ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿ ಹೆಚ್ಚು ರನ್‌ಗಳಿಸಿದರೂ ರಾಹುಲ್ ಎಡವಿದ್ದೆಲ್ಲಿ?: ಮನೀಶ್ ಇನ್ನಿಂಗ್ಸ್ ಉಲ್ಲೇಖಿಸಿದ ದೊಡ್ಡ ಗಣೇಶ್

IPL 2022: Dodda Ganesh critisized KL Rahul batting compared with Manish Pandey

ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಕ್ವಾಲಿಫೈಯರ್ ಹಂತದವರೆಗೂ ತಲುಪಿತ್ತು. ಆರ್‌ಸಿಬಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾಹುಲ್ ಪಡೆ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಬಹುತೇಕ ಇನ್ನಿಂಗ್ಸ್‌ನ ಅಂತ್ಯದವರೆಗೆ ಆಡಿದ್ದರೂ ತಂಡವನ್ನು ಗೆಲುವಿನ ದಡ ತಲುಪಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಹುಲ್ ಆಡಿದ ರೀತಿಯ ಬಗ್ಗೆ ಟೀಕೆಗಳು ಹರಿದು ಬಂದಿದೆ.

ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ನಡೆಸಿದ ರೀತಿಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಬ್ಯಾಟಿಂಗ್‌ನಲ್ಲಿ ಬಹುತೇಕ ಅಂತಿಮ ಹಂತದವರೆಗೆ ಬ್ಯಾಟಿಂಗ್ ನಡೆಸಿದ್ದರೂ ಎಡವಿದ್ದು ಎಲ್ಲಿ ಎಂಬುದಕ್ಕೆ ಉತ್ತಮ ಉದಾಹರಣೆಯೊಂದನ್ನು ನೀಡಿದ್ದಾರೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್.

ನಿರ್ಣಾಯಕ ಪಂದ್ಯದಲ್ಲಿ 79 ರನ್‌ಗಳಿಸಿ ಮಿಂಚಿದ ರಾಹುಲ್

ನಿರ್ಣಾಯಕ ಪಂದ್ಯದಲ್ಲಿ 79 ರನ್‌ಗಳಿಸಿ ಮಿಂಚಿದ ರಾಹುಲ್

ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 208 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ನಾಯಕ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಮಾತ್ರವೇ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಕೆಎಲ್ ರಾಹುಲ್ 58 ಎಸೆತಗಳನ್ನು ಎದುರಿಸಿ 79 ರನ್‌ಗಳನ್ನು ಬಾರಿಸಿದ್ದರು. ಮೂರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಕೆಎಲ್ ರಾಹುಲ್ ಬ್ಯಾಟ್‌ನಿಂದ ಸಿಡಿದಿದ್ದು 136ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು.

ರಾಹುಲ್ ಎಡವಿದ್ದೆಲ್ಲಿ ಎಂದು ಉದಾಹರಣೆ ಸಹಿತ ವಿವರಿಸಿದ ದೊಡ್ಡ ಗಣೇಶ್

ರಾಹುಲ್ ಎಡವಿದ್ದೆಲ್ಲಿ ಎಂದು ಉದಾಹರಣೆ ಸಹಿತ ವಿವರಿಸಿದ ದೊಡ್ಡ ಗಣೇಶ್

ಆರಂಭೀಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ತಂಡವನ್ನನು ಗೆಲುವಿನ ದಡ ಸೇರಿಸದಿರಲು ಸಾಧ್ಯವಾಗದ್ದಕ್ಕೆ ಕಾರಣವೇನೆಂದು ದೊಡ್ಡ ಗಣೇಶ್ ಉದಾಹರಣೆ ಸಹಿತ ವಿವರಿಸಿದ್ದಾರೆ. "200ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟುವ ವೇಳೆ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು 50 ಅಧಿಕ ಎಸೆತಗಳನ್ನು ನೀವು ಎದುರಿಸಿದ್ದರೆ ಆಗ ನಿಮ್ಮ ಸ್ಟ್ರೈಕ್‌ರೇಟ್ ಕನಿಷ್ಠ 160ರಷ್ಟು ಇರಬೇಕು. 2014ರ ಐಪಿಎಲ್‌ನಲ್ಲಿ ಮನೀಶ್ ಪಾಂಡೆ ಅಂಥಾ ಟಾಪ್ ಇನ್ನಿಂಗ್ಸ್ ಆಡಿದ್ದರು. ವಿಕೆಟ್ ಕಳೆದುಕೊಂಡ ಮುಂದಿನ ಎಸೆತದಲ್ಲಿಯೇ ಅವರು ಸಿಕ್ಸರ್ ಸಿಡಿಸುತ್ತಿದ್ದದ್ದನ್ನು ಮೂರು ಬಾರಿ ಆ ಪಂದ್ಯದಲ್ಲಿ ನಾನು ನೋಡಿದ್ದೇನೆ. ಆ ಆಕ್ರಮಣಕಾರಿ ಆಟ ರಾಹುಲ್ ಅವರಲ್ಲಿ ಕೊರತೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ ದೊಡ್ಡ ಗಣೇಶ್.

IPL ನಲ್ಲಿ ಯಶಸ್ವಿ ನಾಯಕನಾಗಿದ್ದಕ್ಕೆ ಹಾರ್ದಿಕ್ ಪಾಂಡ್ಯಾಗೆ ಸಿಕ್ಕೇಬಿಡ್ತು ಟೀಮ್ ಇಂಡಿಯಾ ನಾಯಕತ್ವ | OneIndia
ಈ ಆವೃತ್ತಿಯಲ್ಲೂ ರನ್ ಮಳೆ ಹರಿಸಿರುವ ರಾಹುಲ್

ಈ ಆವೃತ್ತಿಯಲ್ಲೂ ರನ್ ಮಳೆ ಹರಿಸಿರುವ ರಾಹುಲ್

ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ರನ್ ಮಳೆ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. 15 ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ ಎರಡು ಶತಕ ಹಾಗೂ ನಾಲ್ಕು ಅರ್ಧ ಶತಕ ಬಾರಿಸಿದ್ದು 616 ರನ್‌ ಬಾರಿಸಿದ್ದಾರೆ. 51ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ರಾಹುಲ್ 135.38ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿಯೂ 500ಕ್ಕೂ ಅಧಿಕ ರನ್‌ಗಳಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಸತತ ಐದು ಆವೃತ್ತಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿದ್ದಾರೆ ಕೆಎಲ್ ರಾಹುಲ್.

Story first published: Friday, May 27, 2022, 16:13 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X