ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಟಿ ಕೋಟಿ ಜೇಬಿಗಿಳಿಸಿದ ಆಟಗಾರರಿಗೆ ಮುಖಭಂಗ: ಮೂಲಬೆಲೆ ಪಡೆದ ಈ 5 ಆಟಗಾರರೇ ತಂಡಗಳಿಗೆ ಆಧಾರ!

IPL 2022: 5 players who were selected base price but stunned everyone with their performances

ಈ ಬಾರಿಯ ಐಪಿಎಲ್ ಟೂರ್ನಿ ರೋಚಕ ಘಟ್ಟವನ್ನು ತಲುಪಿದ್ದು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಪ್ಲೇಆಫ್‌ಗೆ ಪ್ರವೇಶಿಸಲು ಭಾರೀ ಪೈಪೋಟಿ ನಡೆಸುತ್ತಿದೆ. ಈ ಹಂತದಲ್ಲಿ ಪ್ರತಿ ಪಂದ್ಯಗಳ ಫಲಿತಾಂಶಗಳು ಕೂಡ ಮುಖ್ಯವಾಗಿದ್ದು ಟೂರ್ನಿಯ ಕುತೂಹಲ ಹೆಚ್ಚಾಗಿದೆ. ಈ ಭಾರಿಯ ಐಪಿಎಲ್‌ನಲ್ಲಿ ಕೆಲ ತಂಡಗಳು ನಿರೀಕ್ಷಿತ ಪ್ರದರ್ಶನ ನೀಡಲುವಲ್ಲಿ ಯಶಸ್ವಿಯಾಗಿದ್ದರೂ ಕೆಲ ತಂಡಗಳು ವಿಫಲವಾಗಿದೆ. ಇಂತಾ ತಂಡಗಳು ತಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಪರಾಮರ್ಶೆಗಳನ್ನು ಕೂಡ ನಡೆಸಲು ಆರಂಭಿಸಿದೆ.

ಐಪಿಎಲ್‌ನಂತಾ ಸುದೀರ್ಘ ಮಾದರಿಯ ಲೀಗ್ ಟೂರ್ನಿಯಲ್ಲಿ ತಂಡಗಳ ಯಶಸ್ಸು ಹರಾಜು ಪ್ರಕ್ರಿಯೆಯಲ್ಲಿ ಉಪಯೋಗಿಸುವ ರಣತಂತ್ರಗಳಲ್ಲಿ ನಿರ್ಧಾರವಾಗುತ್ತದೆ. ಪ್ರತಿ ವರ್ಷ ಕೂಡ ಹರಾಜಿನಲಲ್ಲಿ ಕೆಲ ಕುತೂಹಲಕಾರಿ ಆಯ್ಕೆಗಳು ನಡೆಯುತ್ತಲೇ ಇರುತ್ತದೆ. ಕೆಲ ಆಟಗಾರರ ಮೇಲೆ ಭಾರೀ ನಿರೀಕ್ಷೆಯಿಟ್ಟು ಸಾಕಷ್ಟು ಪೈಪೋಟಿ ಎದುರಿಸಿ ಫ್ರಾಂಚೈಸಿಗಳು ದೊಡ್ಡ ಮೊತ್ತಕ್ಕೆ ಖರೀದಿಸಿದರೆ ಇನ್ನೂ ಕೆಲ ಆಟಗಾರರಿಗೆ ಹೆಚ್ಚಿನ ಪೈಪೋಟಿ ಇಲ್ಲದೆ ಮೂಲ ಬೆಲೆಗೆ ಹರಾಜಾಗುತ್ತಾರೆ. ಇದು ಐಪಿಎಲ್‌ನಂತಾ ಲೀಗ್‌ಗಳಲ್ಲಿ ಹೊಸತೇನೂ ಅಲ್ಲ.

ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ಅದರಲ್ಲಿ ಕೆಲ ಆಟಗಾರರು ಮೂಲಬೆಲೆಗೆ ಖರೀದಿಯಾದರೂ ಕೂಡ ತಮ್ಮ ಅದ್ಭುತ ಪ್ರತಿಭೆ ಮೂಲಕ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಅದೇ ರೀತಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೂಡ ಕೆಲ ಆಟಗಾರರು ಮೂಲಬೆಲೆ ಖರೀದಿಯಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಇಡೀ ತಂಡಗಳಿಗೆ ಆಸರೆಯಾಗುವಂತಾ ಪ್ರದರ್ಶನ ನೀಡುತ್ತಿದ್ದಾರೆ. ಅಂಥಾ ಐವರು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಭಾನುಕಾ ರಾಜಪಕ್ಷ, 50 ಲಕ್ಷ ರೂಪಾಯಿ

ಭಾನುಕಾ ರಾಜಪಕ್ಷ, 50 ಲಕ್ಷ ರೂಪಾಯಿ

ಕಳೆದ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರವಾಗಿ ನೀಡಿದ ಪ್ರದರ್ಶನದಿಂದಾಗಿ ಭಾನುಕಾ ರಾಜಪಕ್ಷ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹೆಚ್ಚು ಬೇಡಿಕೆ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಭಾನುಕಾ ರಾಜಪಕ್ಷ ಅವರನ್ನು ಯಾವುದೇ ಪೈಪೋಟಿಯಿಲ್ಲದೆ ಮೂಲಬೆಲೆ 50 ಲಕ್ಷ ರೂಪಾಯಿಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ಪ್ರತಿಯಾಗಿ ಭಾನುಕಾ ರಾಜಪಕ್ಷ ತಮ್ಮ ತಂಡದ ಪರವಾಗಿ ಸ್ಪೋಟಕ ಪ್ರದರ್ಶನವನ್ನು ನೀಡುತ್ತಾ ಮಿಂಚುತ್ತಿದ್ದಾರೆ. 165ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿರುವ ಭಾನುಕಾ ರಾಜಪಕ್ಷ 7 ಇನ್ನಿಂಗ್ಸ್‌ಗಳಲ್ಲಿ 201 ರನ್‌ಗಳನ್ನು ಗಳಿಸಿದ್ದಾರೆ. ಜಾನಿ ಬೈರ್‌ಸ್ಟೋವ್ ಅವರ ಆಗಮನದ ಬಳಿಕ ರಾಜಪಕ್ಷ ಆಡುವ ಬಳಗದಿಂದ ಹೊರಬಿದ್ದರೂ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಮುಕೇಶ್ ಚೌಧರಿ, 20 ಲಕ್ಷ ರೂಪಾಯಿ

ಮುಕೇಶ್ ಚೌಧರಿ, 20 ಲಕ್ಷ ರೂಪಾಯಿ

ಐಪಿಎಲ್‌ನಲ್ಲಿ ಪ್ರತಿಭಾನ್ವಿತ ಯುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಾವತ್ತೂ ಹಿಂದೆ ಬಿದ್ದಿಲ್ಲ. ಈ ಬಾರಿ ಎಡಗೈ ವೇಗಿ ಮುಕೇಶ್ ಚೌಧರಿ ಎಂಬ ಎಡಗೈ ವೇಗಿಯನ್ನು ಹರಾಜಿನಲ್ಲಿ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಗಿತ್ತು. ಟೂರ್ನಿಯ ಆರಂಭಿಕ ಹಂತದಲ್ಲಿ ಸಾಧಾರಣ ಪ್ರದರ್ಶನ ನಿಡುತ್ತಿದ್ದರೂ ಬರು ಬರುತ್ತಾ ಮುಕೇಶ್ ಚೌಧರಿ ಬೌಲಿಂಗ್‌ನಲ್ಲಿ ಅದ್ಭುತ ಬದಲಾವಣೆಗಳು ಆಗಿದೆ.

ದೀಪಕ್ ಚಾಹರ್ ಅಲಭ್ಯತೆಯಲ್ಲಿ ಬೌಲಿಂಗ್ ವಿಭಾಗದಲ್ಲಿ ಅವಕಾಶವನ್ನು ಪಡೆದುಕೊಂಡಿರುವ ಮುಕೇಶ್ ಪವರ್‌ಪ್ಲೇನಲ್ಲಿ ಮಿಂಚುತ್ತಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಅವರು 13 ವಿಎಕಟ್ ಪಡೆದುಕೊಮಡಿದ್ದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಮುಕೇಶ್ ಚೌದರಿಯನ್ನು ಸಿಎಸ್‌ಕೆ ಅವರ ಮೂಲ ಬೆಲೆ 20 ಲಕ್ಷಗಳಿಗೆ ಖರೀದಿಸಿತ್ತು. ಟೂರ್ನಿಯಲ್ಲಿ ಸಿಎಸ್‌ಕೆ ನಿರಾಸೆ ಅನುಭವಿಸಿದ್ದರೂ ಮುಕೇಶ್ ಚೌಧರಿ ನೀಡಿರುವ ಪ್ರದರ್ಶನ ಭರವಸೆ ಮೂಡಿಸಿದೆ.

ಮೊಹ್ಸಿನ್ ಖಾನ್, 20 ಲಕ್ಷ ರೂಪಾಯಿ

ಮೊಹ್ಸಿನ್ ಖಾನ್, 20 ಲಕ್ಷ ರೂಪಾಯಿ

ಐಪಿಎಲ್ 2022ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಲಿಷ್ಠ ತಂಡಗಳಲ್ಲಿ ಒಂದೆನಿಸಿದೆ. ಟೂರ್ನಿಯಲ್ಲಿ ಈವರೆಗೆ ನೀಡಿರುವ ಪ್ರದರ್ಶನದಿಂದಾಗಿ ಅಗ್ರ ಎರಡು ತಂಡಗಳಲ್ಲಿ ಒಂದಾಗಿ ಪ್ಲೇಆಫ್ ಪ್ರವೇಶಿಸಿಸುವ ಭರವಸೆ ಮೂಡಿಸಿದೆ. ಈ ತಂಡ ಕೆಲ ಯುವ ಆಟಗಾರರಿಗೆ ಅವಕಾಶವನ್ನು ನೀಡಿದ್ದು ಅದರಲ್ಲಿ ಮೊಹ್ಸಿನ್ ಖಾನ್ ಕೂಡ ಒಬ್ಬರು. ಮೊಹ್ಸೀನ್ ಖಾನ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಫ್ರಾಂಚೈಸಿ ಖರೀದಿಸಿತ್ತು.

ಈ ಎಡಗೈ ವೇಗಿ ತನಗೆ ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಆಡಿರುವ ಐದು ಪಂದ್ಯಗಳಲ್ಲಿ ಮೊಹ್ಸಿನ್ ಖಾನ್ 9 ವಿಕೆಟ್ ಪಡೆಯುವ ಮೂಲಕ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಅವರ ಎಕಾನಮಿ ರೇಟ್ 6ರನ್‌ಗಳಿಗಿಂತಲೂ ಕಡಿಮೆಯಿರುವುದು ಹುಬ್ಬೇರಿಸುವಂತೆ ಮಾಡಿದೆ. ಈ ಪ್ರದರ್ಶನ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮತ್ತಷ್ಟು ಬಲ ತುಂಬಿದೆ.

ಉಮೇಶ್ ಯಾದವ್, 2 ಕೋಟಿ ರೂಪಾಯಿ

ಉಮೇಶ್ ಯಾದವ್, 2 ಕೋಟಿ ರೂಪಾಯಿ

ಭಾರತ ಟೆಸ್ಟ್ ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಐಪಿಎಲ್‌ನ ಹರಾಜಿನಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿರಲಿಲ್ಲ. ಹೀಗಾಗಿ ಅವರನ್ನು ಕೊಂಡುಕೊಳ್ಳಲು ಯಾವುದೇ ಪೈಪೋಟಿಯಿಲ್ಲದ ಕಾರಣ ಮೂಲಬೆಲೆ 2 ಕೋಟಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಕೆಕೆಆರ್ ಈ ನಿರ್ಧಾರವನ್ನು ತೆಗೆದುಕೊಂಡಾಗ ತಂಡದ ಅಭಿಮಾನಿಗಳು ಕೂಡ ಉಮೇಶ್ ಯಾದವ್ ಮೇಲೆ ಇಷ್ಟು ಮೊತ್ತವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ ಎಂಬಂತೆ ಮಾತನಾಡಿದ್ದರು. ಆದರೆ ಐಪಿಎಲ್‌ನಲ್ಲಿ ಉಮೇಶ್ ಯಾದವ್ ಈ ಎಲ್ಲಾ ಪ್ರತಿಕ್ರಿಯೆಗಳಿಗೆ ತಮ್ಮ ಪ್ರದರ್ಶನದ ಮೂಲಕವೇ ಉತ್ತರ ನೀಡಿದ್ದಾರೆ.

ವಿದರ್ಭ ಮೂಲದ ಈ ವೇಗದ ಬೌಲರ್ ಈ ಆವೃತ್ತಿಯಲ್ಲಿ ಈವರೆಗೆ 10 ಪಂದ್ಯಗಳನ್ನು ಆಡಿದ್ದು ಇದರಲ್ಲಿ 15 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅಲ್ಲದೆ ಈ ಹಿಂದಿನ ಆವೃತ್ತಿಗಳಲ್ಲಿ ರನ್‌ಗಳನ್ನು ಬಿಟ್ಟುಕೊಡುತ್ತಿದ್ದ ಉಮೇಶ್ ಯಾದವ್ ಈ ಬಾರಿ ಅದರಲ್ಲೂ ಅದದ್ಭುತ ಯಶಸ್ಸು ಸಾಧಿಸಿದ್ದು ಅನುಭವಿ ವೇಗಿಯ ಎಸೆತಗಳನ್ನು ಎದುರಿಸಲು ಅನುಭವಿ ಆಟಗಾರರು ಕೂಡ ತಿಣುಕಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಟಿಮ್ ಸೌಥಿ, 1.50 ಕೋಟಿ ರೂಪಾಯಿ

ಟಿಮ್ ಸೌಥಿ, 1.50 ಕೋಟಿ ರೂಪಾಯಿ

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮೂಲಬೆಲೆ ಮತ್ತೋರ್ವ ಪ್ರಮುಖ ಆಟಗಾರನನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಅದು ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ಟಿಮ್ ಸೌಥಿ. ಕಿವೀಸ್‌ನ ಈ ಆಟಗಾರನಿಗೂ ಹರಾಜಿನಲ್ಲಿ ಹೆಚ್ಚು ಬೇಡಿಕೆಯಿರಲಿಲ್ಲ. ಹೀಗಾಗಿ ಮೂಲಬೆಲೆ 1.50 ಕೋಟಿ ರೂಪಾಯಿಗೆ ಕೆಕೆಆರ್ ತನ್ನ ತಂಡಕ್ಕೆ ಸೇರ್ಪಡೆಗೊಳಿಸಲು ಯಶಸ್ವಿಯಾಗಿತ್ತು. ಟಿಮ್ ಸೌಥಿ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿದ್ದು ಆಡಿರುವ 7 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 16.25 ಟಿಮ್ ಸೌಥಿ ಅವರ ಬೌಲಿಂಗ್ ಸರಾಸರಿಯಾಗಿದೆ. ಈ ಮೂಲಕ ತನ್ನ ತಂಡಕ್ಕೆ ನೆರವಾಗುತ್ತಿದ್ದಾರೆ ಈ ವೇಗಿ.

Story first published: Wednesday, May 11, 2022, 12:14 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X