IPL 2021: ಯುಎಇ ಸ್ಟೇಡಿಯಂ ಒಳಗೆ ಕೇಳಲಿದೆ ಪ್ರೇಕ್ಷಕರ ಕೇಕೆ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳ ವೇಳೆ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ನಲ್ಲಿ ನಡೆಯಲಿರುವ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳ ವೇಳೆ ಅಭಿಮಾನಿಗಳ ಕೇಕೆ, ತಪ್ಪಾಳೆ, ಚೀರಾಟ ಮತ್ತೆ ಕೇಳಿ ಬರುವ ಎಲ್ಲಾ ಸಾಧ್ಯತೆಗಳಿವೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ನಗದು ಶ್ರೀಮಂತ ಟೂರ್ನಿ ಐಪಿಎಲ್ ಶುರುವಾಗಲಿದೆ.

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ 2021ರ ವೇಳಾಪಟ್ಟಿ ಪ್ರಕಟ; ಭಾರತ vs ಪಾಕ್ ಪಂದ್ಯ ಯಾವಾಗ ಗೊತ್ತಾ?ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ 2021ರ ವೇಳಾಪಟ್ಟಿ ಪ್ರಕಟ; ಭಾರತ vs ಪಾಕ್ ಪಂದ್ಯ ಯಾವಾಗ ಗೊತ್ತಾ?

ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ನ (ಇಸಿಬಿ) ಜನರಲ್ ಸೆಕ್ರೆಟರಿ ಮುಬಾಶಿರ್ ಉಸ್ಮಾನಿ ಈ ಬಗ್ಗೆ ತಾನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತು ಯುಎಇ ಸರ್ಕಾರದ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಉಸ್ಮಾನಿ ಉತ್ಸಾಹ ನೋಡಿದರೆ, ಮುಂಬರುವ ಐಪಿಎಲ್ ದ್ವಿತೀಯ ಹಂತದ ಸ್ಪರ್ಧೆಗಳ ವೇಳೆ ಪ್ರೇಕ್ಷಕರ ಪ್ರವೇಶ ಬಹುತೇಕ ಖಚಿತವೆನಿಸಿದೆ.

ಐಸಿಸಿಯ ಗಮನಕ್ಕೂ ವಿಚಾರ ತಂದ ಇಸಿಬಿ

ಐಸಿಸಿಯ ಗಮನಕ್ಕೂ ವಿಚಾರ ತಂದ ಇಸಿಬಿ

ಮುಬಾಶಿರ್ ಉಸ್ಮಾನಿ ಹೇಳುವ ಪ್ರಕಾರ, ಪ್ರೇಕ್ಷಕರು ಸ್ಟೇಡಿಯಂಗೆ ಬರುವ ನೆಲೆಯಲ್ಲಿ ಎಲ್ಲಾ ಪ್ರಯತ್ನಗಳು ಆಗುತ್ತಿವೆ. ಇದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್, ಬಿಸಿಸಿಐ ಮತ್ತು ಯುಎಇ ಸರ್ಕಾರದ ಜೊತೆಗೆ ನಿಕಟ ಸಂಪರ್ಕದಲ್ಲಿದೆ. ಪ್ರೇಕ್ಷಕರನ್ನು ಮತ್ತೆ ಮೈದಾನಕ್ಕೆ ತರುವ ಅಗತ್ಯತೆಯನ್ನು ಪುನರ್ ಪರಿಶೀಲಿಸಲು ಇಸಿಬಿಯು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ಯ ಗಮನವನ್ನೂ ಸೆಳೆಯುತ್ತಿದೆ. ಕೋವಿಡ್-19 ಪಿಡುಗಿನ ಈ ವೇಳೆ ಮುನ್ನೆಚ್ಚರಿಕೆ ವಹಿಸೋದು ಅಗತ್ಯ ಎಂದು ಉಸ್ಮಾನಿ ಹೇಳಿದ್ದಾರೆ. ದ್ವಿತೀಯ ಹಂತದ ಐಪಿಎಲ್ ಸೆಪ್ಟೆಂಬರ್‌ 19ರಂದು ಆರಂಭಗೊಂಡು ಅಕ್ಟೋಬರ್‌ 15ರಂದು ಕೊನೆಗೊಳ್ಳಲಿದೆ. ಐಪಿಎಲ್ ಆರಂಭಿಕ ಹಂತದಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿರಲಿಲ್ಲ. ಆಗ ಪ್ರೇಕ್ಷಕರ ಬದಲು ನಕಲಿ ಸದ್ದನ್ನು ಮೈದಾನದ ಸುತ್ತಲೂ ಅಳವಡಿಸಲಾಗಿತ್ತು.

60 ಶೇಕಡಾ ಪ್ರೇಕ್ಷಕರಿಗೆ ಯುಎಇ ಗ್ರೀನ್‌ ಸಿಗ್ನಲ್

60 ಶೇಕಡಾ ಪ್ರೇಕ್ಷಕರಿಗೆ ಯುಎಇ ಗ್ರೀನ್‌ ಸಿಗ್ನಲ್

"ಆತಿಥೇಯರಾಗಿ, ಪ್ರೇಕ್ಷರಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡುವುದಕ್ಕೂ ಮುನ್ನ ಯಾವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂಬುದರ ಕುರಿತು ಅನುಮೋದನೆ ಪಡೆಯಲು ಅಧಿಕಾರಿಗಳೊಂದಿಗೆ ಇಸಿಬಿ ನಿಕಟವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಚರ್ಚಿಸಲಾಗುತ್ತಿರುವ ವಿಚಾರ ಸ್ಟೇಡಿಯಂಗೆ ವೀಕ್ಷಕರ ಪ್ರವೇಶಕ್ಕೆ ಸಂಬಂಧಿಸಿದ್ದಾಗಿದೆ. ನಾವು ಅದನ್ನು ಬಿಸಿಸಿಐ ಹಾಗೂ ಐಸಿಸಿಯೊಂದಿಗೆ ಚರ್ಚಿಸಿ ಅವರ ಪ್ರೇಕ್ಷಕರ ಅಗತ್ಯತೆಗಳನ್ನು ನಿರ್ಣಯಿಸುತ್ತೇವೆ. ಯುಎಇಯಲ್ಲಿರುವ ನಮ್ಮ ವಲಸಿಗರು ಮತ್ತು ಎಮಿರಾಟಿ ಕ್ರೀಡೆಯನ್ನು ಪ್ರೀತಿಸುವ ಅಭಿಮಾನಿಗಳು ಸ್ಟ್ಯಾಂಡ್‌ನಿಂದ ಈ ಕ್ರಮವನ್ನು ವೀಕ್ಷಿಸಬೇಕೆಂದು ನಾವು ಬಯಸುತ್ತಿದ್ದೇವೆ,"ಎಂದು ಉಸ್ಮಾನಿ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಯುಎಇ ಸರ್ಕಾರ ಐಪಿಎಲ್ ವೇಳೆ 60 ಶೇ. ವೀಕ್ಷಕರಿಗೆ ಸ್ಟೇಡಿಯಂ ಒಳಗೆ ಅನುಮತಿ ನೀಡಲು ಗ್ರೀನ್ ಸಿಗ್ನಲ್ ನೀಡಿದೆ.

Anderson ಅವರ ವಯಸ್ಸಿನ ಬಗ್ಗೆ ಬೆರಳು ಮಾಡಿದ Kohli | Oneindia Kannada
27 ದಿನಗಳ ಕಾಲ ನಡೆಯಲಿರುವ ಟೂರ್ನಿ

27 ದಿನಗಳ ಕಾಲ ನಡೆಯಲಿರುವ ಟೂರ್ನಿ

ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 17, 2021, 14:37 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X