ಐಪಿಎಲ್ 2021: ವಾರ್ನರ್ ವಿಚಾರವಾಗಿ ಪ್ರಾಂಚೈಸಿಗೆ ಬಹಿರಂಗ ಪತ್ರ ಬರೆದ ಸನ್‌ರೈಸರ್ಸ್ ಫ್ಯಾನ್ಸ್

ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಳಪೆ ಪ್ರದರ್ಶನದಿಂದಾಗಿ ಲೀಗ್ ಹಂತದಲ್ಲಿ ಕೊನೆಯ ಸ್ಥಾನವನ್ನು ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಸಂದರ್ಭದಲ್ಲಿ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್‌ರನ್ನು ಫ್ರಾಂಚೈಸಿ ನಡೆಸಿಕೊಂಡ ರೀತಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಸ್ವತಃ ಡೇವಿಡ್ ವಾರ್ನರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು ಫ್ರಾಂಚೈಸಿಗೆ ಬಹಿರಂಗವಾಗಿ ಪತ್ರವನ್ನು ಪಡೆದಿದ್ದಾರೆ. ಈ ಪತ್ರದಲ್ಲಿ ವಾರ್ನರ್ ಪರವಾಗಿ ತಮ್ಮ ಬೇಡಿಕೆಯನ್ನು ಎಸ್‌ಆರ್‌ಹೆಚ್ ಫ್ರಾಂಚೈಸಿ ಮುಂದೆ ಇಟ್ಟಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಡೇವಿಡ್ ವಾರ್ನರ್‌ರನ್ನು ನಡೆಸಿ ಕೊಂಡ ರೀತಿಯ ಬಗ್ಗೆ ಅಭಿಮಾನಿಗಳು ಕುಡ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರಕ್ಕೆ ಕಟು ಟೀಕೆಯನ್ನು ಮಾಡಿದ್ದಾರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು. ಸಾಮಾಜಿಕ ಜಾಲತಾಣದಲ್ಲಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು "ನೋ ವಾರ್ನರ್ ನೋ ಎಸ್‌ಆರ್‌ಹೆಚ್" ಎಂದು ಹ್ಯಾಶ್‌ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೆ ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖವಾಗಿದ್ದು ಮುಂದಿನ ಮೆಗಾ ಆಕ್ಷನ್‌ನಲ್ಲಿ ವಾರ್ನರ್‌ರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

ಐಪಿಎಲ್, ಕ್ವಾ.-2: ಕೋಲ್ಕತ್ತಾ vs ಡೆಲ್ಲಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್ಐಪಿಎಲ್, ಕ್ವಾ.-2: ಕೋಲ್ಕತ್ತಾ vs ಡೆಲ್ಲಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್

"ನಮ್ಮ ತಂಡದ ನಾಯಕನಾಗಿದ್ದ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರದ ಬಗ್ಗೆ ಹಾಗೂ ಆಡುವ ಬಳಗದಿಂದ ಹೊರಗಿರುವ ಬಗ್ಗೆ ವಿಚಾರವಾಗಿ ತಂಡದ ಅಭಿಮಾನಿಗಳಾದ ನಮಗೆ ಮಾಹಿತಿಯಿಲ್ಲ. ಆದರೆ ನಿರ್ವಹಣೆ ಮತ್ತು ತಮಡದ ಸಮತೋಲನದ ದೃಷ್ಠಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ"

"ಆದರೆ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿರುವ ಅತ್ಯುತ್ತಮ ಆಟಗಾರ ಆಡುವ ಬಳಗದಿಂದ ಹೊರಗುಳಿಯುವುದನ್ನು ನೋಡಲು ಅಭಿಮಾನಿಗಳಾಗಿ ನಮಗೆ ಕಠಿಣವಾದ ಸಂಗತಿಯಾಗಿದೆ. ಇಂತಾ ನಿರ್ಧಾರಗಳು ನಮ್ಮ ಯೋಜನೆಯ ಭಾಗವಾಗಿರಬಾರದಿತ್ತು. ಕಾರಣಗಳು ಏನೇ ಇರಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಾಗಿ ನಾವು ಡೇವಿಡ್ ವಾರ್ನರ್ ಅವರನ್ನು ರೀಟೈನ್ ಮಾಡಿಕೊಳ್ಳಲು ಬಯಸುತ್ತೇವೆ" ಎಂದಿದ್ದಾರೆ.

ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಸ್ಪೋರ್ಟ್ಸ್ ಟುಡೇ ಜೊತೆಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ವಾರ್ನರ್ ಕೇವಲ ನಾಲ್ಕು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ ಕಾರಣಕ್ಕಾಗಿ 8 ವರ್ಷಗಳಿಗೂ ಅಧಿಕ ಕಾಲ ತಂಡಕ್ಕಾಗಿ ತಾನು ನೀಡಿದ ಕೊಡುಗೆಯನ್ನು ಫ್ರಾಂಚೈಸಿ ಕಡೆಗಣಿಸಿತು ಎಂದು ಬೇಸರವನ್ನು ಹೊರಹಾಕಿದ್ದಾರೆ. ಅಲ್ಲದೆ ಪ್ರಾಂಚೈಸಿ ನಡೆಸಿಕೊಂಡ ರೀತಿಯ ವಿಚಾರವಾಗಿ ಕೆಲ ಉತ್ತರ ದೊರೆಯದ ಪ್ರಶ್ನೆಗಳು ತನ್ನನ್ನು ಇನ್ನೂ ಕಾಡುತ್ತಿದೆ ಎಂದು ವಾರ್ನರ್ ಹೇಳಿಕೊಂಡಿದ್ದಾರೆ. ಈ ಪ್ರಶ್ನೆಗಳಿಗೆ ಶೀಘ್ರದಲ್ಲಿಯೇ ಉತ್ತರ ದೊರೆಯಬಹುದು ಎಂದು ಕೂಡ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ ವಾರ್ನರ್.

ಈ ಸಂದರ್ಭದಲ್ಲಿ ಅವರು "ನನಗಿರುವ ಒಂದೇ ಒಂದು ಬೇಸರವೆಂದರೆ ನನ್ನನ್ನು ಯಾವ ಕಾರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ವಿವರಣೆಯನ್ನು ನೀಡಲಿಲ್ಲ. ಫಾರ್ಮ್‌ನ ಕಾರಣಕ್ಕಾಗಿಯಾಗಿದ್ದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಯಾಕೆಂದರೆ ಈ ಹಿಂದೆ ನೀಡಿದ್ದ ಪ್ರದರ್ಶನಗಳು ಪರಿಗಣನೆಗೆ ಬರುತ್ತವೆ. ಅದರಲ್ಲೂ ನೂರು ಪಂದ್ಯಗಳನ್ನಿ ಒಂದು ತಮಡಕ್ಕಾಗಿ ಆಡಿದ್ದಾಗ ಚೆನ್ನೈನಲ್ಲಿ ಆಡಿದ ಮೊದಲ ಐದು ಪಂದ್ಯಗಳ ಪೂಕಿ ನಾಲ್ಕರಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ನಾಯಕತ್ವದಿಂದ ಕಿತ್ತುಕೊಳ್ಳುತ್ತೀರಾದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಈ ಬಗ್ಗೆ ನನ್ನಲ್ಲಿನ್ನೂ ಉತ್ತರ ದೊರೆಯದ ಪ್ರಶ್ನೆಗಳಿದೆ. ಆದರೆ ಅವುಗಳನ್ನು ಬಿಟ್ಟು ನಾನು ಮುಂದುವರಿಯಬೇಕಿದೆ" ಎಂದಿದ್ದಾರೆ ಡೇವಿಡ್ ವಾರ್ನರ್.

ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ತಂಡ ತೊರೆಯುತ್ತಿರುವ ಬಗ್ಗೆ ಭಾವನಾತ್ಮಕ ಸಂದೇಶ ನೀಡಿದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ 2022ರ ಆವೃತ್ತಿಗೆ ಫ್ರಾಂಚೈಸಿ ತನ್ನನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಭಾವನೆ ನನಗೆ ಬಂದಿದೆ. ಹೀಗಾಗಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಇದು ಸರಿಯಾದ ಸಮಯ ಎನಿಸಿತ್ತು. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ನಾನು ಈ ಬಗ್ಗೆ ಹಂಚಿಕೊಂಡಿದ್ದೇನೆ ಎಂದು ವಾರ್ನರ್ ವಿವರಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಬಹುತೇಕ ಎಲ್ಲಾ ಬ್ಯಾಟಿಂಗ್ ದಾಖಲೆಗಳನ್ನು ಕೂಡ ಡೇವಿಡ್ ವಾರ್ನರ್ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಯಶಸ್ವೀ ನಾಯಕರ ಪಟ್ಟಿಗೂ ಸೇರಿಕೊಂಡಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಿದ್ದ ಹೈದರಾಬಾದ್ ಮೂರನೇ ಸ್ಥಾನ ಪಡೆದು ಮಿಂಚಿತ್ತು. ಆದರೆ ಈ ಬಾರಿ ಲೀಗ್ ಹಂತದಲ್ಲಿ ಕೊನೆಯ ಸ್ಥಾನ ಪಡೆದು ಹೊರಬಿದ್ದಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 13 - October 23 2021, 03:30 PM
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, October 13, 2021, 20:00 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X