ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Playoff Tickets 2022: ಪ್ಲೇ ಆಫ್‌ ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

IPL 2022 Tickets

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 15ನೇ ಸೀಸನ್ ಅಂತಿಮ ಘಟ್ಟದತ್ತ ಸಾಗುತ್ತಿದ್ದು, ಪ್ಲೇ ಆಫ್ ಹಂತಕ್ಕೇರಲು ತಂಡಗಳ ನಡುವೆ ಪೈಪೋಟಿ ತೀವ್ರಗೊಂಡಿದೆ. ಗುಜರಾತ್ ಟೈಟನ್ಸ್ ಈ ಸೀಸನ್‌ನಲ್ಲಿ ಪ್ಲೇ ಆಫ್‌ಗೆ ಕ್ವಾಲಿಫೈ ಆದ ಮೊದಲ ತಂಡವಾಗಿದೆ.

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಅವಕಾಶ ಕಳೆದುಕೊಂಡಿವೆ. ಹೀಗಾಗಿ ಉಳಿದ ಏಳು ತಂಡಗಳು ಪ್ಲೇ ಆಫ್‌ಗೇರಲು ಪೈಪೋಟಿಗಿಳಿದಿವೆ. 14 ಪಾಯಿಂಟ್ಸ್ ಹೊಂದಿರುವ ತಂಡವು ಸಹ ಸದ್ಯ ಪ್ಲೇ ಆಫ್‌ಗೇರುವ ಅವಕಾಶವನ್ನು ಹೊಂದಿದೆ. ಹೀಗಾಗಿಯೇ ಸಮೀಪವಿರುವ ತಂಡಗಳಿಗೆಲ್ಲಾ ಐಪಿಎಲ್ ಪ್ಲೇ ಆಫ್ ಜ್ವರ ಹೆಚ್ಚಿದೆ.

ಕ್ವಾಲಿಫೈಯರ್ 1 ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮೇ 24ರಂದು ನಡೆಯಲಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನ ಮತ್ತು ಎರಡನೇ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯುತ್ತದೆ. ಇದರ ನಂತರದಲ್ಲಿ ಎಲಿಮಿನೇಟರ್ ಪಂದ್ಯವು ಸಹ ಮೇ 25ರಂದು ಕೊಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಮೂರು ಮತ್ತು ನಾಲ್ಕನೇ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಯಿಂದ ಹೊರಬೀಳಲಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು, ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದೊಂದಿಗೆ ಕ್ವಾಲಿಫೈಯರ್ 2ನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯವು ಮೇ 27ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಗದಿಯಾಗಿದೆ.

ಇನ್ನು ಫೈನಲ್ ಪಂದ್ಯವು ಇದೇ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದ್ದು, ಕ್ವಾಲಿಫೈಯರ್ 1 ಮತ್ತು 2ರಲ್ಲಿ ಗೆದ್ದ ತಂಡಗಳು ಐಪಿಎಲ್ 15ನೇ ಸೀಸನ್‌ನ ಟ್ರೋಫಿಗಾಗಿ ಅಖಾಡಕ್ಕಿಳಿಯಲಿವೆ. ಪ್ಲೇ ಆಫ್‌ಗಳಿಗೆ ಚಾಲನೆಯಲ್ಲಿರುವಾಗ ಫೈನಲ್‌ಗೆ ಟಿಕೆಟ್‌ಗಳು ಇನ್ನೂ ಬುಕ್ ಮಾಡಲು ಅವಕಾಶ ನೀಡಲಾಗಿಲ್ಲ.

ಐಪಿಎಲ್‌ 2022ರ ಕ್ವಾಲಿಫೈಯರ್ 1 ಮತ್ತು ಐಪಿಎಲ್ 2022ರ ಪ್ಲೇಆಫ್‌ಗಳ ಎಲಿಮಿನೇಟರ್‌ನ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಆದರೆ ಕ್ವಾಲಿಫೈಯರ್ 2 ಹಂತಗಳ ಟಿಕೆಟ್‌ಗಳು ವೇಗವಾಗಿ ಮಾರಾಟವಾಗುತ್ತಿವೆ. ಹೀಗಾಗಿ ಸ್ಟೇಡಿಯಂನಲ್ಲಿ ಹೋಗಿ ಆಟವನ್ನು ವೀಕ್ಷಿಸುವ ಅವಕಾಶವನ್ನು ಅಭಿಮಾನಿಗಳು ಕಳೆದುಕೊಳ್ಳಲು ತಯಾರಿಲ್ಲದವರು, ಮೊದಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್‌ ಕಾಯ್ದಿರಿಸಬೇಕಾಗುತ್ತದೆ. ಟಿಕೆಟ್ ದರವು 500 ರೂಪಾಯಿಯಿಂದ ಪ್ರಾರಂಭವಾಗಿ, ಐಷಾರಾಮಿ 10,000 ರೂಪಾಯಿವರೆಗೆ ಹೊಂದಿದೆ.

RCB vs GT ಗೆಲ್ಲೋದು ಯಾರು? | Oneindia Kannada

IPL 2022 ರ ಕ್ವಾಲಿಫೈಯರ್ 2ಗಾಗಿ bookmyshow.com ಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳು ಮನೆಯಿಂದಲೇ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸುತ್ತಿರುವ ಹೊರತಾಗಿಯೂ, ಅಭಿಮಾನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಒಬ್ಬ ವ್ಯಕ್ತಿಗೆ ಒಂದೇ ಟಿಕೆಟ್‌ನಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಅಲ್ಲದೆ, ಮೈದಾನಕ್ಕೆ ಪ್ರವೇಶಿಸುವಾಗ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಲಸಿಕೆ ಪ್ರಮಾಣಪತ್ರವನ್ನು ಕೊಂಡೊಯ್ಯಬೇಕಾಗುತ್ತದೆ.

Story first published: Thursday, May 19, 2022, 10:11 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X