ರಾಜಸ್ಥಾನ್ ವಿರುದ್ಧ ಕೆಕೆಆರ್ ಎಡವಿದ್ದೆಲ್ಲಿ ಎಂದು ವಿವರಿಸಿದ ಸಂಜಯ್ ಮಂಜ್ರೇಕರ್

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೋಲಿನ ಮೇಲೆ ಸೋಲು ಕಾಣುತ್ತಿದ್ದ ಆರ್‌ಆರ್ ಬಳಗ ಈ ಬಾರಿಯ ಟೂರ್ನಿಯಲ್ಲಿ ಎರಡನೇ ಗೆಲುವಿನ ರುಚಿ ಕಂಡಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಇಯಾನ್ ಮಾರ್ಗನ್ ಬಳಗ 6 ವಿಕೆಟ್‌ಗಳಿಂದ ಹೀನಾಯವಾದ ಸೋಲು ಕಂಡಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ ಪ್ರತಿಕ್ರಿಯಿಸಿದ್ದಾರೆ. ಪವರ್‌ಪ್ಲೇಯನ್ನು ಸಮರ್ಥವಾಗಿ ಬಳಸಿಕೊಳ್ಳಲದಿರುವುದು ಕೆಕೆಆರ್ ಸೋಲಿಗೆ ಕಾರಣವಾಗಿದೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಪಂದ್ಯ ಬ್ಲಾಕ್‌ಬಸ್ಟರ್; ಪಂದ್ಯಕ್ಕೂ ಮುನ್ನ ಧೋನಿ ಬಗ್ಗೆ ಆರ್‌ಸಿಬಿ ಹೇಳಿದ್ದಿಷ್ಟು

"ಹಲವು ಪಂದ್ಯಗಳನ್ನು ಆಡಿರುವ ಕಾರಣ ಖಂಡಿತವಾಗಿಯೂ ಪಿಚ್ ನಿಧಾನಗತೊಯಿಂದ ವರ್ತಿಸುತ್ತದೆ. ಆದರೆ ಪವರ್ಪ್ಲೇ ಸಂದರ್ಭದಲಲ್ಇ ಕೆಕೆಆರ್ ಮತ್ತಷ್ಟು ರನ್‌ಗಳನ್ನು ಗಳಿಸಬಹುದಾಗಿತ್ತು. ರಾಜಸ್ಥಾನ್ ರಾಯಲ್ಸ್ ಮೊದಲ ಆರು ಓವರ್‌ಗಳಲ್ಲಿ 50 ರನ್‌ಗಳನ್ನು ಗಳಸಿತ್ತು. ಆದರೆ ಕೆಕೆಆರ್ ಆರಂಭಿಕ ಆರು ಓವರ್‌ಗಳ ಪವರ್‌ಪ್ಲೇನಲ್ಲಿ ಗಳಿಸಿದ್ದು ಖೇವಲ 22 ರನ್ ಮಾತ್ರ" ಎಂದು ಮಂಜ್ರೇಕರ್ ಹೇಳಿದ್ದಾರೆ.

"ನಿತೀಶ್ ರಾಣಾ ಹಾಗೂ ಶುಬ್ಮಲ್ ಗಿಲ್ ಇಬ್ಬರೂ ತಮ್ಮ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸಿದರು. ಇದರಿಂದಾಗಿ ಇಂತಾ ಪಿಚ್‌ನಲ್ಲಿ ಕೊಲ್ಕತ್ತಾದ ರನ್‌ಗಳಿಕೆ ನಿಧಾನವಾಯಿತು ಎಂದು ಭಾಸವಾಗುತ್ತದೆ" ಎಂದು ಸಂಜಯ್ ಮಂಜ್ರೇಕರ್ ಹೇಳಿಕೆಯನ್ನು ನೀಡಿದ್ದಾರೆ.

"ಕ್ರಿಸ್ ಮೋರಿಸ್ ಎರಡು ದಿನೇಶ್ ಕಾರ್ತಿಕ್ ಹಾಗೂ ಆಂಡ್ರೆ ರಸೆಲ್ ಅವರ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ಒದಗಿಸಿದರು. ಆದರೆ ಕೊಲ್ಕತ್ತಾ ನೈಟ್ ರಯಡರ್ಸ್‌ಗೆ ಇದಕ್ಕೂ ಮೊದಲೇ ನಿಜವಾದ ಆಘಾತವನ್ನು ಪಡೆದುಕೊಂಡಿತ್ತು. ಉನಾದ್ಕಟ್ ಹಾಗೂ ಸಕಾರಿಯಾ ಕೆಕೆಆರ್ ತಂಡವನ್ನು ಆರಂಭದಲ್ಲಿಯೇ ಹಿನ್ನೆಟ್ಟುವಂತೆ ಮಾಡಿದರು" ಎಂದು ಮಂಜ್ರೇಕರ್ ಹೇಳಿದ್ದಾರೆ.

ಐಪಿಎಲ್ 2021 : ಚೆನ್ನೈ vs ಬೆಂಗಳೂರು : ಸಂಭಾವ್ಯ ತಂಡ, ಹವಾಮಾನ, ಪಿಚ್ ರಿಪೋರ್ಟ್

ಉತ್ತಮ ಆಟಗಾರರನ್ನು ಹೊಂದಿದ್ದರೂ ಕೊಲ್ಕತ್ತಾ ನೈಟ್ ರೈಡರ್ಸ್ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದು ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, April 25, 2021, 13:31 [IST]
Other articles published on Apr 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X