ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಟೀಂ ಇಂಡಿಯಾಗೆ ದಿನೇಶ್ ಕಾರ್ತಿಕ್, ತಿಲಕ್ ವರ್ಮಾ ಆಯ್ಕೆ ಸಾಧ್ಯತೆ

Dinesh karthik and tilak verma

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿಯ ದಿನೇಶ್ ಕಾರ್ತಿಕ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಿಡಲ್ ಆರ್ಡರ್ ಬ್ಯಾಟರ್ ತಿಲಕ್ ವರ್ಮಾ ಟೀಂ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಆರ್‌ಸಿಬಿ ಪರ ಇಡೀ ಸೀಸನ್‌ನಲ್ಲಿ ಉತ್ತಮ ಫಿನಿಷರ್ ಆಗಿ ಮಿಂಚುತ್ತಿರುವ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಹೇಗಾದ್ರೂ ಮಾಡಿ ಮರು ಆಯ್ಕೆಯಾಗಬೇಕೆಂದು ಬಹಳಷ್ಟು ಕಠಿಣ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್‌ನ ಯುವ ಆಟಗಾರ ತಿಲಕ್ ವರ್ಮಾ ಮುಂಬೈ ಪರ ಸ್ಥಿರ ಪ್ರದರ್ಶನ ನೀಡುತ್ತಾ ಗಮನ ಸೆಳೆದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿರುವಂತೆ ತಿಲಕ್ ವರ್ಮಾ ಸದ್ಯದಲ್ಲೇ ಟೀಂ ಇಂಡಿಯಾ ಪರ ಮೂರು ಫಾರ್ಮೆಟ್‌ನಲ್ಲಿ ಆಡಬಲ್ಲರು ಎಂದು ಭವಿಷ್ಯ ನುಡಿದಿದ್ದರು. ಇದ್ರ ಬೆನ್ನಲ್ಲೇ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ , ಕೊಹ್ಲಿ, ಬುಮ್ರಾ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುತ್ತಿರುವುದು ಕಾರ್ತಿಕ್ ಮತ್ತು ತಿಲಕ್ ವರ್ಮಾಗೆ ವರದಾನವಾಗಲಿದೆ.

IPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾIPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾ

ಐಪಿಎಲ್ 2022ರ ಋತುವಿನ ಅಂತ್ಯದ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ20 ಸರಣಿಯನ್ನು ಆಡಲಿದೆ. ನಂತರ ಅವರು ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಐರ್ಲೆಂಡ್ ವಿರುದ್ಧ ಎರಡು ಟಿ20 ಸರಣಿಗಳು ನಡೆಯಲಿದ್ದು, ಕಳೆದ ವರ್ಷ ಉಳಿದಿರುವ ಕೊನೆಯ ಟೆಸ್ಟ್ ಜೊತೆಗೆ ಸೀಮಿತ ಓವರ್‌ಗಳ ಸರಣಿಯನ್ನು ಇಂಗ್ಲೆಂಡ್‌ನಲ್ಲಿ ಆಡಲಾಗುತ್ತದೆ. ಚೇತನ್ ಶರ್ಮಾ ನೇತೃತ್ವದ ಭಾರತೀಯ ಆಯ್ಕೆ ಸಮಿತಿಯು ಮೇ 22 ರಂದು ಮೂರು ಸರಣಿಗಳಿಗೆ ಎರಡು ವಿಭಿನ್ನ ತಂಡಗಳನ್ನು ಆಯ್ಕೆ ಮಾಡಬಹುದು ಎಂದು ಪ್ರಮುಖ ಕ್ರಿಕೆಟ್ ವೆಬ್‌ಸೈಟ್ ಕ್ರಿಕೆಟ್‌ಬಜ್ ಹೇಳಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ ಮತ್ತು ಮೊಹಮ್ಮದ್ ಸಿರಾಜ್ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರವಾಸದ ನಂತರ, ಎಲ್ಲಾ ಹಿರಿಯ ಆಟಗಾರರು ಜೂನ್ 9 ರಿಂದ 19 ರವರೆಗೆ ದೆಹಲಿ, ಕಟಕ್, ವೈಜಾಗ್ ಮತ್ತು ರಾಜ್‌ಕೋಟ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ20 ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಐಪಿಎಲ್‌ನಲ್ಲಿರುವ ಸೀಮಿತ ಓವರ್‌ಗಳ ಆಟಗಾರರು ಈ ಸೀಮಿತ ಓವರ್‌ಗಳ ಸರಣಿಗೆ ಅನುಭವಿ ಆಟಗಾರರ ತಂಡವನ್ನು ಆಯ್ಕೆ ಮಾಡುತ್ತಾರೆ.

ಗುಜರಾತ್ ಟೈಟನ್ಸ್ ವಿರುದ್ಧ RCB ಗೆದ್ರೆ ಪ್ಲೇಆಫ್ ರೇಸ್ ನಿಂದ ಹೊರಬೀಳೋದು ಯಾರು? | Oneindia Kannada

ಹಾಗೇನಾದ್ರು ಆದಲ್ಲಿ ತಿಲಕ್ ವರ್ಮಾ ಜೊತೆಗೆ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ ಮತ್ತು ಅವೇಶ್ ಖಾನ್ ತಂಡದಲ್ಲಿ ಇರಲಿದ್ದಾರೆ. ತಿಲಕ್ ವರ್ಮಾ ಅವರಿಗೆ ಅವಕಾಶ ಸಿಕ್ಕರೆ ಅಂಬಟಿ ರಾಯುಡು ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯುವ ತೆಲುಗು ಆಟಗಾರ ಎನಿಸಿಕೊಳ್ಳಲಿದ್ದಾರೆ. ರಾಯುಡು ಕೊನೆಯ ಬಾರಿಗೆ 2019 ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

Story first published: Wednesday, May 18, 2022, 10:27 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X