ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂರು ದೇಶ ಮೂರು ಪ್ಲಾನ್: ಐಪಿಎಲ್ ಪುನಾರಂಭಕ್ಕೆ ಬಿಸಿಸಿಐನಿಂದ ಭರ್ಜರಿ ರಣತಂತ್ರ

IPL 2021 remaining Matches cant be played in India; Report
IPL ನಡೆಸೋಕೆ ರೆಡಿಯಾಗಿ ನಿಂತ 3 ದೇಶಗಳು | Oneindia Kannada

14ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಅರ್ಧಕ್ಕೆ ಸ್ಥಗಿತವಾಗಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಪ್ರಮುಖ ಟೂರ್ನಿಗಳು ಈಗಾಗೇ ಆಯೋಜನೆಯಾಗಿರುವ ಕಾರಣ ಐಪಿಎಲ್‌ ಮುಂದುವರಿಸಲು ಸೂಕ್ತ ವೇದಿಕೆಯನ್ನು ಸೃಷ್ಟಿಸಿಕೊಳ್ಳುವುದು ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಈ ಮಧ್ಯೆ ಎಲ್ಲಿ ಆಯೋಜನೆ ಮಾಡಬೇಕು ಎಂಬುದು ಕೂಡ ಚರ್ಚೆಯ ಪ್ರಮುಖ ಅಂಶವಾಗಿದೆ.

ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಭಾರತದಲ್ಲಿಯೇ ಐಪಿಎಲ್ ಮುಂದುವರಿಸುವುದು ಅಸಂಭವ ಎನ್ನಲಾಗುತ್ತಿದೆ. ಹೀಗಾಗಿ ಬಿಸಿಸಿಐ ಮೂರು ಪ್ರಮುಖ ತಾಣಗಳನ್ನು ಐಪಿಎಲ್ ಮುಂದುವರಿಸಲು ಗುರುತಿಸಿಕೊಂಡಿದೆ. ಇವುಗಳಲ್ಲಿ ಒಂದನ್ನು ಐಪಿಎಲ್ ಮುಂದುವರಿಸಲು ಆಯ್ಕೆ ಮಾಡಿಕೊಳ್ಳಲಿದೆ.

ಐಪಿಎಲ್ ನಿಲುಗಡೆಗೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವುಐಪಿಎಲ್ ನಿಲುಗಡೆಗೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು

ಬಿಸಿಸಿಐ ಮುಂದಿದೆ ಮೂರು ಆಯ್ಕೆಗಳು

ಬಿಸಿಸಿಐ ಮುಂದಿದೆ ಮೂರು ಆಯ್ಕೆಗಳು

ಟೂರ್ನಿಯ ಮೊದಲಾರ್ಧದ ಪಂದ್ಯಗಳು ಸಂಪೂರ್ಣವಾಗಿದ್ದು ಎರಡನೇ ಹಂತದ ಪಂದ್ಯಗಳಿಗೆ ಮೂರು ದೇಶಗಳನ್ನು ಗುರುತಿಸಿಕೊಂಡಿದೆ. ಯುಎಇ, ಯುಕೆ ಮತ್ತು ಆಸ್ಟ್ರೇಲಿಯಾ ಈ ಮೂರು ರಾಷ್ಟ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಐಪಿಎಲ್ ಆಯೋಜನೆ ಮಾಡಲು ಬಿಸಿಸಿಐ ಯೋಜನೆಗಳನ್ನು ರೂಪಿಸುತ್ತಿದೆ. ಇವುಗಳ ಜೊತೆಗೆ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ಎಲ್ಲಿ ನಡೆಯುತ್ತದೆ ಎಂಬುದು ಕೂಡ ಈ ವಿಚಾರದಲ್ಲಿ ಪ್ರಮುಖ ಸಂಗತಿಯಾಗಲಿದೆ.

ಪ್ಲಾನ್ 'ಎ' ಯುಎಇ

ಪ್ಲಾನ್ 'ಎ' ಯುಎಇ

ಬಿಸಿಸಿಐನ ಮೊದಲ ಯೋಜನೆ ಯುಎಇನಲ್ಲಿ ಐಪಿಎಲ್ ಉಳಿದ ಪಂದ್ಯಗಳನ್ನು ಆಯೋಜಿಸುವುದಾಗಿದೆ. 2020ರ ಐಪಿಎಲ್‌ಅನ್ನು ಇಲ್ಲಿ ಯಶಸ್ವಿಯಾಗಿ ಆಯೋಜಿಸಿರುವುದರಿಂದ ಇದು ಸೂಕ್ತ ತಾಣ ಎನ್ನಲಾಗುತ್ತಿದೆ. ಇದು ಮುಂಬರುವ ವಿಶ್ವಕಪ್‌ಗೂ ತಾಣವಾಗುವ ಸಂಭವಿದೆ. ಹೀಗಾಗಿ ಮೊದಲಿಗೆ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಿ ನಂತರ ಟಿ20 ವಿಶ್ವಕಪ್‌ಅನ್ನು ಕೂಡ ಯುಎಇನಲ್ಲಿ ನಡೆಸುವ ಸಾಧ್ಯತೆಯಿದೆ.

ಪ್ಲಾನ್ 'ಬಿ' ಯುಕೆ

ಪ್ಲಾನ್ 'ಬಿ' ಯುಕೆ

ಬಿಸಿಸಿಐ ಮುಂದಿರುವ ಎರಡನೇ ಆಯ್ಕೆ ಯುನೈಟೆಟ್ ಕಿಂಗ್‌ಡಮ್. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಇಲ್ಲಿಯೇ ನಡೆಯಲಿದ್ದು ಅಂತ್ಯವಾದ ಬಳಿಕ ಐಪಿಎಲ್ ಉಳಿದ ಪಂದ್ಯಗಳ ಆಯೋಜನೆಗೆ ಪ್ರಶಸ್ತವಾಗಿರಲಿದೆ. ಯೂರೋಪ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ನ ತೀವ್ರತೆ ಕಡಿಮೆಯಾಗಿರುವ ಕಾರಣ ಇತರ ರಾಷ್ಟ್ರಗಳ ಆಟಗಾರರು ಕೂಡ ಆಡಲು ಉತ್ಸಾಹ ತೋರಿಸಬಹುದು.

ಪ್ಲಾನ್ 'ಸಿ' ಆಸ್ಟ್ರೇಲಿಯಾ

ಪ್ಲಾನ್ 'ಸಿ' ಆಸ್ಟ್ರೇಲಿಯಾ

ಪ್ಲಾನ್ ಸಿ ಪ್ರಕಾರ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೆ ಒಪ್ಪಂದ ಮಾಡಿಕೊಂಡು ಈ ಬಾರಿಯ ಟಿ20 ವಿಶ್ವಕಪ್‌ಅನ್ನು ಆಸ್ಟ್ರೃಲಿಯಾ ಆಯೋಜಿಸುವಂತೆ ಮಾಡುವಲ್ಲಿ ಯಶಸ್ವಿಯಾದರೆ ಐಪಿಎಲ್ ಟೂರ್ನಿ ಕೂಡ ಆಸ್ಟ್ರೇಲಿಯಾದಲ್ಲಿಯೋ ಆಯೋಜಿಸಬಹುದು. ಭಾರತ 2022ರ ಟಿ20 ವಿಶ್ವಕಪ್‌ಅನ್ನು ಭಾರತದಲ್ಲಿ ಆಯೋಜಿಸುವ ಅವಕಾಶವನ್ನು ಪಡೆದುಕೊಳ್ಳುತ್ತದೆ. ಆದರೆ ಇದಕ್ಕೆ ಆಸ್ಟ್ರೃಲಿಯಾ ಸರ್ಕಾರ ಕೂಡ ಧಾರಾಳತನವನ್ನು ತೋರಿ ಪ್ರಸಾರಕರು ಕೂಡ ಒಪ್ಪಿಗೆಯನ್ನು ಸೂಚಿಸಬೇಕಾಗುತ್ತದೆ.

Story first published: Thursday, May 6, 2021, 15:20 [IST]
Other articles published on May 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X