ಐಪಿಎಲ್ 2021: ಉಳಿದ ಪಂದ್ಯಗಳಿಂದ ಹಿಂದಕ್ಕೆ ಸರಿದ ಸ್ಟಾರ್ ಆಟಗಾರರು ಇವರು!

ಬೆಂಗಳೂರು, ಆಗಸ್ಟ್ 22: ಐಪಿಎಲ್ 2021ರ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಈ ಕುತೂಹಲಕಾರಿ ಟೂರ್ನಿಯ ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಕುತೂಹಲ ಕಾತುರತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕೆಲ ತಂಡಗಳು ಈಗಾಗಲೇ ಯುಎಇಯನ್ನು ತಲುಪಿದ್ದು ಅಭ್ಯಾಸವನ್ನು ಆರಂಭಿಸಿದೆ.

ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ತಂಡಗಳ ಪ್ರಮುಖ ಆಟಗಾರರು ಭಾಗವಹಿಸುತ್ತಿಲ್ಲ. ಐಪಿಎಲ್‌ನ ಈ ಬಾರಿಯ ಆವೃತ್ತಿಯ ಮೊದಲ ಭಾಗದಲ್ಲಿ ಭಾಗವಹಿಸಿದ್ದರೂ ಉಳಿದ ಪಂದ್ಯಗಳಿಗೆ ಆಟಗಾರರು ಲಭ್ಯವಿಲ್ಲ. ಈ ಬಗ್ಗೆ ಈಗಾಗಲೇ ಕೆಲ ಪ್ರಮುಖ ಆಟಗಾರರು ಘೋಷಣೆ ಮಾಡಿದ್ದಾರೆ. ಹೀಗಾಗಿ ಆಯಾ ಸ್ಥಾನಕ್ಕೆ ಇತರೆ ಆಟಗಾರರನ್ನು ತಂಡಗಳು ಸೇರ್ಪಡೆಗೊಳಿಸುವ ಕಾರ್ಯದಲ್ಲಿ ತೊಡಗಿದ್ದು ಕೆಲ ತಂಡಗಳು ಹೊಸ ಆಟಗಾರರೊಂದಿಗೆ ಸಹಿ ಮಾಡಿಸಿಕೊಂಡರೆ ಇನ್ನೂ ಕೆಲ ತಂಡಗಳು ಆಟಗಾರರ ಹುಡುಕಾಟದಲ್ಲಿದೆ.

ಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲ

ಹಾಗಾದರೆ ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸದಿರುವ ಪ್ರಮುಖ ಆಟಗಾರರು ಯಾರು? ಮುಂದೆ ಓದಿ

ಜೋಸ್ ಬಟ್ಲರ್

ಜೋಸ್ ಬಟ್ಲರ್

ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಆಟಗಾರನಾಗಿರುವ ಜೋಸ್ ಬಟ್ಲರ್ ಈ ಅವೃತ್ತಿಯ ಮೊದಲ ಹಂತದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೆ ಎರಡನೇ ಚರನದ ಪಂದ್ಯಗಳಿಗೆ ಬಟ್ಲರ್ ಭಾಗವಹಿಸುತ್ತಿಲ್ಲ. ಇದು ರಾಜಸ್ಥಾನ್ ರಾಯಲ್ಸ್ ತಂಡಕ್ಕಾದ ದೊಡ್ಡ ಹಿನ್ನಡೆಯಾಗಿದೆ. ಜೋಸ್ ಬಟ್ಲರ್ ಹಾಗೂ ಅವರ ಪತ್ನಿ ಎರಡನೇ ಮಗಿವಿನ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ ಎರಡನೇ ಆವೃತ್ತಿಯ ಅವಧಿಯಲ್ಲಿಯೇ ಜೋಸ್ ಬಟ್ಲರ್ ಅವರ ಮಡದಿ ಲೂಯೀಸ್ ಎರಡನೇ ಮಗಿಉವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಹೀಗಾಗಿ ಬಟ್ಲರ್ ಐಪಿಎಲ್‌ನಿಂದ ಹೊರಗುಳಿದು ಕುಂಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಬಟ್ಲರ್ ಈ ಬಾರಿಯ ಐಪಿಎಲ್‌ನ ಆರಂದ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 153.01ರ ಸ್ಟ್ರೈಕ್‌ರೇಟ್‌ನಲ್ಲಿ 254 ರನ್‌ಗಳಿಸಿ ಮಿಂಚಿದ್ದರು ಬಟ್ಲರ್.

ಪ್ಯಾಟ್ ಕಮ್ಮಿನ್ಸ್

ಪ್ಯಾಟ್ ಕಮ್ಮಿನ್ಸ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಂಡದ ಪ್ರಮುಖ ಆಟಗಾರನಾಗಿ ಕಮ್ಮಿನ್ಸ್ ಗುರುತಿಸಿಕೊಂಡಿದ್ದಾರೆ. ಆದರೆ ಯುಎಇನಲ್ಲಿ ನಡೆಯಲಿರುವ ಐಪಿಎಲ್‌ನ ಉಳಿದ ಪಂದ್ಯಗಳಿಂದ ಕಮ್ಮಿನ್ಸ್ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣ ಪ್ಯಾಟ್ ಕಮಿನ್ಸ್ ದಂಪತಿ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಕಮಿನ್ಸ್ ಪತ್ನಿ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸಿದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪ್ಯಾಟ್ ಕಮ್ಮಿನ್ಸ್ ತಮ್ಮ ಅಲಭ್ಯತೆಯ ವಿಚಾರವನ್ನು ಸ್ಪಷ್ಟಪಡಿಸಿದ್ದರು.

ಆಡಂ ಜಂಪಾ

ಆಡಂ ಜಂಪಾ

ಟಿ20 ಕ್ರಿಕೆಟ್‌ನಲ್ಲಿ ಮಿಂಚಿತ್ತಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ತಮ್ಮ ಏರಿಳಿತಗಳ ಮೂಲಕ ಯಶಸ್ಸು ಸಾಧಿಸಿರುವ ಆಸ್ಟ್ರೇಲಿಯಾದ ಈ ಸ್ಪಿನ್ನರ್ ಈಗಾಗಲೇ ತಮ್ಮ ಅಲಭ್ಯತೆಯನ್ನು ಖಚಿತಪಡಿಸಿದ್ದಾರೆ. ಆಡಂ ಜಂಪಾ ಆರ್‌ಸಿಬಿ ತಂಡದ ಐಪಿಎಲ್‌ನಲ್ಲಿ ಪರವಾಗಿ ಆಡುತ್ತಿದ್ದಾರೆ.ಕೊರೊನಾವೈರಸ್‌ನಿಮದಾಗಿ ಐಪಿಎಲ್‌ನ ಈ ಬಾರಿಯ ಆವೃತ್ತಿಯ ಪಂದ್ಯಗಳು ಮುಂದೂಡಿಕೆಯಾಗುವ ಮುನ್ನವೇ ಜಂಪಾ ಐಪಿಎಲ್‌ನಿಂದ ಹೊರಗುಳಿಯುವ ಅಚ್ಚರಿಯ ನಿರ್ಧಾರ ಪ್ರಕಟಿಸಿ ತವರಿಗೆ ಮರಳಿದ್ದರು. ಆರ್‌ಸಿಬಿ ತಂಡ ಜಂಪಾ ಸ್ಥಾನಕ್ಕೆ ಈಗಾಗಲೇ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ಸೇರ್ಪಡೆಗೊಳಿಸಿದೆ.

ರಿಲೇ ಮೆರಿಡಿತ್ ಹಾಗೂ ಜೇ ರಿಚರ್ಡ್ಸನ್

ರಿಲೇ ಮೆರಿಡಿತ್ ಹಾಗೂ ಜೇ ರಿಚರ್ಡ್ಸನ್

ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ರಿಲೇ ಮೆರಿಡಿತ್ ಹಾಗೂ ಜೇ ರಿಚರ್ಡ್ಸನ್ ಕೂಡ ಈ ಬಾರಿಯ ಐಪಿಎಲ್‌ನ ಉಳಿದ ಪಮದ್ಯಗಳಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಇಬ್ಬರು ಕೂಡ ಗಾಯದಿಂದಾಗಿ ಆಡಲು ಸಮರ್ಥರಾಗಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿತ್ತು. ಪಂಜಾಬ್ ಕಿಂಗ್ಸ್ ತಂಡದಲ್ಲಿ ಈ ಇಬ್ಬರು ಆಟಗಾರರು ಕೂಡ ಸ್ಥಾನವನ್ನು ಪಡೆದುಕೊಂಡಿದ್ದರು. ಇವರ ಸ್ಥಾನಕ್ಕೆ ಪಂಜಾಬ್ ಕಿಂಗ್ಸ್ ಒಂದು ಬದಲಿ ಆಟಗಾರನ ಜೊತೆಗೆ ಸಹಿಯನ್ನು ಹಾಕಿಸಿಕೊಂಡಿದೆ. ಆಸ್ಟ್ರೇಲಿಯಾ ಮೂಲದವರೇ ಆದ ನಥನ್ ಎಲ್ಲೀಸ್ ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನೋರ್ವ ಸೂಕ್ತ ಆಟಗಾರನಿಗಾಗಿ ಪಂಜಾಬ್ ಹುಡುಕಾಟ ನಡೆಸುತ್ತಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 22, 2021, 13:32 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X