ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಮ್ಮನ್ನು ಸದಾ ಕಾಲ ನೆನಪಿಟ್ಟುಕೊಳ್ಳುತ್ತೇವೆ: ಮುಂಬೈ ಇಂಡಿಯನ್ಸ್‌ಗೆ ಧನ್ಯವಾದ ತಿಳಿಸಿದ ವಿರಾಟ್ ಕೊಹ್ಲಿ

Virat kohli rcb

ಶನಿವಾರ (ಮೇ 21) ಮುಂಬೈನ ವಾಂಖೆಡೆ ಮೈದಾನದಲ್ಲಿ ಮೂರು ರೀತಿಯ ಅಭಿಮಾನಿಗಳ ಭಾವನೆಗಳಿಗೆ ಸಾಕ್ಷಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲುತ್ತಿದ್ದಂತೆ ರಿಷಭ್ ಪಂತ್ ಪಡೆ ಆಘಾತಕ್ಕೊಳಗಾದ್ರೆ, ಮುಂಬೈ ಇಂಡಿಯನ್ಸ್‌ ಸ್ವಲ್ಪ ಮಟ್ಟಿಗೆ ನಿಟ್ಟುಸಿರುವ ಬಿಟ್ಟು ಸಮಾಧಾನವಾಯಿತು ಮತ್ತು ಆರ್‌ಸಿಬಿ ತಾನೇ ಪಂದ್ಯ ಗೆದ್ದಷ್ಟು ಕುಣಿದು ಕುಪ್ಪಳಿಸಿತು.

ಹೌದು ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ಗೆದ್ದ ರೋಹಿತ್ ಪಡೆಗೆ ಫಲಿತಾಂಶ ಯಾವುದೇ ರೀತಿಯ ಮ್ಯಾಜಿಕ್ ಮಾಡದಿದ್ರೂ ಸಹ, ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಮಾಡಿಕೊಟ್ಟಿತು. ಹೀಗಾಗಿಯೇ ಈ ಪಂದ್ಯವನ್ನ ವೀಕ್ಷಿಸಲು ಕೇವಲ ಮುಂಬೈ, ಡೆಲ್ಲಿ ಅಭಿಮಾನಿಗಳಷ್ಟೇ ಅಲ್ಲದೆ ಆರ್‌ಸಿಬಿ ಅಭಿಮಾನಿಗಳು ಸಹ ಸಾಕಷ್ಟು ಕಾತುರರಾಗಿದ್ದರು.

ಅಭಿಮಾನಿಗಳಷ್ಟೇ ಅಲ್ಲದೆ ಆರ್‌ಸಿಬಿ ಸಂಪೂರ್ಣ ತಂಡ ಮತ್ತು ಸಿಬ್ಬಂದಿಗಳು ಶನಿವಾರ ರಾತ್ರಿ ಮುಂಬೈ ವರ್ಸಸ್ ಡೆಲ್ಲಿ ಪಂದ್ಯವನ್ನ ವೀಕ್ಷಿಸಿದ್ರು. ಮುಂಬೈ ಇಂಡಿಯನ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ನ ಒಂದೊಂದೇ ವಿಕೆಟ್ ಪಡೆಯುತ್ತಿದ್ದಂತೆ ಸಂಭ್ರಮಿಸುತ್ತಿದ್ರು. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಟಿಮ್ ಡೇವಿಡ್‌ರ ಒಂದೊಂದು ಹೊಡೆತಕ್ಕೂ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಆಗಿ ಸಂಭ್ರಮಿಸಿ ಕುಣಿದಾಡಿದರು.

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 160ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿತು. ಮುಂಬೈ ಪರ ಇಶಾನ್ ಕಿಶನ್ 48, ಟಿಮ್ ಡೇವಿಡ್ 11 ಎಸೆತಗಳಲ್ಲಿ 34 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳಿದ್ದವು.

ರಮಣ್‌ದೀಪ್‌ ಸಿಂಗ್ 20 ಓವರ್‌ನ ಮೊದಲ ಎಸೆತದಲ್ಲಿ ನೋ ಬಾಲ್ ಕಾರಣ ಸಿಕ್ಕ ಫ್ರೀ ಹಿಟ್‌ನಲ್ಲಿ ಬೌಂಡರಿ ಸಿಡಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಜೊತೆಗೆ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಆರ್‌ಸಿಬಿ ಪ್ಲೇಯರ್ಸ್ ಕೂಡ ಹೋಟೆಲ್‌ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದರಿಂತ ಒಟ್ಟಾಗಿ ನಿಂತು ಮುಂಬೈ ಗೆಲುವನ್ನ ಸಂಭ್ರಮಿಸಿದ್ರು.

SRH vs PBKS: ಪಂದ್ಯ ಯಾರು ಗೆಲ್ಲಬಹುದು? ಡ್ರೀಮ್ ಟೀಂ ರಚಿಸಲು ಟಿಪ್ಸ್‌, ಸಂಭಾವ್ಯ ಪ್ಲೇಯಿಂಗ್ 11SRH vs PBKS: ಪಂದ್ಯ ಯಾರು ಗೆಲ್ಲಬಹುದು? ಡ್ರೀಮ್ ಟೀಂ ರಚಿಸಲು ಟಿಪ್ಸ್‌, ಸಂಭಾವ್ಯ ಪ್ಲೇಯಿಂಗ್ 11

ಪಂದ್ಯ ಗೆಲುವಿನ ಬಳಿಕ ಆರ್‌ಸಿಬಿ ಆಟಗಾರರು ಆರ್‌ಸಿಬಿ... ಆರ್‌ಸಿಬಿ.. ಎಂದು ಜಯಘೋಷ ಹಾಕಿದ್ರು. ವಿರಾಟ್‌ ಕೊಹ್ಲಿ ಮುಂಬೈ ಇಂಡಿಯನ್ಸ್‌ಗೆ ಸಾಕಷ್ಟು ಧನ್ಯವಾದ ತಿಳಿಸಿದ್ದು, ಈ ಗೆಲುವನ್ನು ಸಾಕಷ್ಟು ಕಾಲ ನೆನಪಿಟ್ಟುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆಯಲ್ಲಿ ಕೊಹ್ಲಿ ಮುಂಬೈ ಬ್ಯಾಟರ್ ಟಿಮ್ ಡೇವಿಡ್‌ಗೆ ಧನ್ಯವಾದ ಹೇಳಿದ್ದಾರೆ.

ಕೊಹ್ಲಿ, ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್, ಸಿರಾಜ್ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಮತ್ತು ಫ್ರಾಂಚೈಸಿ ಸಿಬ್ಬಂದಿಗಳು, ಕೋಚ್‌ಗಳು ಶನಿವಾರ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶವನ್ನ ತುಂಬಾ ಸಂತೋಷದಿಂದ ಸ್ವಾಗತಿಸಿದ್ದಾರೆ. ಆರ್‌ಸಿಬಿ ಈ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಆರ್‌ಸಿಬಿ ಆಟಗಾರರ ಸಂಭ್ರಮ ಹೇಗೆ ಮನೆಮಾಡಿತ್ತು ಎಂಬುದನ್ನ ಸುಂದರ ವೀಡಿಯೋದಲ್ಲಿ ಸೆರೆಹಿಡಿದಿದೆ.

Story first published: Sunday, May 22, 2022, 13:40 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X