾತ್ಮಕ ಅಂಶಗಳು ಹೆಚ್ಚಾಗಿದೆ ಎಂದು ಆತ್ಮವಿಶ್ವಾದಿಂದ ಹೇಳಿದ್ದಾರೆ. ಆರ್‌ಸಿಬಿ ವಿರುದ್ಧ ಡೆಲ್ಲಿ ತಂಡ ಸೋಲು ಕಂಡ ಕಾರಣದಿಂದಾಗಿ ಆಟಗಾರರು ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದಿದ್ದಾರೆ.

ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿ

"ಆರ್‌ಸಿಬಿ ವಿರುದ್ಧದ ಪಂದ್ಯ ಅಂತ್ಯ ಕಂಡ ರೀತಿಯಿಂದಾಗಿ ನಾನು ಬೇಸರಗೊಂಡೆ. ಆದರೆ ನಾವು ಎಸೆಗಿದ ತಪ್ಪಿನ ಕಾರಣದಿಂದಾಗಿ ನಾವು ಸೋಲು ಕಾಣುತ್ತೇವೆ. ಹಾಗಾಗಿ ನನಗೆ ಅತೃಪ್ತಿಯಿಲ್ಲ. ಹಾಗೆ ನೋಡಿದರೆ ಆ ಸೋಲಿನಿಂದಾಗಿ ನನಗೆ ಹೆಚ್ಚಿನ ಅನುಕೂಲವಿದೆ. ನಮ್ಮ ತಮಡದ ಆಟಗಾರರು ಎಲ್ಲಿ ಎಡವಿದ್ದಾರೆ ಎಂಬುದನ್ನು ಅರಿತುಕೊಂಡು ಮುಂದಿನ ಪಂದ್ಯದಲ್ಲಿ ಸರಿಪಡಿಸಿಕೊಳ್ಳಲು ಉತ್ತಮ ಅವಕಾಶ ದೊರೆತಿದೆ" ಎಂದಿದ್ದಾರೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್.

"ಅದೊಂದು ಸಣ್ಣ ಹಿನ್ನಡೆ. ಹೀಗಾಗಿ ಅದನ್ನು ನಾವು ಮರೆತುಬಿಡಬೇಕು ಹಾಗೂ ಮುಂದಿನ ಪಂದ್ಯದ ಮೇಲೆ ಚಿತ್ತ ನೆಡಬೇಕು. ನಾನು ಈಗಾಗಲೇ ಹೇಳಿದಂತೆ ಈವರೆಗೆ ನಾವು ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದೇವೆ. ನಮ್ಮ ನಿಜವಾದ ಸವಾಲು ಈಗ ಆರಂಭವಾಗುತ್ತದೆ. ಮುಂದಿನ ಒಂದು ವಾರಗಳ ಕಾಲ ನಾವು ಅತ್ಯುತ್ತಮ ಮಟ್ಟದ ಕ್ರಿಕೆಟ್ ಆಡಬೇಕಿದೆ" ಎಂದಿದ್ದಾರೆ ಮಾಜಿ ಆಸ್ಟ್ರೇಲಿಯಾ ತಮಡದ ನಾಯಕನೂ ಆಗಿರುವ ಕ್ರಿಕೆಟಿಗ ರಿಕಿ ಪಾಂಟಿಂಗ್.

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್

ಇನ್ನು ಮೊದಕ ಕ್ವಾಲಿಫೈಯರ್‌ನಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ಆರ್‌ಸಿಬಿಗೆ ಎದುರಾಳಿಯಾಗಿರುವ ವಿಚಾರವಾಗಿಯೂ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿದೆ. ಈ ಬಾರಿಯ ಆವೃತ್ತಿಯಲ್ಲಿ ಸಿಎಸ್‌ಕೆ ತಂಡವನ್ನು ಡೆಲ್ಲಿ ಲೀಗ್ ಹಂತದ ಎರಡು ಪಂದ್ಯದಲ್ಲಿಯೂ ಸೋಲಿಸಿದೆ ಎಂದಿದ್ದಾರೆ.

"ಈ ಪಂದ್ಯಕ್ಕೂ ಮುನ್ನ ನಾವು ಉತ್ತಮವಾದ ಆತ್ಮವಿಶ್ವಾಸವನ್ನು ಹೊಂದಿದ್ದೇವೆ. ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾವು ಎರಡು ಬಾರಿ ಮಣಿಸಿದ್ದೇವೆ. ಆದರೆ ಪ್ಲೇಆಫ್ ಪಂದ್ಯಗಳು ನಿಜವಾಗಿಯೂ ವಿಭಿನ್ನವಾಗಿರುತ್ತದೆ. ನಮ್ಮ ಟೂರ್ನಮೆಂಟ್ ಈಗ ನಿಜವಾಗಿಯೂ ಆರಂಭವಾಗಿದೆ ಎಂದಿದ್ದಾರೆ ಪಾಂಟಿಂಗ್.

ಡೆಲಿ ಕ್ಯಾಪಿಟಲ್ಸ್ ಸ್ಕ್ವಾಡ್: ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮೇರ್, ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ, ವಿಷ್ಣು ವಿನೋದ್, ಕುಲ್ವಂತ್ ಖೆಜ್ರೋಲಿಯಾ, ಲಲಿತ್ ಯಾದವ್, ಪ್ರವೀಣ್ ದುಬೆ, ಬೆನ್ ಡ್ವಾರಶುಯಿಸ್, ಟಾಮ್ ಕರನ್, ಲುಕ್ಮನ್ ಮೇರಿವಾಲಾ, ಮಾರ್ಕಸ್ ಸ್ಟೊಯಿನಿಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ

ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹಜಲ್‌ವುಡ್, ಸುರೇಶ್ ರೈನಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡಾರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವಿಶ್ರೀನಿವಾಸನ್, ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ, ಕರ್ಣ್ ಶರ್ಮಾ, ಚೇತೇಶ್ವರ ಪೂಜಾರ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, October 10, 2021, 15:00 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X