ಐಪಿಎಲ್ 2021: ಫೈನಲಿಸ್ಟ್ ತಂಡಗಳ ನಾಯಕರ ಬಗ್ಗೆ ಡೇಲ್ ಸ್ಟೇಯ್ನ್ ಹೇಳಿದ್ದಿಷ್ಟು!

ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯ ಇನ್ನಷ್ಟೇ ನಡೆಯಬೇಕಿದ್ದು ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ರಾತ್ರಿ ಉತ್ತರ ದೊರೆಯಲಿದೆ. ಈ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿದೆ. ಈ ಎರಡು ಬಲಿಷ್ಠ ತಂಡಗಳ ಕಾದಾಟಕ್ಕೂ ಮುನ್ನ ಈ ಪಂದ್ಯದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದೆ. ಅನೇಕ ಕ್ರಿಕೆಟ್ ಪಂಡಿತರು ಈ ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಪಟ್ಟಿಗೆ ಈಗ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟ್ ಆಟಗಾರ ಡೇಲ್ ಸ್ಟೇಯ್ನ್ ಕೂಡ ಸೇರ್ಪಡೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇಲ್ ಸ್ಟೈನ್ ಐಪಿಎಲ್‌ನ ಫೈನಲ್ ಪಂದ್ಯಕ್ಕೂ ಮುನ್ನ ಫೈನಲ್ ಪಂದ್ಯದಲ್ಲಿ ಮುನ್ನಡೆಸುತ್ತಿರುವ ತಂಡಗಳ ನಾಯಕರ ಬಗ್ಗೆ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಮಡದ ನಾಯಕ ಎಂಎಸ್ ಧೋನಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಅವರ ಫಾರ್ಮ್ ಬಗ್ಗೆ ಸ್ಟೇಯ್ನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್

ಈ ಎರಡು ತಂಡಗಳ ನಾಯಕರು ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದಾರೆ. ಆದರೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಪ್ಲೇಆಫ್ ಪಂದ್ಯದಲ್ಲಿ ತಮ್ಮ ಹಳೇಯ ಫಾರ್ಮ್‌ಗೆ ಮರಳಿದ ಸೂಚನೆಯನ್ನು ನೀಡಿದ್ದರೆ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಮಾತ್ರ ಕಳಪೆ ಪ್ರದರ್ಶನ ಮುಂದಿವರಿಸಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆಗಿನ ಸಂವಾದದಲ್ಲಿಸ್ಟೇಯ್ನ್ ಎರಡು ತಂಡಗಳ ಇಬ್ಬರೂ ನಾಯಕರ ಕಳಪೆ ಪ್ರದರ್ಶನ ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯುವ ಸಾಧ್ಯತೆಯಿದೆ ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಈ ಎರಡು ತಂಡಗಳು ಫೈನಲ್‌ಗೆ ಪ್ರವೇಶಿಸಲು ಈ ತಂಡಗಳ ನಾಯಕತ್ವ ತಂಡಕ್ಕೆ ಸಹಾಯ ಮಾಡಿದೆ. ಆದರೆ ಟ್ರೋಫಿ ಗೆಲ್ಲಲು ಒಂದು ಪಂದ್ಯವಷ್ಟೇ ಬಾಕಿಯಿರುವಾಗ ಇದು ನಾಯಕತ್ವ ಮಾತ್ರವೇ ಅವರ ಕೈ ಹಿಡಿಯಲಿದೆಯಾ ಎಂಬುದು ಚಿಂತಿಸಬೇಕಾದ ವಿಚಾರ" ಎಂದಿದ್ದಾರೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ ಡೇಲ್ ಸ್ಟೇಯ್ನ್.

ಸಿಎಸ್‌ಕೆ ವಿರುದ್ಧ ಕೆಕೆಆರ್ ಬೆಸ್ಟ್ ಪ್ಲೇಯಿಂಗ್ XI, ಆ್ಯಂಡ್ರೆ ರಸೆಲ್ ಆಡ್ತಾರಾ?ಸಿಎಸ್‌ಕೆ ವಿರುದ್ಧ ಕೆಕೆಆರ್ ಬೆಸ್ಟ್ ಪ್ಲೇಯಿಂಗ್ XI, ಆ್ಯಂಡ್ರೆ ರಸೆಲ್ ಆಡ್ತಾರಾ?

"ಎಂಎಸ್ ಧೋನಿ ಅವರಂತಾ ಆಟಗಾರರಲ್ಲಿ ಅವರ ಶಾಸ್ತ್ರೀಯ ಆಟ ಯಾವಾಗಲೂ ಶಾಶ್ವತವಾಗಿರುತ್ತದೆ. ಕ್ವಾಲಿಫೈಯರ್ 1ರಲ್ಲಿ ಅವರ ಆಟ ಅದ್ಭುತವಾಗಿತ್ತು. ತಮ್ಮ ತಂಡವನ್ನು ಅವರು ಅಪಾಯದಿಂದ ಪರು ಮಾಡುವಲ್ಲಿ ಯಶಸ್ವಿಯಾಗಿದ್ದರು. ನನಗನಿಸುತ್ತದೆ ಅವರ ತಮ್ಮ ಲಯವನ್ನು ಕಂಡುಕೊಂಡಿದ್ದಾರೆ. ಆದರೆ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್‌ನಲ್ಲಿ ತಮ್ಮ ವೈಫಲ್ಯವನ್ನು ಮುಂದಿವರಿಸಿದ್ದಾರೆ. ಬಹುಶಃ ಕೆಕೆಆರ್ ತಮ್ಮ ಅದೃಷ್ಠವನ್ನು ನಂಬಿಕೊಂಡಂತಿದೆ" ಎಂದಿದ್ದಾರೆ ಡೇಲ್ ಸ್ಟೇಯ್ನ್.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಎಂಎಸ್ ಧೋನಿ ಈಗಾಗಲೇ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಇಯಾನ್ ಮಾರ್ಗನ್ ಈಗಲೂ ಸೀಮಿತ ಓವರ್‌ಗಳ ಮಾದರಿಯಲ್ಲಿ ಚಾಲ್ತಿಯಲ್ಲಿರುವ ಆಟಗಾರನಾಗಿದ್ದು ಇಂಗ್ಲೆಂಡ್ ತಂಡದ ನಾಯಕನಾಗಿಯೂ ಜವಾಬ್ಧಾರಿ ಹೊಂದಿದ್ದಾರೆ. ಇಯಾನ್ ಮಾರ್ಗನ್ ಇಷ್ಟು ಕಳಪೆ ಪ್ರದರ್ಶನ ನೀಡುತ್ತಿರುವುದು ಮುಂಬರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದಲೂ ಇಂಗ್ಲೆಂಡ್ ತಂಡದ ಕಳವಳಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್‌ಗೆ ಮುನ್ನ ಮಾರ್ಗನ್ ತಮ್ಮ ಲಯವನ್ನು ಕಂಡುಕೊಳ್ಳದಿದ್ದರೆ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ.

ಟಿ20 ವಿಶ್ವಕಪ್‌: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆ್ಯರನ್ ಫಿಂಚ್ ಲಭ್ಯ
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್ ಬ್ರಾವೋ, ದೀಪಕ್ ಚಹಾರ್, ಜೋಶ್ ಹಜಲ್ ವುಡ್, ಸುರೇಶ್ ರೈನಾ, ಚೇತೇಶ್ವರ ಪೂಜಾರ, ಕರ್ಣ್ ಶರ್ಮಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ

IPL ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು? RCBಗೆ ಎಷ್ಟು ಸಿಕ್ತು? | Oneindia Kannada

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ದಿನೇಶ್ ಕಾರ್ತಿಕ್ (ವಿಕೆ), ಇಯೋನ್ ಮಾರ್ಗನ್ (ಸಿ), ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕರವರ್ತಿ, ಆಂಡ್ರೆ ರಸೆಲ್, ಹರ್ಭಜನ್ ಸಿಂಗ್, ಟಿಮ್ ಸೌಥಿ, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫರ್ಟ್, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ

For Quick Alerts
ALLOW NOTIFICATIONS
For Daily Alerts
Story first published: Friday, October 15, 2021, 16:29 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X