
ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಟಗಾರ ಮ್ಯಾಥ್ಯೂ ವೇಡ್ ಅವರು ಐಪಿಎಲ್ 2022 ರ ಸೀಸನ್‌ನಲ್ಲಿ ತನ್ನ ವೈಯಕ್ತಿಕ ಪ್ರದರ್ಶನವು ಸಂತೋಷವಾಗಿಲ್ಲ ಎಂದು ಹೇಳಿದ್ದಾರೆ. ಈ ಋತುವಿನಲ್ಲಿ ಅವರ ವೈಯಕ್ತಿಕ ಆಟವು ತುಂಬಾ ಕಿರಿಕಿರಿ ಉಂಟುಮಾಡುತ್ತದೆ ಎಂದು ಅವರು ಹೇಳಿದರು.
ಈ ಋತುವಿನಲ್ಲಿ ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕ್ವಾಲಿಫೈಯರ್ 1 ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸುವ ಮೂಲಕ ಫೈನಲ್ ತಲುಪಿತು. ಭಾನುವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತೆ ಮುಖಾಮುಖಿಯಾಗಲಿದೆ. ಪಂದ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮ್ಯಾಥ್ಯೂ ವೇಡ್ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ. ಈ ಋತುವಿನ ತನ್ನ ಕಳಪೆ ಪ್ರದರ್ಶನದಿಂದಾಗಿ ತಮ್ಮ ತಂಡವು ಫೈನಲ್ ತಲುಪಿದ್ದು ಸಂತೋಷವಾಗಿಲ್ಲ ಎಂದು ಅವರು ಹೇಳಿದರು.
ಈ ಸೀಸನ್ ನನಗೆ ವೈಯಕ್ತಿಕವಾಗಿ ಕಿರಿಕಿರಿ ಉಂಟುಮಾಡುತ್ತಿದೆ. ಬ್ಯಾಟಿಂಗ್ ಸರಿಯಾಗಿ ಮಾಡದಿರುವುದು ಮುಖ್ಯ ಕಾರಣ. ಉತ್ತಮ ಹೊಡೆತಗಳ ಮೂಲಕ ಇನಿಂಗ್ಸ್ ಆರಂಭಿಸಿದರಾದರೂ ಅವುಗಳನ್ನು ಬೃಹತ್ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಿರ್ಣಾಯಕ ಕ್ವಾಲಿಫೈಯರ್-1 ಪಂದ್ಯದಲ್ಲಿ 35 ರನ್ ಗಳಿಸುವವರೆಗೂ ಉತ್ತಮ ಬ್ಯಾಟ್ಸ್‌ಮನ್‌ನಂತೆ ಕಾಣುತ್ತಿದ್ದರು. ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟವಾಡಿದರೆ ದೊಡ್ಡ ಸ್ಕೋರ್ ಕಲೆಹಾಕಲು ಸಾಧ್ಯ. ಆದ್ರೆ ನಾನು ಆ ಯೋಜನೆಯಲ್ಲಿ ನಾನು ವಿಫಲನಾದೆ. ನಿರ್ಣಾಯಕ ಫೈನಲ್‌ಗೆ ಮುನ್ನ ಸ್ವಲ್ಪ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು ಸಂತಸ ತಂದಿದೆ ಎಂದಿದ್ದಾರೆ.
ಆಟಗಾರನಾಗಿ ವಿಫಲವಾದಾಗ ನಾಯಕ ಬೆಂಬಲಿಸಬೇಕು. ಆ ನಿಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ನನಗೆ ಉತ್ತಮ ಬೆಂಬಲ ಸಿಕ್ಕಿತು. ನಮ್ಮ ತಂಡ ಮೊದಲಿನಿಂದ ಏಳನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ರಶೀದ್ ಖಾನ್ ರೂಪದಲ್ಲಿ ಏಳನೇ ಕ್ರಮಾಂಕದವರೆಗೆ ವಿಧ್ವಂಸಕ ಬ್ಯಾಟಿಂಗ್ ಹೊಂದಿದ್ದೇವೆ. ಈ ಬಾರಿಯ ಕಪ್ ಗುಜರಾತ್ ಟೈಟನ್ಸ್ ಪಾಲಾಗಲಿದೆ ಎಂದು ಮ್ಯಾಥ್ಯೂ ವೇಡ್ ಭವಿಷ್ಯ ನುಡಿದರು.
11 ವರ್ಷಗಳ ನಂತರ, ಮ್ಯಾಥ್ಯೂ ವೇಡ್ ಐಪಿಎಲ್‌ಗೆ ಮರು ಪ್ರವೇಶಿಸಿದರು. 2011ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದ ವೇಡ್ ಇದುವರೆಗೆ ಟಿ20 ಲೀಗ್‌ನಲ್ಲಿ 12 ಪಂದ್ಯಗಳನ್ನು ಆಡಿದ್ದು, ಕೇವಲ 171 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-1 ರಲ್ಲಿ 35 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿತ್ತು.