ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: KKR ವಿರುದ್ಧ LSG ಗೆಲುವಿನ ನಂತರ ಬದಲಾದ ಅಂಕ ಪಟ್ಟಿ; RCB ಭವಿಷ್ಯ ಇಂದು ನಿರ್ಧಾರ

 IPL 2022: Altered Points Table, Orange Cap and Purple Cap List After LSG Win Against KKR

ಬುಧವಾರ ರಾತ್ರಿ (ಮೇ 18) ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಎರಡು ರನ್‌ಗಳ ಜಯದೊಂದಿಗೆ ಕೆಎಲ್ ರಾಹುಲ್ ಬಳಗ ಐಪಿಎಲ್ 2022ರ ತಮ್ಮ ಚೊಚ್ಚಲ ಟೂರ್ನಿಯಲ್ಲೇ ಪ್ಲೇಆಫ್ಸ್ ಸ್ಥಾನವನ್ನು ಕಾಯ್ದಿರಿಸಿದ ಎರಡನೇ ತಂಡವಾಯಿತು. ಇದಕ್ಕೂ ಮುನ್ನ ಇನ್ನೊಂದು ಹೊಸ ತಂಡ ಗುಜರಾತ್ ಟೈಟನ್ಸ್ ಪ್ಲೇಆಫ್ ಸ್ಥಾನ ಭದ್ರಪಡಿಸಕೊಂಡಿದೆ.

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ಚೇಸಿಂಗ್‌ನಲ್ಲಿ ಕೆಕೆಆರ್ ತಂಡದ ನಿತೀಶ್ ರಾಣಾ 42 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ ಗಮನಾರ್ಹ ಅರ್ಧಶತಕ ಮತ್ತು ಕೊನೆಯಲ್ಲಿ ರಿಂಕು ಸಿಂಗ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ, ಗೆಲುವು ದಕ್ಕಿಸಿಕೊಳ್ಳಲಿಲ್ಲ. ಈ ಮೊದಲು ಬ್ಯಾಟಿಂಗ್ ಮಾಡಿದ್ದ ಎಲ್‌ಎಸ್‌ಜಿ ಆರಂಭಿಕರಾದ ಕೆಎಲ್ ರಾಹುಲ್ (68*) ಮತ್ತು ಕ್ವಿಂಟನ್ ಡಿ ಕಾಕ್ (140*) ಔಟಾಗದೇ ಉಳಿದು 20 ಓವರ್‌ಗಳಲ್ಲಿ 210 ರನ್ ಗಳಿಸಿದರು.

ಕಳೆದ ವರ್ಷದ ರನ್ನರ್-ಅಪ್ ಕೋಲ್ಕತ್ತಾ ನೈಟ್ ರೈಡರ್ಸ್, ಈ ಋತುವಿನ 8ನೇ ಸೋಲಿನ ನಂತರ ಪ್ಲೇಆಫ್ ರೇಸ್‌ನಿಂದ ಹೊರಬಿತ್ತು. ಶ್ರೇಯಸ್ ಅಯ್ಯರ್ ಪಡೆ 14 ಪಂದ್ಯಗಳಿಂದ 12 ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸಿದೆ.

18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ

18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ

ಲಕ್ನೋ ಸೂಪರ್ ಜೈಂಟ್ಸ್ ಈಗ ಗುಜರಾತ್ ಟೈಟನ್ಸ್ (20) ನಂತರ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ಪ್ರಸ್ತುತ ಮೂರನೇ (16) ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ (14) ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಅವರ ನಂತರ ಆರ್‌ಸಿಬಿ 13 ಪಂದ್ಯಗಳಿಂದ ಏಳು ಗೆಲುವುಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ ಆರು, ಏಳನೇ ಸ್ಥಾನದಲ್ಲಿದ್ದರೆ, ಮಾಜಿ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿ ಅಂಕಪಟ್ಟಿಯ ಕೆಳಭಾಗದಲ್ಲಿವೆ.

5ನೇ ಸ್ಥಾನದಲ್ಲಿರುವ ಆರ್‌ಸಿಬಿ

5ನೇ ಸ್ಥಾನದಲ್ಲಿರುವ ಆರ್‌ಸಿಬಿ

ಗುರುವಾರ (ಮೇ 19) ನಡೆಯಲಿರುವ ಐಪಿಎಲ್ 2022ರ ಪಂದ್ಯ ನಂ. 67ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿಯು ಪ್ಲೇಆಫ್‌ಗೆ ಅರ್ಹತೆ ಪಡೆಯುವ ಕನಸನ್ನು ಜೀವಂತವಾಗಿಡಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಅಗತ್ಯವಿದೆ. ಏಕೆಂದರೆ ಅವರು ಪಾಯಿಂಟ್‌ಗಳ ಕೋಷ್ಟಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ ಮತ್ತು 14 ಅಂಕಗಳೊಂದಿಗೆ ಋಣಾತ್ಮಕ ನೆಟ್ ರನ್‌ರೇಟ್ -0.323 ಮತ್ತು 4ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ನೆಟ್ ರನ್‌ರೇಟ್ 0.255 ಹೊಂದಿದೆ.

ಆರೆಂಜ್ ಕ್ಯಾಪ್ ರೇಸ್ ಹೇಗಿದೆ?

ಆರೆಂಜ್ ಕ್ಯಾಪ್ ರೇಸ್ ಹೇಗಿದೆ?

ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ 13 ಪಂದ್ಯಗಳಿಂದ 627 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನ ಮೊದಲ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ 14 ಪಂದ್ಯಗಳಿಂದ 537 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಅವರದೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ಜೊತೆಗಾರ ಕ್ವಿಂಟನ್ ಡಿ ಕಾಕ್ 502 ರನ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಕೆಕೆಆರ್ ವಿರುದ್ಧ ಅಜೇಯ 140 ರನ್ ಗಳಿಸಿದ ಡಿ ಕಾಕ್ ಮೂರನೇ ಸ್ಥಾನಕ್ಕೆ ಏರಿದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಈಗ 14 ಪಂದ್ಯಗಳಿಂದ 1 ಶತಕ ಮತ್ತು 3 ಅರ್ಧಶತಕಗಳೊಂದಿಗೆ 502 ರನ್ ಗಳಿಸಿದ್ದಾರೆ. ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಇಲ್ಲಿಯವರೆಗೆ 14 ಪಂದ್ಯಗಳಿಂದ 2 ಶತಕ ಮತ್ತು 3 ಅರ್ಧಶತಕಗಳೊಂದಿಗೆ 48.82 ಸರಾಸರಿಯಲ್ಲಿ 537 ರನ್ ಗಳಿಸುವ ಮೂಲಕ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಬಯೋ ಬಬ್ಬಲ್ ಬಿಟ್ಟು ಹೊರಟ Williamson | Oneindia Kannada
ಪರ್ಪಲ್ ಕ್ಯಾಪ್ ರೇಸ್ ಹೇಗಿದೆ?

ಪರ್ಪಲ್ ಕ್ಯಾಪ್ ರೇಸ್ ಹೇಗಿದೆ?

ರಾಜಸ್ಥಾನ ರಾಯಲ್ಸ್ ತಂಡದ ಯುಜ್ವೇಂದ್ರ ಚಾಹಲ್ ಇದುವರೆಗೆ 24 ವಿಕೆಟ್‌ಗಳೊಂದಿಗೆ ವಿಕೆಟ್‌-ಟೇಕರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮುಂದುವರೆಸಿದ್ದಾರೆ. ಆರ್‌ಸಿಬಿಯ ವನಿಂದು ಹಸರಂಗಾ ಮತ್ತು ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವೇಗಿ ಉಮ್ರಾನ್ ಮಲಿಕ್ ಪ್ರಸ್ತುತ 21 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವನಿಂದು ಹಸರಂಗಾ ಇದುವರೆಗೆ 13 ಪಂದ್ಯಗಳಿಂದ 14.65 ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಹೊಂದಿದ್ದು, ಅತ್ಯುತ್ತಮ 5/18. ಪಂಜಾಬ್ ಕಿಂಗ್ಸ್ ವೇಗಿ ಕಗಿಸೊ ರಬಾಡ 12 ಪಂದ್ಯಗಳಿಂದ 22 ವಿಕೆಟ್ ಪಡೆದು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Story first published: Thursday, May 19, 2022, 19:10 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X