ಐಪಿಎಲ್ 2021: ದುಬೈ ತಲುಪಿ ಹೊಟೇಲ್ ಬಾಲ್ಕನಿಯ ಸುಂದರ ಫೋಟೋ ಹಂಚಿಕೊಂಡ ಸುರೇಶ್ ರೈನಾ

ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದಾಗಿ ಅರ್ಧದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 29 ಪಂದ್ಯಗಳು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ಮುಗಿದ ನಂತರ ವಿವಿಧ ತಂಡಗಳ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದಾಗಿ ಎಚ್ಚೆತ್ತ ಬಿಸಿಸಿಐ ತಾತ್ಕಾಲಿಕವಾಗಿ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು.

ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!

ನಂತರದ ದಿನಗಳಲ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೂ ಮುನ್ನವೇ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯುಎಇಯಲ್ಲಿ ಮುಂದುವರೆಸಲು ತೀರ್ಮಾನಿಸಿತು. ಹೀಗೆ ಬಿಸಿಸಿಐ ಅರ್ಧಕ್ಕೆ ಸ್ಥಗಿತಗೊಂಡಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್ 15ರವರೆಗೆ ನಡೆಸಲು ತೀರ್ಮಾನಿಸಿದೆ.

ಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿ

ಹೀಗಾಗಿ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಶುಕ್ರವಾರ ( ಆಗಸ್ಟ್ 13 ) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ದುಬೈಗೆ ಹಾರಿದ್ದಾರೆ. ಎಂ ಎಸ್ ಧೋನಿ, ಸುರೇಶ್ ರೈನಾ, ದೀಪಕ್ ಚಹರ್, ರುತುರಾಜ್ ಗಾಯಕ್ವಾಡ್ ಮತ್ತು ಕರಣ್ ಶರ್ಮಾ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಇನ್ನೂ ಹಲವಾರು ಭಾರತೀಯ ಕ್ರಿಕೆಟಿಗರು ದುಬೈ ತಲುಪಿದ್ದು ಸುರೇಶ್ ರೈನಾ ತಾವು ಉಳಿದುಕೊಂಡಿರುವ ಹೋಟೆಲ್‌ನ ಸುಂದರ ಬಾಲ್ಕನಿಯ ಚಿತ್ರವನ್ನು ಇನ್ ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.ಇನ್ನು ಇದೇ ವೇಳೆ ಸುರೇಶ್ ರೈನಾ ಇನ್ ಸ್ಟಾಗ್ರಾಂ ಸ್ಟೋರಿ ಹಾಕಿರುವ ದುಬೈ ಹೋಟೆಲ್‌ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳು ಸುರೇಶ್ ರೈನಾಗೆ ಬಾಲ್ಕನಿ ಇರುವ ಹೋಟೆಲ್ ಸಿಕ್ಕಿದ ಕಾರಣಕ್ಕೆ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಯುಎಇಯಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ಸುರೇಶ ರೈನಾ ಟೂರ್ನಿ ಆರಂಭಕ್ಕೂ ಮುನ್ನವೇ ಹೊರನಡೆದಿದ್ದರು. ಬಾಲ್ಕನಿ ಇರುವಂತಹ ಹೋಟೆಲ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಟ್ಟು ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಈ ಬಾರಿ ಟೂರ್ನಿಯ ಆರಂಭಕ್ಕೆ ಇನ್ನೂ 2 ತಿಂಗಳು ಇರುವ ಮುನ್ನವೇ ಸುಂದರ ಸಮುದ್ರ ದೃಶ್ಯ ಕಾಣುವಂತಹ ಬಾಲ್ಕನಿ ಇರುವ ಹೋಟೆಲ್ ರೂಮ್ ಸಿಕ್ಕಿರುವುದಕ್ಕೆ ನೆಟ್ಟಿಗರು ಅಂತೂ ಇಂತೂ ಬಾಲ್ಕನಿ ಇರುವ ಹೋಟೆಲ್ ಸಿಕ್ಕಿತಲ್ಲ ಎಂದು ಸುರೇಶ್ ರೈನಾರ ಕಾಲೆಳೆಯುತ್ತಿದ್ದಾರೆ.

ಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿ

ಇತ್ತ ಚೆನ್ನೈ ತಂಡ ಯುಎಇ ತಲುಪಿದ್ದರೆ ಅತ್ತ ಹಾಲಿ ಚಾಂಪಿಯನ್ಸ್ ಮುಂಬಯಿ ಇಂಡಿಯನ್ಸ್ ತಂಡದ ಕೆಲ ಆಟಗಾರರು ಸಹ ಯುಎಇಯನ್ನು ತಲುಪಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಕೆಲ ಆಟಗಾರರು ಯುಎಇ ಈ ತಲುಪಿರುವುದಾಗಿ ತಂಡದ ಪ್ರಮುಖ ಆಟಗಾರ ಇಶಾನ್ ಕಿಶನ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇನ್ನು ಚೆನ್ನೈ ತಂಡದ ಕೆಲ ಪ್ರಮುಖ ಆಟಗಾರರು ಮತ್ತು ಮುಂಬೈ ಇಂಡಿಯನ್ಸ್ ತಂಡದ ಕೆಲ ಪ್ರಮುಖ ಆಟಗಾರರು ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿರತರಾಗಿದ್ದು ಈ ಟೆಸ್ಟ್ ಸರಣಿ ಮುಗಿದ ನಂತರ ಆ ಆಟಗಾರರೂ ಸಹ ತಮ್ಮ ಐಪಿಎಲ್ ಬಳಗವನ್ನು ಸೇರಿಕೊಳ್ಳಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 21:59 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X