ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನ್ನ ಆಟ ಇನ್ನೂ ಮುಗಿದಿಲ್ಲ' ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕನಿಗೆ ಅಮಿತ್‌ ಮಿಶ್ರಾ ಸಂದೇಶ

Amit mishra

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅನೇಕ ಯುವ ಆಟಗಾರರು ಹತ್ತಾರು ಕೋಟಿಗೆ ಹರಾಜಾಗಿದ್ದಾರೆ. ಒಟ್ಟು 10 ಫ್ರಾಂಚೈಸಿಗಳು ಕೆಲವು ಪ್ರಮುಖ ಆಟಗಾರರನ್ನ ಪಡೆಯಲು ಸಾಕಷ್ಟು ಬಿಡ್‌ ನಡೆಸಿದರ ಪರಿಣಾಮವೇ ಅನೇಕ ಆಟಗಾರರ ಮೊತ್ತ ಗಗನಕ್ಕೇರಿತು. ಅದ್ರಲ್ಲೂ ಮೂಲ ಬೆಲೆ 40 ಲಕ್ಷದಿಂದ 1 ಕೋಟಿ ಮೂಲ ಬೆಲೆ ಹೊಂದಿದ್ದ ಆಟಗಾರರು 10 ಕೋಟಿ ರೂಪಾಯಿ ಬಿಡ್‌ ದಾಟಲು ಸಾಧ್ಯವಾಗಿದೆ.

ಆದ್ರೆ ಇದೇ ರೀತಿಯಲ್ಲಿ ಐಪಿಎಲ್‌ ಇತಿಹಾಸದಲ್ಲಿ ಘಟಾನುಘಟಿ ಆಟಗಾರರು ಅನ್‌ಸೋಲ್ಡ್ ಆದ ಉದಾಹರಣೆಯಿದೆ. ಚೆನ್ನೈಸೂಪರ್ ಕಿಂಗ್ಸ್‌ ತಂಡದಲ್ಲಿ ಆಡಿದ್ದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ, ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದ ಐಪಿಎಲ್‌ನ ಗರಿಷ್ಠ ವಿಕೆಟ್ ಟೇಕರ್ ಅಮಿತ್ ಮಿಶ್ರಾ ಕೂಡ ಬಿಕರಿಯಾಗದೇ ಉಳಿದಿದ್ದಾರೆ.

ಅನೇಕ ಫ್ರಾಂಚೈಸಿಗಳು ಹೊಸ ತಂಡ ಕಟ್ಟುವತ್ತ ಗಮನ ಹರಿಸಿರುವ ಪರಿಣಾಮ ಅನ್‌ಕ್ಯಾಪ್ಡ್ ಆಟಗಾರರಿಗೂ ಹೆಚ್ಚಿನ ಹಣ ಕೊಟ್ಟು ಖರೀದಿಸಿದ್ದಾರೆ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್‌ನ ಅನುಭವಿ ಲೆಗ್-ಸ್ಪಿನ್ನರ್ ಅಮಿತ್ ಮಿಶ್ರಾ ಅನ್‌ ಸೋಲ್ಡ್ ಆಗಿದ್ದರು. ಮಿಶ್ರಾ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಆದರೆ ದುರದೃಷ್ಟವಶಾತ್, ಬೆಂಗಳೂರಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ಯಾವುದೇ ಫ್ರಾಂಚೈಸಿಗಳು ಕೊಂಡುಕೊಂಡಿಲ್ಲ.

ಮೆಗಾ ಹರಾಜಿನಲ್ಲಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ನಂತರ, ದೆಹಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರಾರನ್ನ ವೈಯಕ್ತಿಕವಾಗಿ ಅಭಿನಂದಿಸಿದರು ಮತ್ತು ಫ್ರಾಂಚೈಸಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಧನ್ಯವಾದ ತಿಳಿಸಿದರು. ಅಮಿತ್ ಮಿಶ್ರಾ ಅವರನ್ನು ಮರಳಿ ಪಡೆಯಲು ದೆಹಲಿ ಇಷ್ಟಪಡುತ್ತದೆ ಎಂದು ಜಿಂದಾಲ್ ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಮಿಶ್ರಾ ಡಿಸಿ ಬಾಸ್‌ಗೆ ಧನ್ಯವಾದ ಎಂದು ಹೇಳಿದ್ದಷ್ಟೇ ಅಲ್ಲದೆ, ಅಗತ್ಯವಿದ್ದಾಗ ತಂಡಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಪಾರ್ಥ್ ಜಿಂದಾಲ್ ಟ್ವೀಟ್‌ಗೆ ಉತ್ತರಿಸಿರುವ ಮಿಶ್ರಾ ತಂಡಕ್ಕಾಗಿ ಅವರು ನೀಡಿದ ಸೇವೆಗಳನ್ನು ಒಪ್ಪಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಲೆಗ್ಗಿ ತನ್ನ ಆಟ ಇನ್ನೂ ಮುಗಿದಿಲ್ಲ ಮತ್ತು ಫ್ರ್ಯಾಂಚೈಸ್‌ಗೆ ಅಗತ್ಯವಿದ್ದಲ್ಲಿ ಯಾವಾಗಲೂ ತಾನು ಸಿದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಮಿಶ್ರಾ 2008 ರಿಂದ 2010 ರವರೆಗೆ ಡೆಲ್ಲಿ ಡೇರ್‌ಡೆವಿಲ್ಸ್ ಎಂದು ಕರೆಯಲ್ಪಟ್ಟಿದ ದೆಹಲಿ ತಂಡವನ್ನ ಪ್ರತಿನಿಧಿಸಿದ್ದರು. ನಂತರ ಅವರು 2015 ರಲ್ಲಿ ಫ್ರ್ಯಾಂಚೈಸ್‌ಗೆ ಹಿಂತಿರುಗಿದರು ಮತ್ತು 2021 ರ ಋತುವಿನವರೆಗೆ ಆ ತಂಡದಲ್ಲಿ ಕಾಣಿಸಿಕೊಂಡರು. ಮಿಶ್ರಾ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. 154 ಪಂದ್ಯಗಳಿಂದ 23.97 ಸರಾಸರಿ ಮತ್ತು 7.35 ರ ಎಕಾನಮಿಯಲ್ಲಿ 166 ವಿಕೆಟ್ ಪಡೆದಿದ್ದಾರೆ. ಇವರಿಗಿಂತ ಮುಂದೆ ಕ್ರಮವಾಗಿ 167 ಮತ್ತು 170 ವಿಕೆಟ್‌ಗಳನ್ನು ಕೆರಿಬಿಯನ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಮತ್ತು ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಅವರಿದ್ದಾರೆ.

RCB Playing XI IPL 2022 : ಬಲಿಷ್ಠ ತಂಡಗಳಿಗೆ ಟಕ್ಕರ್ ಕೊಡಬಲ್ಲ ಆರ್‌ಸಿಬಿಯ ಸಂಭಾವ್ಯ ಆಡುವ ಬಳಗ ಹೇಗಿದೆ ಗೊತ್ತಾ!RCB Playing XI IPL 2022 : ಬಲಿಷ್ಠ ತಂಡಗಳಿಗೆ ಟಕ್ಕರ್ ಕೊಡಬಲ್ಲ ಆರ್‌ಸಿಬಿಯ ಸಂಭಾವ್ಯ ಆಡುವ ಬಳಗ ಹೇಗಿದೆ ಗೊತ್ತಾ!

ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಸ್ಕ್ವಾಡ್‌ 2022
ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಆಟಗಾರರ ಲಿಸ್ಟ್:
ಡೇವಿಡ್ ವಾರ್ನರ್ : 6.25 ಕೋಟಿ ರೂಪಾಯಿ
ಮಿಚೆಲ್ ಮಾರ್ಶ್ : 6.50 ಕೋಟಿ ರೂಪಾಯಿ
ಮುಸ್ತಾಫಿಜುರ್ ರೆಹಮಾನ್ : 2 ಕೋಟಿ ರೂಪಾಯಿ
ಶಾರ್ದೂಲ್ ಠಾಕೂರ್ : 10.75 ಕೋಟಿ ರೂಪಾಯಿ
ಕುಲ್ದೀಪ್ ಯಾದವ್ : 2 ಕೋಟಿ ರೂಪಾಯಿ
ಅಶ್ವಿನ್ ಹೆಬ್ಬಾರ್ : 20 ಲಕ್ಷ ರೂಪಾಯಿ
ಸರ್ಫರಾಜ್ ಖಾನ್ : 20 ಲಕ್ಷ ರೂಪಾಯಿ
ಕಮಲೇಶ್ ನಾಗರಕೋಟಿ : 1.10 ಕೋಟಿ ರೂಪಾಯಿ
ಕೆಎಸ್ ಭರತ್ : 2 ಕೋಟಿ ರೂಪಾಯಿ
ಸೈಯದ್ ಖಲೀಲ್ ಅಹಮ್ಮದ್ : 5.25 ಕೋಟಿ ರೂಪಾಯಿ
ಮನ್ದೀಪ್ ಸಿಂಗ್ : 1.10 ಕೋಟಿ ರೂಪಾಯಿ
ಲುಂಗಿಸನಿ ಎನ್‌ಗಿಡಿ : 50 ಲಕ್ಷ ರೂಪಾಯಿ
ಚೇತನ್ ಸಕಾರಿಯಾ : 4.20 ಕೋಟಿ ರೂಪಾಯಿ
ಯಶ್ ಧುಲ್ : 50 ಲಕ್ಷ ರೂಪಾಯಿ
ವಿಕ್ಕಿ ಒಸ್ಟ್‌ವಾಲ್ : 20 ಲಕ್ಷ ರೂಪಾಯಿ
ರಿಪಲ್ ಪಟೇಲ್ : 20 ಲಕ್ಷ ರೂಪಾಯಿ
ಲಲಿತ್ ಯಾದವ್ : 65 ಲಕ್ಷ ರೂಪಾಯಿ
ರೋವ್ಮನ್ ಪೊವೆಲ್ : 2.80 ಕೋಟಿ ರೂಪಾಯಿ
ಟಿಮ್ ಸೈಫರ್ಟ್ : 50 ಲಕ್ಷ ರೂಪಾಯಿ
ಪ್ರವೀನ್ ದುಬೆ : 50 ಲಕ್ಷ ರೂಪಾಯಿ

India vs WI 1st T20 Review : ಈವತ್ತು ಭಾರತದ ಬೌಲರ್ ದಾಳಿಗೆ ಎನ್ ಮಾಡ್ತಾರೆ ವೆಸ್ಟ್ ಇಂಡೀಸ್! |Oneindia Kannada

ಡೆಲ್ಲಿ ಕ್ಯಾಪಿಟಲ್ಸ್ ರೀಟೈನ್ ಆದ ಆಟಗಾರರು:
ರಿಷಪ್ ಪಂತ
ಅಕ್ಸರ್ ಪಟೇಲ್
ಪೃಥ್ವಿ ಶಾ
ಅನ್ರಿಚ್ ನೂರ್ಜೆ

Story first published: Wednesday, February 16, 2022, 17:22 [IST]
Other articles published on Feb 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X